ಹಾವೇರಿ

೨೦೦೩ ರ ವಿದ್ಯುತ್‌ಕಾಯ್ದೆತಿದ್ದುಪಡಿ ವಿರೋಧಿಸಿ ಹಾವೇರಿಯಲ್ಲಿ ಪ್ರತಿಭಟನೆ.


ಹಾವೇರಿ: ಇಲ್ಲಿನ ಕವಿಪ್ರನಿ ನೌಕರರ ಸಂಘ ಮತ್ತು ಅಸೋಸಿಯೇಷನ್‌ಗಳ ಒಕ್ಕೂಟ ಹಾವೇರಿಇವರು ಕಪ್ಪು ಪಟ್ಟಿ ಧರಿಸಿ ೨೦೦೩ ರ ವಿದ್ಯುತ್ ಕಾಯ್ದೆ ತಿದ್ದುಪಡಿಗೆ ವಿರೋಧ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರವು ೨೦೦೩ರ ವಿದ್ಯುತ್‌ಕಾಯ್ದೆಗೆ ಪ್ರಸ್ತಾಪಿತ ತಿದ್ದುಪಡಿತರಲು ಹೊರಟಿರುವದು ವಿದ್ಯುತ್‌ಕ್ಷೇತ್ರದಲ್ಲಿ ಹೊರಗುತ್ತಿಗೆ/ ಖಾಸಗಿಕರಣ ಮಾಡುತ್ತಿರುವುದುಕಾರ್ಮಿಕ ವಿರೋಧ ನೀತಿ ಆಗಿದ್ದು, ಹಾಗೂ ರೈತರು/ ಜನಸಾಮಾನ್ಯರಿಗೂ ಹೊರೆಯಾಗುವದರಿಂದಕೇಂದ್ರ ಸರ್ಕಾರದಈ ಧೋರಣೆಯನ್ನು ವಿರೋಧಿಸಿ, ವಿರೋಧವನ್ನು ಒಕ್ಕೂಟವುವ್ಯಕ್ತಪಡಿಸಿದವು.
ದ್ವಾರಸಭೆಯ ಅಧ್ಯಕ್ಷತೆಯನ್ನು ವಿಭಾಗಾಧಿಕಾರಿ ಎಸ್. ಈರಣ್ಣನವರು ವಹಿಸಿ ವಿದ್ಯುತ್ ಕ್ಷೇತ್ರದಲ್ಲಿ ಕೇಂದ್ರ ಸರ್ಕಾರ ಜಾರಿಗೆತರಲು ನಿರ್ಧರಿಸಿರುವ ವಿದ್ಯುತ್ ನಿಯಮಾವಳಿಗಳಲ್ಲಿನ ತಿದ್ದುಪಡಿ ಸರಿಯಾದ ಕ್ರಮವಲ್ಲ. ಇದು ಕಾರ್ಮಿಕರಿಗೆ ಹಾಗು ಅಧಿಕಾರಿಗಳಿಗೆ ವಿರೋಧ ನೀತಿಯಾಗಿದೆ. ಸರ್ಕಾರತಕ್ಷಣಅದನ್ನು ಕೈ ಬಿಡಬೇಕೆಂದು ತಿಳಿಸಿದರು.
ಹುಬ್ಬಳ್ಳಿ ಕಂಪನಿ ನೌಕರ ಸಂಘದ ಉಪ ಕಾರ್ಯದರ್ಶಿಗಳಾದ ವಿಜಯಕುಮಾರಎನ್‌ಮುದಕಣ್ಣನವರ ಮಾತನಾಡಿಕೇಂದ್ರ ಸರ್ಕಾರವುಕೊವಿಡ್-೧೯ ಸಂಕಷ್ಟ ಹಾಗೂ ಆರ್ಥಿಕ ಹಿಂಜರಿತರ ಸಂದರ್ಭದಲ್ಲಿ ವಿದ್ಯುತ್‌ಕಾಯ್ದೆಗೆತಿದ್ದುಪಡಿತರಲು ಮುಂದಾಗಿರುವುದು ಸರಿಯಾದಕ್ರಮವಲ್ಲ, ದೇಶದಜನತೆ ಮಹಾಮಾರಿಯ ಹೊಡೆತಕ್ಕೆ ನಲುಗಿ ಹೋಗಿದ್ದಾರೆ. ಕೇಂದ್ರವು ಪರಿಸ್ಥಿತಿಯ ಗಂಭೀರತೆಯನ್ನುಅರಿಯದೇ ವಿದ್ಯುತ್‌ಕಾಯ್ದೆಗೆತಿದ್ದುಪಡಿತರಲು ಮುಂದಾಗಿರುವುದು ವಿದ್ಯುತ್‌ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಹಲವಾರುಕಾರ್ಮಿಕರಿಗೂ, ಅಧಿಕಾರಿಗಳಿಗೂ ಹೊಡೆತ ಬೀಳಲಿದೆಎಂದರು.
ಕಾಯ್ದೆತಿದ್ದುಪಡಿ ಮಾಡಿದರೆ ವಿದ್ಯುತ್ ಪ್ರಸರಣ ವ್ಯವಸ್ಥೆಯಲ್ಲಿ ಖಾಸಗಿ ಕಂಪನಿಗಳ ಕೈ ಬಲವಾಗಲಿದೆ.ಇದರಿಂದ ವಿದ್ಯುತ್ ಮಾರಾಟ, ಖರೀದಿ, ಪ್ರಸರಣ, ಸಬ್ ಲೈಸೆನ್ಸಿಂಗ್ ಹಾಗೂ ಪ್ರ್ಯಾಂಚೈಸಿ ವ್ಯವಸ್ಥೆ ಸಂಪೂರ್ಣವಾಗಿಖಾಸಗಿಯವರ ಪಾಲಾಗುವದರಿಂದ, ನೌಕರರ ಮತ್ತು ಅಧಿಕಾರಿಗಳ ಸಿಗುವ ಸೌಲಭ್ಯಗಳು ದಮನವಾಗುತ್ತವೆ. ಹಾಗೂ ಬಡವರಿಗೆ, ರೈತರಿಗೆಉಚಿತವಾಗಿ ನೀಡುತ್ತಿರುವ ಸಬ್ಸಿಡಿದರದ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯವಾಗುವುದಲ್ಲದೇ, ದರ ಹೆಚ್ಚಳದ ಅಧಿಕಾರಖಾಸಗಿಯವರ ಪಾಲಾಗುವದುಎಂದೂ ವಿಜಯಕುಮಾರ ಹೇಳಿದರು.
ದ್ವಾರಸಭೆಯನ್ನುದ್ದೇಶಿಸಿ.ವೃತ್ತದ ಉಪಲೆಕ್ಕನಿಯಂತ್ರಣಾಧಿಕಾರಿಗಳಾದ ರೇಣುಕಾ ತೆಂಬದ, ಲೆಕ್ಕಾಧಿಕಾರಿಗಳಾದ ಮಹ್ಮದ ಅಮಾನುಲ್ಲಾ, ಉಪವಿಭಾಗಾಧಿಕಾರಿಗಳಾದ ಸಿ. ಬಿ. ಹೊಸಮನಿ, ಸ್ಥಳೀಯ ಸಮಿತಿಯ ಅಧ್ಯಕ್ಷ ಎಮ್.ಎಸ್.ಕುಮ್ಮೂರ, ಕಾರ್ಯದರ್ಶಿ ಎ. ಕೆ. ಯಮನೂರ, ಸಹ ಕಾರ್ಯದರ್ಶಿ ಬಸವರಾಜಕೋಟಿ ಮಾತನಾಡಿದರು. ಬಾಸು ಕಾಕಂಡಕಿ, ಕೆ.ಎನ್.ಅಗಡಿ, ಶಿವಪ್ರಕಾಶ ಶೆಟ್ಟರ, ಎಮ್.ಕೆ.ತರಿಕೇರಿ, ಬೊರೇಶ್, ಮರಿಗೌಡರ, ಹಾಗೂ ನೌಕರ ಭಾಂಧವರು ಸಭೆಯಲ್ಲಿ ಭಾಗವಹಿಸಿದ್ದರು.

Show More

Related Articles

Leave a Reply

Your email address will not be published. Required fields are marked *

Back to top button
Close