ಹಾವೇರಿ: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಗೆ ನೂತನವಾಗಿ ನೇಮಕವಾಗಿರುವ ಮಾಜಿ ಸಚಿವ, ಶಾಸಕ ಡಿ.ಕೆ.ಶಿವಕುಮಾರ ಅವರನ್ನು ಬೆಂಗಳೂರಿನ ಅವರ ನಿವಾಸದಲ್ಲಿ ಹಾವೇರಿಜಿಲ್ಲೆಯ ಕಾಂಗ್ರೆಸ್ ಮುಖಂಡರು ಶನಿವಾರ ಸನ್ಮಾನಿಸಿ ಗೌರವಿಸಿದರು. ಕೆಪಿಸಿಸಿ ಕಾರ್ಯದರ್ಶಿ ಪ್ರಕಾಶಗೌಡ ಪಾಟೀಲ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಎಂ.ಹಿರೇಮಠ, ಸುರೇಶ ದೊಡ್ಡಕುರುಬರ, ಬಸಣ್ನ ಆರೇಗೊಪ್ಪ, ವನಜಾಕ್ಷಿ ಪಾಟೀಲ ಮತ್ತಿತರರು ಡಿ.ಕೆ.ಶಿವಕುಮಾರ ಅವರಿಗೆ ಹಾವೇರಿಯ ಪ್ರಸಿದ್ದ ಯಾಲಕ್ಕಿ ಹಾರ ಅರ್ಪಿಸಿ ಶಾಲು ಹೊದಿಸಿ ಸನ್ಮಾನಿಸಿ ಗೌರವಿಸಿದರು.
ನಂತರ ಕೆಪಿಸಿಸಿಗೆ ಕಾಯಾಧ್ಯಕ್ಷರುಗಳಾಗಿ ನೇಮಕವಾಗಿರುವ ಈಶ್ವರ ಖಂಡ್ರೆ, ಸತೀಶ ಜಾರಕಿಹೊಳಿ, ಸಲೀಂ ಅಹ್ಮದ ಅವರುಗಳನ್ನು ಸನ್ಮಾನಿಸಿದರು. ಈಸಂದರ್ಭದಲ್ಲಿ ಹಾವೇರಿಜಿಲ್ಲೆಯ ಕಾಂಗ್ರೆಸ್ ಪಕ್ಷದ ಮುಖಂಡರುಗಳಾದ ಉಮೇಶ ದಾನಪ್ಪನವರ, ಮೈಲಾರಪ್ಪ ಕಬ್ಬೂರ, ಶಂಕ್ರಣ್ಣ ಪ್ಯಾಟಿ, ವೀರೇಶ ಬೈಲವಾಳ, ಕೆ.ಆರ್.ಶೀಲವಂತ, ರವೀಂದ್ರ ಚಿಕ್ಕೇರಿ, ಸರೇಶ ಹುಲ್ಲತ್ತಿ, ರಾಮಣ್ಣ ಶೇಷಗಿರಿ ಸೇರಿದಂತೆ ಅನೇಕರು ಹಾಜರಿದ್ದರು.