ಹಾವೇರಿ

ಹಾವೇರಿಯ ಜೈನಮಂದಿರದಲ್ಲಿ ಭಗವಾನ್ ಮಹಾವೀರ ಜಯಂತಿ ಸರಳ ಆಚರಣೆ

ಹಾವೇರಿಯ ಜೈನಮಂದಿರದಲ್ಲಿ ಭಗವಾನ್ ಮಹಾವೀರ ಜಯಂತಿ ಸರಳ ಆಚರಣೆ
ಹಾವೇರಿ: ಇಲ್ಲಿನ ಬಸ್ತಿಓಣಿಯಲ್ಲಿರುವ ಭಗವಾನ್ ಶ್ರೀ ೧೦೦೮ ನೇಮಿನಾಥ ದಿಗಂಬರ ಜೈನ ಮಂದಿರದಲ್ಲಿ ಏ.೨೫ ರಂದು ಭಾನುವಾರ ಭಗವಾನ್ ಶ್ರೀ೧೦೦೮ ಮಹಾವೀರ ಜಯಂತಿಯನ್ನು ಕೊರೋನಾ ಲಾಕ್‌ಡೌನ್ ಹಿನ್ನೆಲೆಯಲ್ಲಿ ಸರಳವಾಗಿ ಆಚರಿಸಲಾಯಿತು. ಗಣ್ಯರು ಭಗವಾನ್ ಮಹಾವೀರರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು”. ಕೊರೊನಾ ಕಾರಣದಿಂದ ಕಾರ್ಯಕ್ರಮವನ್ನು ಸರಳವಾಗಿ ನಡೆಸಲಾಗಿದೆ. “ಜಗತ್ತನ್ನು ಕೊರೊನಾದಿಂದ ಮುಕ್ತ ಮಾಡು” ಎಂದು ಮಹಾವೀರನನ್ನು ಪ್ರಾರ್ಥಿಸಿದ್ದೇವೆ ಎಂದು ಸಮಾಜದ ಮುಖಂಡರು ತಿಳಿಸಿದರು.
ಈ ಸಂದರ್ಭದಲ್ಲಿ ಹಾವೇರಿ ಜಿಲ್ಲಾ ಜೈನ ಸಮಾಜದ ಅಧ್ಯಕ್ಷ ಮಾಣಿಕಚಂದ ಎಸ್ ಲಾಡರ್, ಕರ್ನಾಟಕ ಜೈನ್ ಅಸೋಸಿಯೇಷನ್ ಬೆಂಗಳೂರು ಹಾವೇರಿ ವಿಭಾಗದ ಸದಸ್ಯರಾದ ಭರತರಾಜ್ ಹಜಾರಿ, ಶ್ರೀ ನೇಮಿನಾಥ ಕಮಿಟಿಯ ಅಧ್ಯಕ್ಷರಾದ ಭೂಪಾಲ್ ಹೊಳಗಿ, ವಿಜಯಕುಮಾರ ಸಾತ್ತೊಂಡ, ಪದ್ಮರಾಜ್ ಕಳಸೂರ, ಸುಧೀರ್ ಉಪಾಧ್ಯ, ಪ್ರಕಾಶ್ ಉಪಾಧ್ಯ, ಶ್ರೇಣಿಕ್ ಉಪಾಧ್ಯ, ಹಾಗೂ ಬ್ರಹ್ಮಕುಮಾರ್ ಹೊಸೂರ್, ಮಹಾವೀರ್ ಕಳಸೂರ ಸೇರಿದಂತೆ ಹಲವಾರು ಜೈನ ರತ್ನತ್ರಯ ಮಹಿಳಾ ಮಂಡಲದ ಸದಸ್ಯರು ಹಾಜರಿದ್ದರು. ಹಲವರು ಮನೆಯಲ್ಲಿಯೇ ಭಗವಾನ್ ಮಹಾವೀರ ಜಯಂತಿಯನ್ನು ಸರರಳವಾಗಿ ಆಚರಿಸಿ, ಬಾಲ ಮಹಾವೀರ ಮೂರ್ತಿಯನ್ನು ತೊಟ್ಟಿಲಲ್ಲಿ ತೂಗಿ ಸಂಭ್ರಮಿಸಿದರು.

Show More

Related Articles

Leave a Reply

Your email address will not be published. Required fields are marked *

Back to top button
Close