ಹಾವೇರಿ

ಮೂರ‍್ನಾಲ್ಕು ದಿನದಲ್ಲಿ ಮಹಾರಾಷ್ಟ್ರದಿಂದ ಹಾವೇರಿಗೆ ವಿಶೇಷ ರೈಲಿನಲ್ಲಿಆಗಮಿಸಲಿದ್ದಾರೆ ೧೨೦೦ ಪ್ರಯಾಣಿಕರು

ಹೊರ ರಾಜ್ಯದಿಂದ ಬರುವ ರೈಲ್ವೆ ಪ್ರಯಾಣಿಕರ ಸ್ವೀಕಾರಕ್ಕೆ ಸಿದ್ಧತೆ -ಅಪರ ಜಿಲ್ಲಾಧಿಕಾರಿ ಯೋಗೇಶ್ವರ

ಹಾವೇರಿ ರೈಲ್ವೆ ನಿಲ್ದಾಣದ ಲ್ಲಿ ರೈಲು ನಿಲುಗಡೆಯ ಸಂಗ್ರಹ ಚಿತ್ರ.

ಹಾವೇರಿ: ಮಹಾರಾಷ್ಟ್ರ ರಾಜ್ಯದ ಮುಂಬೈ ರೈಲ್ವೆ ನಿಲ್ದಾಣದಿಂದ ಹಾವೇರಿ ಜಿಲ್ಲೆಗೆ ಬರುವ ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಯ ಪ್ರಯಾಣಿಕರ ಸ್ವೀಕರಿಸಿ ಎಸ್.ಓ.ಪಿ.( ಕೋವಿಡ್ ಸ್ಟ್ಯಾಂಡರ್ಡ್ ಆಪರೇಷನ್ ಪ್ರೋಸಿಜರ್) ಮಾರ್ಗಸೂಚಿ ಅನುಸಾರ ತಪಾಸಣೆಗೊಳಪಡಿಸಿ ತಮ್ಮ ತಮ್ಮ ತಾಲೂಕು ಹಾಗೂ ಆಯಾ ಜಿಲ್ಲೆಗೆ ಕಳುಹಿಸಿಕೊಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಯೋಗೇಶ್ವರ ಅವರು ತಿಳಿಸಿದ್ದಾರೆ.
ಮೂರ‍್ನಾಲ್ಕು ದಿನದಲ್ಲಿ ಮಹಾರಾಷ್ಟ್ರದಿಂದ ಹಾವೇರಿಗೆ ಪ್ರಯಾಣಿಕರನ್ನು ಕರೆದುಕೊಂಡು ವಿಶೇಷ ರೈಲು ಬರಲಿದೆ. ಈ ರೈಲಿನಲ್ಲಿ ಅಂದಾಜು ೧೨೦೦ ಪ್ರಯಾಣಿಕರು ನಮ್ಮ ರಾಜ್ಯದವರಾಗಿದ್ದಾರೆ. ಈ ಪೈಕಿ ಶೇ.೬೦ ರಷ್ಟು ಪ್ರಯಾಣಿಕರು ಹಾವೇರಿ ಜಿಲ್ಲೆಯವರೇ ಆಗಿರುವುದರಿಂದ ಮಹಾರಾಷ್ಟ್ರದಿಂದ ನೇರವಾಗಿ ಹಾವೇರಿ ರೈಲ್ವೆ ನಿಲ್ದಾಣಕ್ಕೆ ವಿಶೇಷ ರೈಲು ಆಗಮಿಸಿ ಒಂದೇ ಸ್ಥಳದಲ್ಲಿ ಎಲ್ಲ ಪ್ರಯಾಣಿಕರನ್ನು ಇಳಿಸಲಿದೆ ಎಂದು ತಿಳಿಸಿದ್ದಾರೆ.
ರೈಲಿನ ಪ್ರತಿ ಬೋಗಿಯಲ್ಲಿ ೫೦ ಜನರು ಪ್ರಯಾಣಿಸಲು ಮಾತ್ರ ಅವಕಾಶ ಕೊಡಲಾಗಿದೆ. ಅಂದಾಜು ೨೨ ರಿಂದ ೨೪ ಬೋಗಿಗಳಲ್ಲಿ ಪ್ರಯಾಣಿಕರು ಆಗಮಿಸಲಿದ್ದಾರೆ. ಹಾವೇರಿ ರೈಲ್ವೆ ನಿಲ್ದಾಣದಲ್ಲಿ ಇಳಿಯಲಿರುವ ಪ್ರಯಾಣಿಕರಿಗೆ ಹಾವೇರಿ ಜಿಲ್ಲೆಯ ಪ್ರಯಾಣಿಕರಿಗೆ ತಾಲೂಕಾವಾರು ಕೌಂಟರ್‌ಗಳನ್ನು ತೆರೆಯಲಾಗಿದೆ ಹಾಗೂ ಬೇರೆ ಜಿಲ್ಲೆಗೆ ತೆರಳುವವರಿಗೆ ಜಿಲ್ಲಾವಾರು ಕೌಂಟರ್‌ಗಳನ್ನು ತೆರೆದು ಮಾಹಿತಿ ನೀಡಿಕೆ, ಆರೋಗ್ಯ ತಪಾಸಣೆ ನಡೆಸಿ ಇಲ್ಲಿಂದ ಆಯಾ ತಾಲೂಕು ಹಾಗೂ ಜಿಲ್ಲೆಗಳಿಗೆ ಕರೆದೊಯ್ಯಲು ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ. ಎಲ್ಲರನ್ನೂ ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಪಡಿಸಲಾಗುವುದು. ಬಸ್‌ಗೆ ತೆರಳುವ ಮುನ್ನ ಪ್ರತಿ ಪ್ರಯಾಣಿಕರಿಗೆ ಆಹಾರದ ಪೊಟ್ಟಣ, ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಇದಕ್ಕಾಗಿ ನೋಡಲ್ ಅಧಿಕಾರಿಗಳನ್ನು ನಿಯೋಜಿಸಿ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.
ಧಾರವಾಡ, ಬೆಳಗಾವಿ, ಗದಗ, ಉತ್ತರ ಕನ್ನಡ , ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ, ಕೊಪ್ಪಳ, ಬೀದರ, ವಿಜಯಪುರ, ಯಾದಗಿರಿ ಒಳಗೊಂಡಂತೆ ವಿವಿಧ ಜಿಲ್ಲಾವಾರು ಕೌಂಟರ್ ತೆರೆಯಲಾಗಿದೆ. ಈ ಎಲ್ಲ ಜಿಲ್ಲೆಯ ಪ್ರಯಾಣಿಕರು ಹಾವೇರಿಯಲ್ಲಿ ಇಳಿಯಲಿದ್ದಾರೆ. ಇವರನ್ನು ಇಲ್ಲಿಂದ ತಪಾಸಣೆ ನಡೆಸಿ ಬಸ್ ಮೂಲಕ ಕಳುಹಿಸಲಾಗುವುದು. ಅದೇ ರೀತಿ ಹಾವೇರಿ ಜಿಲ್ಲೆಯ ಹಾನಗಲ್, ಬ್ಯಾಡಗಿ, ರಾಣೇಬೆನ್ನೂರು, ಬ್ಯಾಡಗಿ, ರಟ್ಟೀಹಳ್ಳಿ, ಹಿರೇಕೆರೂರು, ಹಾವೇರಿ ತಾಲೂಕುಗಳಿಗೆ ಪ್ರತ್ಯೇಕ ಕೌಂಟರ್ ಮಾಡಿ ಆರೋಗ್ಯ ತಪಾಸಣೆಗೊಳಪಡಿಸಿ ಮುಂಗೈಗೆ ಸೀಲುಹಾಕಿ ತಾಲೂಕಾ ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ಈಗಾಗಲೇ ಈ ಕರ್ತವ್ಯಕ್ಕಾಗಿ ವಿವಿಧ ಅಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನೊಳಗೊಂಡ ತಂಡ ನಿಯೋಜಿಸಿ ತರಬೇತಿ ನೀಡಲಾಗಿದೆ. ಎಲ್ಲರಿಗೂ ಕಾರ್ಯನಿರ್ವಹಣೆ ಕುರಿತಂತೆ ಮಾಹಿತಿ ನೀಡಿ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.
ಹೊರ ರಾಜ್ಯ/ ಜಿಲ್ಲೆಯಿಂದ ೩೨೫೧ ಪ್ರಯಾಣಿಕರು: ಮೇ ೧ ರಿಂದ ೧೨ರವರೆಗೆ ಹೊರ ರಾಜ್ಯಗಳಿಂದ ೩೪೧ ಜನ ಆಗಮಿಸಿದ್ದು, ಈ ಪೈಕಿ ೨೧೪ ಜನರನ್ನು ಗೃಹಪ್ರತ್ಯೇಕತೆಯಲ್ಲಿ ಹಾಗೂ ೧೨೭ ಜನರನ್ನು ಸಾಂಸ್ಥಿಕ ಪ್ರತ್ಯೇಕತೆಯಲ್ಲಿ ಇರಿಸಲಾಗಿದೆ. ಹೊರ ಜಿಲ್ಲೆಗಳಿಂದ ೨೯೧೦ ಜನರು ಆಗಮಿಸಿದ್ದು, ಈ ಪೈಕಿ ೨೮೩೮ ಜನರನ್ನು ಗೃಹ ಪ್ರತ್ಯೇಕತೆಯಲ್ಲಿ ಹಾಗೂ ೭೨ ಜನರನ್ನು ಸಾಂಸ್ಥಿಕ ಪ್ರತ್ಯೇಕತೆಯಲ್ಲಿ ಇರಿಸಲಾಗಿದೆ. ಒಟ್ಟಾರೆ ೩೦೫೨ ಜನರನ್ನು ಗೃಹ ಪ್ರತ್ಯೇಕತೆಯಲ್ಲಿ ಹಾಗೂ ೧೯೯ ಸಾಂಸ್ಥಿಕ ಪ್ರತ್ಯೇಕತೆಯಲ್ಲಿ ಇರಿಸಿ ನಿಗಾವಹಿಸಲಾಗಿದೆ ಎಂದು ತಿಳಿಸಿದ್ದಾರೆ.
ಗೋವಾ ರಾಜ್ಯ ಕೋವಿಡ್ ಮುಕ್ತ ರಾಜ್ಯ ಎಂದು ಘೋಷಣೆಯಾಗಿರುವುದರಿಂದ ಈ ರಾಜ್ಯದಿಂದ ಬಂದವರನ್ನು ಹೊರತುಪಡಿಸಿ ಉಳಿದ ರಾಜ್ಯಗಳಿಂದ ಬಂದವರನ್ನು ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗಿದೆ. ಆದರೆ ಸ್ವಾಬ್ ಪರೀಕ್ಷೆಯ ನಂತರ ನೆಗಟಿವ್ ವರದಿ ಬಂದವರನ್ನು ಗೃಹ ಪ್ರತ್ಯೇಕತೆಗೆ ಒಳಪಡಿಸಿ ನಿಗವಾಹಿಸಲಾಗಿದೆ ಎಂದು ತಿಳಿಸಿದ್ದಾರೆ.
ತಾಲೂಕುವಾರು ವಿವರದಂತೆ ಹೊರ ರಾಜ್ಯಗಳಿಂದ ಹಾವೇರಿ ತಾಲೂಕಿಗೆ ೧೮ ಜನರು ಬಂದಿದ್ದು ಎಲ್ಲರೂ ಸಾಂಸ್ಥಿಕ ಪ್ರತ್ಯೇಕತೆಗೆ ಒಳಪಡಿಸಲಾಗಿದೆ. ರಾಣೇಬೆನ್ನೂರಿಗೆ ೧೧ ಜನರು ಆಗಮಿಸಿದ್ದು ಎಲ್ಲರನ್ನೂ ಸಾಂಸ್ಥಿಕ ಪ್ರತ್ಯೇಕತೆಯಲ್ಲಿ ಇರಿಸಲಾಗಿದೆ. ಬ್ಯಾಡಗಿ ತಾಲೂಕಿಗೆ ೪೧ ಜನರು ಆಗಮಿಸಿದ್ದು, ೩೮ ಜನರು ಗೃಹ ಪ್ರತ್ಯೇಕತೆಯಲ್ಲಿ ಹಾಗೂ ೩ ಜನರು ಸಾಂಸ್ಥಿಕ ಪ್ರತ್ಯೇಕತೆಯಲ್ಲಿ ಇರಿಸಲಾಗಿದೆ. ಹಿರೇಕೆರೂರು ಹಾಗೂ ರಟ್ಟೀಹಳ್ಳಿ ತಾಲೂಕು ಸೇರಿ ೨೩ ಜನರು ಆಗಮಿಸಿದ್ದು, ಐದು ಜನರು ಗೃಹ ಪ್ರತ್ಯೇಕತೆಯಲ್ಲಿ ಹಾಗೂ ೧೮ ಜನರನ್ನು ಸಾಂಸ್ಥಿಕ ಪ್ರತ್ಯೇಕತೆಯಲ್ಲಿ ಇರಿಸಲಾಗಿದೆ. ಶಿಗ್ಗಾಂವ ತಾಲೂಕಿಗೆ ೪೪ ಜನರು ಆಗಮಿಸಿದ್ದು, ಆರು ಜನರನ್ನು ಗೃಹಪ್ರತ್ಯೇಕತೆಯಲ್ಲಿ ಹಾಗೂ ೩೮ ಜನರನ್ನು ಸಾಂಸ್ಥಿಕ ಪ್ರತ್ಯೇಕತೆಯಲ್ಲಿ ಇರಿಸಲಾಗಿದೆ. ಸವಣೂರು ತಾಲೂಕಿಗೆ ೧೨೨ ಜನರು ಆಗಮಿಸಿದ್ದು, ೧೧೦ ಜನರನ್ನು ಗೃಹಪ್ರತ್ಯೇಕತೆಯಲ್ಲಿ ಹಾಗೂ ೧೨ ಜನರನ್ನು ಸಾಂಸ್ಥಿಕ ಪ್ರತ್ಯೇಕತೆಯಲ್ಲಿ ಇರಿಸಲಾಗಿದೆ. ಹಾನಗಲ್ ತಾಲೂಕಿಗೆ ೮೨ ಜನರು ಆಗಮಿಸಿದ್ದು, ೫೫ ಜನರನ್ನು ಗೃಹಪ್ರತ್ಯೇಕತೆಯಲ್ಲಿ ಹಾಗೂ ೨೭ ಜನರನ್ನು ಸಾಂಸ್ಥಿಕ ಪ್ರತ್ಯೇಕತೆಯಲ್ಲಿ ಇರಿಸಿ ನಿಗಾವಹಿಸಲಾಗಿದೆ.
ಹೊರ ಜಿಲ್ಲೆಯಿಂದ ಹಾವೇರಿಗೆ ೪೬ ಜನ ಬಂದಿದ್ದು, ಎಲ್ಲರನ್ನೂ ಸಾಂಸ್ಥಿಕ ಪ್ರತ್ಯೇಕತೆಯಲ್ಲಿ ಇರಿಸಲಾಗಿದೆ. ರಾಣೇಬೆನ್ನೂರಿನ ೪೭೫ ಜನರು ಬಂದಿದ್ದು ಎಲ್ಲರೂನ್ನು ಗೃಹ ಪ್ರತ್ಯೇಕತೆಯಲ್ಲಿ ಇರಿಸಲಾಗಿದೆ. ಬ್ಯಾಡಗಿಯ ೨೦೨ ಜನರು ಆಗಮಿಸಿದ್ದು, ಎಲ್ಲರನ್ನೂ ಗೃಹ ಪ್ರತ್ಯೇಕತೆಯಲ್ಲಿ ಇರಿಸಲಾಗಿದೆ. ಹಿರೇಕೆರೂರು- ರಟ್ಟೀಹಳ್ಳಿ ತಾಲೂಕಿಗೆ ೧೦೮೨ ಜನರು ಬಂದಿದ್ದು, ಈ ಪೈಕಿ ೧೦೫೯ ಜನರು ಗೃಹ ಪ್ರತ್ಯೇಕತೆಯಲ್ಲಿ, ೨೩ ಜನರನ್ನು ಸಾಂಸ್ಥಿಕ ಪ್ರತ್ಯೇಕತೆಯಲ್ಲಿ ಇರಿಸಲಾಗಿದೆ. ಶಿಗ್ಗಾಂವ ತಾಲೂಕಿಗೆ ೨೮೪ ಜನ ಬಂದಿದ್ದು, ಎಲ್ಲರನ್ನೂ ಗೃಹ ಪ್ರತ್ಯೇಕತೆಯಲ್ಲಿ ಇರಿಸಲಾಗಿದೆ. ಸವಣೂರ ತಾಲೂಕಿಗೆ ೧೯೮ ಜನರು ಬಂದಿದ್ದು ಎಲ್ಲರನ್ನೂ ಗೃಹ ಪ್ರತ್ಯೇಕತೆಯಲ್ಲಿ ಇರಿಸಲಾಗಿದೆ. ಹಾನಗಲ್ ತಾಲೂಕಿಗೆ ೬೨೭ ಜನರು ಬಂದಿದ್ದು ಈ ಪೈಕಿ ೬೨೪ ಜನರನ್ನು ಗೃಹ ಪ್ರತ್ಯೇಕತೆಯಲ್ಲಿ ಹಾಗೂ ಮೂರು ಜನರನ್ನು ಸಾಂಸ್ಥಿಕ ಪ್ರತ್ಯೇಕತೆಯಲ್ಲಿ ಇರಿಸಿ ನಿಗಾವಹಿಸಲಾಗಿದೆ ಎಂದು ತಿಳಿಸಿದ್ದಾರೆ.

Show More

Related Articles

Leave a Reply

Your email address will not be published. Required fields are marked *

Back to top button
Close