ಶಿಗ್ಗಾವಿ: ನಗರದ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಮಂಗಳವಾರ ಜಿಲ್ಲಾ ಮಹಿಳಾ ಕಾಂಗ್ರೆಸ್ ಹಾಗೂ ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ವತಿಯಿಂದ ಭಾರತ ದೇಶದ ಮೊದಲ ಮಹಿಳಾ ಪ್ರಧಾನಿ ದಿವಂಗತ ಇಂದಿರಾ ಗಾಂಧಿ ಅವರ ೧೦೩ ನೇ ಹುಟ್ಟು ಹಬ್ಬವನ್ನು ಆಚರಿಸಲಾಯಿತು.
ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪ್ರಮಾ ಪಾಟೀಲ ಮಾತನಾಡಿ, ಇಂದಿರಾ ಗಾಂಧಿ ಅವರ ಹಲವು ವಾರು ಅಭಿವೃದ್ಧಿ ಕೆಲಸಗಳು ಹಳ್ಳಿಗಳಿಗೆ ತಲುಪಿದವು, ಅವರ ರೋಟಿ, ಕಪಡಾ, ಮಕಾನ ಯೋಜನೆಗಳು ಅವರ ದೂರದೃಷ್ಟಿಗೆ ಬಡವರಪರ ಕಾಳಜಿಗೆ ಸಾಕ್ಷಿಯಾಗಿದ್ದವು ಎಂದರು.
ಕೆ ಪಿ ಸಿ ಸಿ ಎಸ್ ಟಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಎಮ್ ಹಾದಿಮನಿ ಮಾತನಾಡಿ ಇಂದಿರಾ ಗಾಂಧಿ ಅವರ ಕೆಲವು ದಿಟ್ಟ ಹೆಜ್ಜೆ ಹಾಕಿದರು, ಅವರು ಬಡವರ ಪರ ಬಹಳ ಕೆಲಸಗಳನ್ನು ಮಾಡಿದರು. ಅದರಿಂದಲೇ ಇಂದಿಗೂ ಇಂದಿರಾ ಗಾಂಧಿ ಅವರ ಹೆಸರು ಜನಮಾನಸದಲ್ಲಿ ಶಾಶ್ವತವಾಗಿ ಉಳಿದಿದೆ ಎಂದರು.
ತಾಲ್ಲೂಕು ಅಧ್ಯಕ್ಷ ಎಮ್ ಎನ್ ವೆಂಕೋಜಿ ಮಾತನಾಡಿದರು ,ಕಾಂಗ್ರೆಸ್ ಪಕ್ಷದ ವಕ್ತಾರ ಮಂಜುನಾಥ್ ಮಣ್ಣಣ್ಣನವರ, ಪ್ರಮುಖರಾದ ಬಸನಗೌಡ ಪಾಟೀಲ, ಗುರುನಗೌಡ ಪಾಟೀಲ, ಗುಡ್ಡಪ ಜಲದಿ, ಹೇಮರೆಡ್ಡಿ ನಡವಿನಮನಿ, ಬಸು ವಾಲ್ಮೀಕಿ, ಎಸ್. ಎಫ್. ಮಣಕಟ್ಟಿ. ವಸಂತ ಬಾಗೂರ, ಮಾಹಾಂತೇಶ ಸಾಲಿ ಸೇರಿದಂತೆ ಅನೇಕ ಕಾಂಗ್ರೆಸ್ ಪಕ್ಷದ ಮುಖಂಡರು ಹಾಜರಿದ್ದರು.