ಯಾವಕವಿಯು ಬರೆಯಲಾರ…………..
ಹಾವೇರಿಯಲ್ಲಿ ದಟ್ಟವಾದ ಮಂಜಿಗೆ “ಜೇಡರಬಲೆಗಳೆಲ್ಲಾ ಮುತ್ತಿನಹಾರವಾಗಿದ್ದವು”……..
ಹಾವೇರಿ: ಮಂಗಳವಾರ ಬೆಳಿಗ್ಗೆ ನಗರದಲ್ಲಿ ದಟ್ಟವಾದ ಕವಿದಿತ್ತು. ಬೆಳಿಗ್ಗೆ ೮ಗಂಟೆಯದರೂ ಸೂರ್ಯನ ದರ್ಶನವಾಗಿರಲಿಲ್ಲ. ದಟ್ಟವಾದ ಮಂಜು ಆವರಿಸಿದ್ದರಿಂದ ರಸ್ತೆಗಳು ಸಹ ಕಾಣದಂತಾಗಿದ್ದವು. ವಾಹನ ಸವಾರರು ವಾಹನಗಳ ಲೈಟುಗಳನ್ನು ಹಚ್ಚಿಕೊಂಡು ಸಂಚರಿಸುತ್ತಿದ್ದ ದೃಶ್ಯಗಳು ಕಂಡು ಬಂದವು.
ಈಮಧ್ಯೆ ನಗರದ ಹೊರವಲಯದಲ್ಲಿನ ಗಿಡ-ಗಂಟೆಗಳ ಕೊರಳಿಗೆ ಜೇಡಗಳು ಹೆಣಿದುಕೊಂಡಿದ್ದ ಜೇಡರಬಲೆಗಳಿಗೆ ಮಂಜುಹನಿ ಹೆಣೆದುಕೊಂಡು ಮುಂಜಾನೆಯ ಮಂಜಿನಹನಿಗಳು ಜೇಡರಬಲೆಗಲ್ಲಿ ಮುತ್ತಿನ ಹಾರದಂತೆ ಕಂಡು ಬಂದವು. ಮುಂಜಾನೆ ಮಂಜಿನಹನಿಗಳು ದೃಶ್ಯಕಾವ್ಯವನ್ನು ಸೃಷ್ಟಿಸಿದ್ದವು. ಜೇಡರ ಬಲೆಗೆ ಅಂಟಿಕೊಂಡಿದ್ದ ಮಂಜಿನಹನಿಗಳು ದೃಶ್ಯವನ್ನು ನೋಡುವುದು ಅದೊಂದು ಅದ್ಬುತ! ಆನಂದದ ಕ್ಷಣವಾಗಿತ್ತು.
ಬೆಳಿಗ್ಗೆ ದಟ್ಟವಾಗಿ ಕವಿದಿದ್ದ ಮಂಜನ್ನು ಗಮನಿಸಿ ನಾನು ಕ್ಯಾಮರಾದೊಂದಿಗೆ ಹೆಗ್ಗೆರೆಪ್ರದೇಶಕ್ಕೆ ಭೇಟಿ ನೀಡಿದ ವೇಳೆ ಜೇಡರಬಲೆಗೆ ಅಂಟಿಕೊಂಡು ಸೋರ್ಯನೊಂದಿಗೆ ಚೆಲ್ಲಾಟವಾಡುತ್ತಿದ್ದ ಮಂಜಿನಹನಿಗಳ ಕೆಲವು ಛಾಯಾಚಿತ್ರಗಳನ್ನು ಸೆರೆಹಿಡಿದೆ. ಅದರಲ್ಲಿ ಈ ಚಿತ್ರವು ಸಹ ಒಂದು. ಬೆಳಗಿನವೇಳೆ ಮಂಜಿನಹನಿಳ ಲೀಲೆಯನ್ನು ನೋಡುವುದೇ ಕಣ್ಣಿಗೆ ಹಬ್ಬ.
ಚಿತ್ರ ನಿಮಗೆ ಇಷ್ಟವಾದರೆ ಪ್ರತಿಕ್ರಿಯಿಸಿ.
ಚಿತ್ರ/ಬರಹ ಮಾಲತೇಶ ಅಂಗೂರ. ೯೪೮೧೭೪೯೪೪೦