ಹಾವೇರಿ: ಕೊರೊನಾ ಮಹಾಮಾರಿಯ ಜಗತ್ತಿನಾಧ್ಯಂತ ತಲ್ಲಣ ಉಂಟುಮಾಡಿರುವ ಈಸಂದರ್ಭದಲ್ಲಿ ಪಧಾನಮಂತ್ರಿ ನರೇಂದ್ರ ಮೋದಿಯವರು ಆತ್ಮ ನಿರ್ಭರ ಅಭಿಯಾನದ ಹೆಸರಿನಲ್ಲಿ ೨೦ ಲಕ್ಷ ಕೋಟಿ ಪ್ಯಾಕೇಜ ನೀಡುವ ಮೂಲಕ ಭಾರತದ ಆರ್ಥಿಕತೆಗೆ ಹೊಸ ಚೈತನ್ಯವನ್ನು ನೀಡಿದ್ದಾರೆ ಎಂದುಜಿಲ್ಲಾ ಂಚಾಯತ್ ಮಾಜಿ ಅಧ್ಯಕ್ಷ ಪರಮೇಶ್ವರಪ್ಪ ಮೇಗಳಮನಿ ತಿಳಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿದ ಅವರು,
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ರಾಜ್ಯ ಸಚಿವರಾದ ಅನುರಾಘಸಿಂಗ್ ಠಾಕೂರ ಪತ್ರಿಕಾ ಗೋಷ್ಠಿಮೂಲಕ ೫ ಲಕ್ಷ ಕೋಟಿಗಳ ಯೋಜನೆಯನ್ನು ಜಾರಿಗೊಳಿಸಿರುವದು ಸ್ವಾಗತಾರ್ಹ. ಕರೋನಾ ಮಹಾಮಾರಿಯಿಂದ ಆರ್ಥಿಕ ಸಂಕಷ್ಟದಲ್ಲಿದ್ದ ವಿದ್ಯುತ್ ಸರಬರಾಜು ಕಂಪನಿಗಳಿಗೆ ೯೦ ಸಾವಿರ ಕೋಟಿ ಸಹಾಯ ಧನ ನೀಡುವ ಮೂಲಕ ವಿದ್ಯತ್ ಕಂಪನಿಗಳ ಶ್ರೇಯೋಭಿವೃದ್ದಿಗೆ ಒತ್ತುಕೊಡಲಾಗಿದೆ.
ಟಿ.ಡಿ.ಎಸ್. ಹಾಗೂ ಟಿ.ಸಿ.ಎಸ್.ಗಳಿಗೆ ೨೫% ವಿನಾಯಿತಿ ನೀಡಿರುವುದರಿಂದ ೫೦ ಸಾವಿರ ಕೋಟಿ ಜನರಿಗೆ ಲಾಭವಾಗಲಿದೆ. ಆತ್ಮ ನಿರ್ಭರ ಅಭಿಯಾನವು ಸಂಕಷ್ಟದಲ್ಲಿರುವ ಜನರ ಕೈ ಹಿಡಿಯುವಂತ ಹಾಗೂ ಸ್ವಾವಲಂಬನೆಗೆ ಪ್ರೋತ್ಸಾಹ ನೀಡುತ್ತಿರುವುದು ಭಾರತದ ಭವಿಷ್ಯವನ್ನು ರೂಪಿಸುವಲ್ಲಿ ಮಹತ್ತರ ಮಾತ್ರವನ್ನು ವಹಿಸಲಿದೆ ಎಂದು ಮೇಗಳಮನಿ ತಿಳಿಸಿದ್ದಾರೆ.