ಶಿಗ್ಗಾವಿ ಪುರಸಭೆ ವ್ಯಾಪ್ತಿಯ ವಾರ್ಡ್ ೧೬ರಲ್ಲಿನ ಅಲ್ಲಾದೀನ್ ಗೋಟಗೋಡಿ, ನಾಗವ್ವ ಬಂಡಿವಡ್ಡರ ಇವರ ಮನೆಗಳ ಮೇಲ್ಛಾವಣಿ ತಗಡುಗಳು ಹಾರಿರುವುದು.
ಹಾವೇರಿ ; ಭಾರೀ ಬಿರುಗಾಳಿಗೆ ನಾಲ್ಕಾರುಮನೆಗಳ ಮೇಲ್ಛಾವಣಿ ಹಾರಿಹೋಗಿರುವ ಘಟನೆ ಮೇ.೧೦ರಂದು ಭಾನುವಾರ ಸಂಜೆ ಜಿಲ್ಲೆಯ ಶಿಗ್ಗಾವಿ ಪಟ್ಟಣದಲ್ಲಿ ನಡೆದಿದೆ. ಸಂಜೆ ೫-೩೦ರಸುಮಾರಿಗೆ ಬೀಸಿದ ಭಾರೀ ಪ್ರಮಾಣದ ಬಿರುಗಾಳಿಗೆ ಪಟ್ಟಣದ ೧೬ನೇ ವಾರ್ಡಿನಲ್ಲಿನ ನಲ್ಕಾರುಮನೆಗಳ ತಗಡಿನ ಮೇಲ್ಚಾವಣಿ ಹಾರಿಹೋಗಿ ರಸ್ತೆಗೆ ಬಂದು ಬಿದ್ದಿವೆ. ಕೆಲವುಮನೆಗಳ ಹಂಚುಗಳು ಹಾರಿಹೋಗಿದ್ದು, ಮನೆಗಳ ಮೇಲ್ಬಾಗದಲ್ಲಿನ ಜಿಂಕ್‌ಸಿಟಗಳಿಗೆ ಧಕ್ಕೆಯಾಗಿದೆ.
ಮಳೆಸುರಿಯುತ್ತಿರುವುದರಿಂದ ಬೀರುಗಾಳಿಯಿಂದ ಹಾನಿಗೆ ಒಳಗಾಗಿರುವ ಜನರು ಸಂಕಟದಲ್ಲಿದ್ದಾರೆ. ಕೆಲವುಕಡೆಗಳಲ್ಲಿ ವಿದ್ಯುತ್ ಸ್ಥಗಿಗೊಂಡಿದೆ. ರಸ್ತೆಗಳ ಮೇಲೆಲ್ಲ ಮನೆಯ ಅವಶೇಷಗಳು ಬಿದ್ದಿವೆ. ಸ್ಥಳಕ್ಕೆ ತಹಶೀಲ್ದಾರರು ಭೇಟಿ ನೀಡಿ ಪರಿಶೀಲಿಸಿದರೆಂದು ತಿಳಿದು ಬಂದಿದೆ. ಶಿಗ್ಗಾವಿ ಪುರಸಭೆ ವ್ಯಾಪ್ತಿಯ ವಾರ್ಡ್ ೧೬ರಲ್ಲಿನ ಅಲ್ಲಾದೀನ್ ಗೋಟಗೋಡಿ, ನಾಗವ್ವ ಬಂಡಿವಡ್ಡರ ಇವರ ಮನೆಗಳ ಮೇಲ್ಛಾವಣಿ ತಗಡುಗಳು ಬಿರುಗಾಳಿ ಮತ್ತು ಮಳೆಗೆ ಸಂಪೂರ್ಣ ಜಖಂಗೊಂಡಿವೆ, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಆಗಿಲ್ಲ.