ಹಾವೇರಿ

ಆಟದ ಮೈದಾನವನ್ನು ಸಂತೆಯ ಮೈದಾನ ಮಾಡಿದೊಡೆಂತಯ್ಯ!,

ಮುನ್ಸಿಪಲ್ ಹೈಸ್ಕೂಲ್ ಮೈದಾನವಾಗಿದೆ ಕೊರೋನಾ ಹರಡುವ ಸಂತೆ?, ಹಾವೇರಿ ಜಿಲ್ಲಾಡಳಿತದಿಂದ ಏಕಿ ನಿರ್ಲಕ್ಷ?

ಆಟಮೈದಾನವನ್ನು ಸಂತೆಯ ಮೈದಾನ ಮಾಡಿದೊಡೆಂತಯ್ಯ!,
ಮುನ್ಸಿಪಲ್ ಹೈಸ್ಕೂಲ್ ಮೈದಾನವಾಗಿದೆ ಕೊರೋನಾ ಹರಡುವ ಸಂತೆ?, ಹಾವೇರಿ
ಜಿಲ್ಲಾಡಳಿತದಿಂದ ಏಕಿ ನಿರ್ಲಕ್ಷ?
ಹಾವೇರಿ: ಜಿಲ್ಲಾಕೇಂದ್ರ ಸ್ಥಳವಾಗಿರುವ ಹಾವೇರಿನಗರದ ಹೃದಯಭಾಗದಲ್ಲಿರುವ ನಗರಸಭೆಯ
ಹೈಸ್ಕೂಲ್ ಮೈದಾನಕ್ಕೆ ನಗರದ ಲಾಲಬಹದ್ದೂರು ಶಾಸ್ತ್ರಿಮಾರುಕಟ್ಟೆಯಲ್ಲಿದ್ದ ತರಕಾರಿ
ಮಾರುಕಟ್ಟೆಯನ್ನು ಹಾಗೂ ಎಪಿಎಂಸಿಜಾನುವಾರು ಮಾರುಕಟ್ಟೆಯಲ್ಲಿದ್ದ ತರಕಾರಿ ಹರಾಜು
ಮಾರುಕಟ್ಟೆಯನ್ನು ಸ್ಥಳಾಂತರಿಸಲಾಗಿದೆ. ಇದು ಒಂದು ರೀತಿ ಹಾದಿಯಲ್ಲಿ ಹೋಗುತ್ತಿದ್ದ
ದೆವ್ವವನ್ನು ಮನೆಗೆ ಬಾ ಎಂದು ಕರೆದಂತಾಗಿದೆ.
ಹೈಸ್ಕೂಲ್ ಮುದಾನವಿಗ ಸಂಪೂರ್ಣ ಮಾರುಕಟ್ಟೆಮಯವಾಗಿದ್ದು, ಎಲ್ಲಂದರಲ್ಲಿ ತರಕಾರಿ
ವ್ಯಾಪಾರಿಗಳು, ತರಕಾರಿ ಹರಾಜು ಮಾಡುವ ಏಜೆಂಟರಗಳು ತುಂಬಿಕೊಂಡಿದ್ದು,
ಜನರು-ವ್ಯಾಪಾರಿಗಳು ಯಾವುದೇ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ  ತಮ್ಮ
ವ್ಯಾಪಾರ-ವಹಿವಾಟಿನಲ್ಲಿ ನಿರತರಾಗಿದ್ದಾರೆ. ಕಾಟಾಚಾರಕ್ಕೆ ಅಂದರೆ ಪೊಲೀಸ್‌ರು
ಪ್ರಶ್ನಿಸುತ್ತಾರೆ ಎನ್ನುವ ಕಾರಣಕ್ಕೆ ಮಾಸ್ಕ್ ಮುಖಕ್ಕೆ ಹಾಕಿಕೊಂಡಂತೆ
ನಾಟಕವಾಡುತ್ತಾ ತಮ್ಮವಹಿವಾಟಿನಲ್ಲಿ ನಿರತರಾಗಿದ್ದಾರೆ.
ಪೊಲೀಸರು ಆಗಾಗ ಮಾಸ್ಕ್ ಹಾಕಿಕೊಳ್ಳಿರಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ
ಎನ್ನುತ್ತಾರೆ. ಧ್ವನಿವರ್ಧಕದಲ್ಲಿ ಎಚ್ಚರಿಸುತ್ತಾರೆ. ಆದರೆ ಕೆಲವು ವರ್ತಕರು
ಜಪ್ಪಯ್ಯ ಎಂದರೂ ಸಹ ಮಾಸ್ಕ್ ಪೂರ್ಣವಾಗಿ ಹಾಕಿಕೊಳ್ಳದೇ ತಮ್ಮ ಮೊಂಡಾಟವನ್ನು
ಮುಂದುವರೆಸಿದ್ದಾರೆ. ಇನ್ನು ಜನರಂತೂ ತರಕಾರಿ ಕೊಳ್ಳಲು ಮುಗಿಬಿದ್ದಿದ್ದಾರೆ.
ಈಮಧ್ಯೆ ಲಾಲಬಹದ್ದೂರು ತರಕಾರಿ ಮಾರುಕಟ್ಟೆಯನ್ನು ಹೈಸ್ಕೂಲ್ ಮೈದಾನಕ್ಕೆ
ಸ್ಥಳಾಂತರಿಸಿರುವುದೇನೋ ಸರಿ. ಆದರೆ ಜಾನುವಾರು ಮಾರುಕಟ್ಟೆಯಲ್ಲಿ ಪ್ರತ್ಯೇಕ ತರಕಾರಿ
ಹರಾಜು ಮಾರುಕಟ್ಟೆಇದ್ದರೂ ಸಹ ಅದನ್ನು ಹೈಸ್ಕೂಲ್ ಮೈದಾನಕ್ಕೆ ಸ್ಥಳಾಂತರಿಸಿರುದೇಕೆ?
ಎನ್ನುವದು ಕ್ರೀಡಾಪಟುಗಳು ಪ್ರಶ್ನೆಯಾಗಿದೆ. ಹರಾಜು ಮಾರುಕಟ್ಟೆಯನ್ನು ಹೈಸ್ಕೂಲ್
ಮೈದಾನಕ್ಕೆ ಸ್ಥಳಾಂತರಿಸಿರುವುದರಿಂದ ಹೈಸ್ಕೂಲ್ ಮೈದಾನ ತಿಪ್ಪೆಗುಂಡೆಯಂತಾಗಿದೆ.
ನಗರಸಭೆ ಪೌರಕಾರ್ಮಿಕರು ಕಸವನ್ನು ನಿತ್ಯ ಸ್ವಚ್ಛಮಾಡುತ್ತಾರೆ. ಆದರೆ ತರಕಾರಿ
ಮಾರುಕಟ್ಟೆಯ ವಹಿವಾಟು ನಡೆಯುವದರಿಂದ ಕೊಳೆತ ತರಕಾರಿ, ಅಳಿದು-ಉಳಿದ ಸೊಪ್ಪು-ಸೆದಿ
ಮೈದಾನದಲ್ಲಿ ಎಲ್ಲಂದರಲ್ಲಿ ಹರಡಿದೆ. ಕೊರೋನಾ ನಿಯಂತ್ರಣಕ್ಕೆಂದು ಜಿಲ್ಲಾಡಳಿತ
ಜಾಸ್ತಿ ಜನರು ಸೇರಬಾರದು ಎನ್ನುವ ಉದ್ದೇಶದಿಂದ ತರಕಾರಿ ಮಾರುಕಟ್ಟೆ ಹಾಗೂ ತರಕಾರಿ
ಹರಾಜು ಮಾರುಕಟ್ಟೆಯನ್ನು ಹೈಸ್ಕೂಲ್ ಮೈದಾನಕ್ಕೆ ಸ್ಥಳಾಂತರಿಸುವ ಮೂಲಕ ಕೊರೋನಾ
ವ್ಯಾಪಕವಾಗಿ ಹರಡಲು ಮತ್ತಷ್ಟು ಅನುಕೂಲಮಾಡಿಕೊಟ್ಟಿದೆಯೋ? ಎನ್ನುವ ಪ್ರಶ್ನೆ
ಸಾರ್ವಜನಿಕರದ್ದಾಗಿದೆ.
ಅಷ್ಟರಮಟ್ಟಿಗೆ ನಗರಸಭೆ ಹೈಸ್ಕೂಲ್ ಮೈದಾನ ಆದ್ವಾನವಾಗಿದೆ. ಇಲ್ಲಿನ ಹೊಸಮನಿ
ಸಿದ್ದಪ್ಪ ಜಿಲ್ಲಾಕ್ರೀಡಾಂಗಣವನ್ನು ಬಂದ್ ಮಾಡಲಾಗಿದೆ. ಇರುವ ಏಕೈಕ್ ಮೈದಾನ
ಇದಾಗಿದ್ದು, ಇಲ್ಲಿ ನಿತ್ಯ ವಯೋವೃದ್ಧರು, ಮಕ್ಕಳು, ಮಹಿಳೆಯರು ವಾಯುವಿಹಾರಕ್ಕೆ
ಬರುತ್ತಿದ್ದರು. ಆದರೆ ಇಂದು ಆಟದ ಮೈದಾನ ಬಯಲು ಸಂತೆ ಮೈದಾನವಾಗಿ
ಪರಿವರ್ತನೆಗೊಂಡಿದೆ.
ನೂರಾರು ತರಕಾರಿ ವ್ಯಾಪಾರಿಗಳು, ತರಕಾರಿ ಖರೀದಿದಾರರು, ತರಕಾರಿ ಖರೀದಿಸಲು
ಮುಗಿಬಿದ್ದಿರುವ ಜನರು. ಹೈಸ್ಕೂಲ್ ಮೈದಾನವನ್ನು ನೋಡಿದರೆ ಭಯವಾಗುತ್ತದೆ.
ಭಾನುವಾರವಂತು ನೂರಾರು ಸಂಖ್ಯೆಯಲ್ಲಿ ಜನರು ನೆರೆದಿದ್ದರು. ಜಿಲ್ಲಾಡಳಿತ ಕೊರೋನಾ
ನಿಯಂತ್ರಣ ಮಾಡಲು ಕೈಗೊಂಡ ಕ್ರಮದಿಂದ ಕೊರೋನ ನಿಯಂತ್ರಣ ಇರಲಿ. ಇಲ್ಲಿಂದ ಮತ್ತೊಷ್ಟು
ಹರುಡುವುದಿಲ್ಲವೇ ಎನ್ನುವ ಅನುಮಾನ ಮೂಡುತ್ತದೆ. ಜಿಲ್ಲಾಧಿಕಾರಿಗಳು ಹೈಸ್ಕೂಲ್
ಮೈದಾನಕ್ಕೆ ಭೇಟಿ ನೀಡಿ ಇಲ್ಲಿನ ವಸ್ತು ಸ್ಥಿತಿಯನ್ನು ಪರಿಶೀಲಿಸಿ
ಹಾವೇರಿಯಸಾರ್ವಜನಿಕ ಏಕೈಕ್ ಆಟದ ಮೈದಾನವಾಗಿರು ಹೈಸ್ಕೂಲ್ ಮೈದಾನದ
ಪಾವಿತ್ರ್ಯತೆಯನ್ನು ಕಾಪಾಡಬೇಕು ಎನ್ನುವುದು ಸಾರ್ವಜನಿಕರ, ಹಾಗೂ ಕ್ರೀಡಾಪಟುಗಳ
ಆಗ್ರಹವಾಗಿದೆ.

Show More

Related Articles

Leave a Reply

Your email address will not be published. Required fields are marked *

Back to top button
Close