ಶಿಗ್ಗಾವಿ-ಸವಣೂರು

ವಿ.ಪ.ಸದಸ್ಯ ಮಾನೆ ಅವರಿಗೆ ಬುದ್ಧನ ಫೋಟೋ ನೀಡಿ ಸ್ವಾಗತಿಸಿದ ಮಣ್ಣಣ್ಣವರ

ಶಿಗ್ಗಾವಿ ನಗರಕ್ಕೆ ಕೋವಿಡ್-೧೯ ಕೋರೋನಾ ಹೋಗಲಾಡಿಸುವ ಉದ್ದೇಶದಿಂದ ತಮ್ಮ ಸ್ಥಳೀಯ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಲ್ಲಿ ಪುರಸಭೆಗೆ ಔಷಧಿ ಸಿಂಪಡಣೆಗೆ ಅವಶ್ಯವಾಗಿರುವ ಪೋರ್ಟೇಬಲ್ ಪಾವರ್ ಸ್ಪ್ರೇಯರ್ ವಿತರಣೆಯ ಹಾಗೂ ಔಷಧಿ ಸಿಂಪಡಣೆಯಮಹಾತ್ವಕಾಂಕ್ಷಿ ಕಾರ್ಯಕ್ರಮಕ್ಕೆ ಆಗಮಿಸಿದ ವಿಧಾನಪರಿಷತ್ ಶಾಸಕರಾದ ಶ್ರೀನಿವಾಸ್ ಮನೆಯವರನ್ನು ಶಿಗ್ಗಾವಿ ಬ್ಲಾಕ್ ಕಾಂಗ್ರೆಸ್ ಸಮಿತಿ ವಕ್ತಾರ ಮಂಜುನಾಥ್ ಮಣ್ಣಣ್ಣವರ ಬುದ್ಧ ಪೂರ್ಣಿಮೆಯ ದಿನವಾದ ಮೇ.೭ರಂದು ಬುದ್ಧನ ಭಾವಚಿತ್ರವಿರುವ ಫೋಟೋ ನೀಡಿ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಹಾವೇರಿ ಜಿಪಂ ಅಧ್ಯಕ್ಷ ಬಸವರಾಜ ದೇಸಾಯಿ, ಜಿಪಂ ಸದಸ್ಯ ರಮೇಶ ದುಗ್ಗತ್ತಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಹಾದಿಮನಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪ್ರೇಮಾ ಪಾಟೀಲ್, ಸವಣೂರು ಬ್ಲಾಕ್ ಸಮಿತಿ ಅಧ್ಯಕ್ ನಾಗಪ್ಪ ತಿಪ್ಪಕ್ಕನವರ್, ಜಿಪಂ ಸದಸ್ಯ ಯಾಶೀರ್‌ಖಾನ್ ಪಠಾಣ, ಶಿಗ್ಗಾವ ತಾಲೂಕ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ವಸಂತ ಬಾಗೂರ್, ಶಿಗ್ಗಾವ್- ಸವಣೂರು ಮತಕ್ಷೇತ್ರದ ಸಾಮಾಜಿಕ ಜಾಲತಾಣದ ಮಾಲ್ತೇಶ್ ಸಾಲಿ ಇನ್ನು ಹಲವು ಮುಖಂಡರು ಪಕ್ಷದ ಕಾರ್ಯಕರ್ತರು ಈ ವೇಳೆ ಉಪಸ್ಥಿತರಿದ್ದರು.

Show More

Leave a Reply

Your email address will not be published. Required fields are marked *

Back to top button
Close