ಕಾಟೇನಹಳ್ಳಿ ಗ್ರಾ.ಪಂಗೆ ಅಧ್ಯಕ್ಷ-ಉಪಧ್ಯಕ್ಷರ ಅವಿರೋಧ ಆಯ್ಕೆ
ಹಾವೇರಿ: ತಾಲೂಕಿನ ಕಾಟೇನಹಳ್ಳಿಗ್ರಾಮ ಪಂಚಾಯತಿಯ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಗೆ ಬುಧವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷ-ಉಪಾಧ್ಯಕ್ಷರನ್ನು ಅವಿರೋಧವಾಗಿ ಆಯ್ಕೆಮಾಡಲಾಗಿದೆ.
ಜ.೨೭ ರಂದು ಹಾವೇರಿ ತಾಲೂಕ ಕಾಟೇನಹಳ್ಳಿ ಗ್ರಾಮ ಪಂಚಾಯತ ಕಾರ್ಯಾಲಯದಲ್ಲಿ ನಡೆದ ಗ್ರಾಮ ಪಂಚಾಯತ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣೆ ಜರುಗಿದ್ದು ಅಧ್ಯಕ್ಷರಾಗಿ ಶ್ರೀಮತಿ ಪವಿತ್ರಾ ಕಾಳಪ್ಪ ಕಮ್ಮಾರ (ಅ ವರ್ಗದ ಮಹಿಳೆ) ಉಪಾದ್ಯಕ್ಷರಾಗಿ ಶ್ತೀಮತಿ ಮಂಗಳಾ ಸುರೇಶ ಓಲೇಕಾರ(ಸಾಮನ್ಯ ಮಹಿಳೆ) ಇವರು ಆಯ್ಕೆ ಆಗಿದ್ದು ಚುನಾವಣೆ ಅಧಿಕಾರಿಯಾಗಿ ರಮೇಶ ಹಾವೇರಿ ಅವರು ಕಾರ್ಯನಿರ್ವಹಿಸಿದರು.
ನೂತನ ಅಧ್ಯಕ್ಷ-ಉಪಾಧ್ಯಕ್ಷರನ್ನು ಕೆಎಂಎಫ್ ಅಧ್ಯಕ್ಷ ಬಸವರಾಜ ಅರಬಗೊಂಡ, ತಾ.ಪಂ.ಮಾಜಿ ಸದಸ್ಯ ಅಶೋಕ ಹರನಗಿರಿ, ಗ್ರಾಮದ ಪ್ರಮುಖರಾದ ಹೊನ್ನಪ್ಪ ಯಲಿಗಾರ, ವಿರಬಸಪ್ಪ ಗೋಣೆಮ್ಮನವರ, ಬಸವರಾಜ ಬಾಲಕ್ಕನವರ, ನಾಗರಾಜ ದೊಡ್ಡಕುರುಬರ, ಹುಲಗಪ್ಪ ನಾಗಣ್ಣನವರ, ಹನುಂತಪ್ಪ ಅಂಗರಗಟ್ಟಿ, ಸಂಜೀವ ರಿತ್ತಿ, ಶಿವಮೂರ್ತೆಪ್ಪ ದೊಡ್ಡಕುರುಬರ ಸೇರಿದಂತೆ ಅನೇಕರು ಸನ್ಮಾನಿಸಿ ಪಂಚಾಯತಿ ವ್ಯಾಪ್ತಿಯಗ್ರಾಮಗಳ ಅಭಿವೃದ್ಧಿಗೆ ಶ್ರಮಿಸುವಂತೆ ಕರೆ ನೀಡಿದರು.