ಚಿಂಚೂಳ್ಳಿ ಪುರಸಭೆಯ ಮುಖ್ಯಾಧಿಕಾರಿ ಮೇಲಿನ ಹಲ್ಲೆ ಖಂಡಿಸಿ ಹಾವೇರಿಯಲ್ಲಿ ಜಿಲ್ಲಾ ಪೌರಸೇವಾ ನೌಕರರ ಸಂಘದ ಪ್ರತಿಭಟನೆ
ಹಾವೇರಿ: ಕಲ್ಬುರ್ಗಿಯ ಜಿಲ್ಲೆಯ ಚಿಂಚೂಳ್ಳಿ ಪುರಸಭೆಯ ಮುಖ್ಯಾಧಿಕಾರಿ ಮೇಲಿನ ಹಲ್ಲೆ ಖಂಡಿಸಿ ಹಾವೇರಿಜಿಲ್ಲಾಡಳಿತದ ಮುಂಭಾಗದಲ್ಲಿ ಜಿಲ್ಲಾ ಪೌರಸೇವಾ ನೌಕರರ ಸಂಘದ ಪದಾಧಿಕಾರಿಗಳು ಸೋಮವಾರ ಪ್ರತಿಭಟನೆ ಮುಖ್ಯಾಧಿಕಾರಿಯ ಮೇಲೆ ಹಲ್ಲೆಮಾಡಿದ ಚುನಾಯಿತು ಪ್ರತಿನಿಧಿಗಳ ಸದಸ್ಯತ್ವ ರದ್ದುಪಡಿಸಿ ಅವರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಲು ಆಗ್ರಹಿಸಿ ಮನವಿ ಅರ್ಪಿಸಿದರು.
ದಿನಾಂಕ ೧೯-೦೧-೨೦೨೧ ರಂದು ಕಲಬುರಗಿ ಜಿಲ್ಲೆಯ ಒಂಚೋಳ್ಳಿ ಪುರಸಭೆಯ ಮುಖ್ಯಾಧಿಕಾರಿ ಅಭಯಕುಮಾರ ಕಛೇರಿಯ ದೈನಂದಿನ ಕೆಲಸ ನಿರ್ವಹಿಸುತ್ತಿರುವ ಸಮಯದಲ್ಲಿ ಚುನಾಯಿತ ಸದಸ್ಯರಾದ ಆನಂದ ಕುಮಾರ ಟೈಗರ್ ಏಕಾ ಏಕಿ ಕಛೇರಿಗೆ ಆಗಮಿಸಿ ಸುಳ್ಳು ಬಿಲ್ಲು ಸೃಷ್ಟಿಸಿ ಬಿಲ್ ಪಾವತಿಸಲು ಧಮಕಿ ಹಾಕಿದ್ದು, ಬಿಲ್ ಮಾಡಲು ಬರುವುದಿಲ್ಲ ಎಂದು ಹೇಳಿದ ಮುಖ್ಯಾಧಿಕಾರಿಗಳ ಮೇಲೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡುತ್ತಾ ಹಲ್ಲೆ ಮಾಡಿರುತ್ತಾರೆ. ಇಂದು ಚಿಂಚೋಳಿ ಮುಂದೆ ರಾಜ್ಯಾದ್ಯಂತ ಇದೇ ರೀತಿ ಮುಂದುವರೆದರೆ ಪೌರಸೇವಾ ನೌಕರರಿಗೆ ಭದ್ರತೆಯೇ ಇಲ್ಲದಂತಾಗುತ್ತದೆ. ಇದರಿಂದ ಪೌರ ಸೇವಾ ನೌಕರರು ಭಯದ ವಾತಾವರಣದಲ್ಲಿ ಕರ್ತವ್ಯವನ್ನು ನಿರ್ವಹಿಸುವಂತಾಗಿದೆ. ಮುಖ್ಯಾಧಿಕಾರಿಗಳ ಮೇಲೆ ಹಲ್ಲೆ ಮಾಡಿದ ಪುರಸಭೆಯ ಸದಸ್ಯರನ್ನು ಬಂಧಿಸಿ ಇವರ ಸದಸ್ಯತ್ವವನ್ನು ರದ್ದುಪಡಿಸಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಶಿಫಾರಸ್ಸು ಮಾಡಲು ಮನವಿ ಅರ್ಪಿಸಿ ಆಗ್ರಹಿಸಿದರು.
ಮನವಿ ಅರ್ಪಿಸುವ ಸಂದರ್ಭದಲ್ಲಿ ಗುತ್ತಲ ಪಟ್ಟಣ ಪಂಚಾಯಿತ ಮುಖ್ಯಾಧಿಕಾರಿ ಏಸು ಬೆಂಗಳೂರ, ಜಿಲ್ಲಾ ಪೌರಸೇವಾ ನೌಕರರ ಸಂಘದ ಅಧ್ಯಕ್ಷ ಪರುಶುರಾಮ ಧನೋಜಿ, ಉಪಾಧ್ಯಕ್ಷೆ ಶ್ರೀಮತಿ ಶೈಲಜಾ ಪಾಟೀಲ, ಜಿಲ್ಲಾ ಕಾರ್ಯದರ್ಶಿ ಪ್ರಕಾಶ ಕಬಾಡ್ರ , ಜಗದೀಶಗೌಡ ಪಾಟೀಲ, ಚಂದ್ರು ಮೈಲಮ್ಮನವರ, ಗಂಗಾಧರ ಸಾನಕ್ಯಾನವರ, ಶ್ರೀ ರಾಜು ಮೇಣಸಗಿ ಖಿಸ್ಮತಗಾರ, ಹಾವೇರಿ ನಗರಸಭೆಯ ಶ್ರೀ ಬೀದರಿ, ಮರಡಿಮನಿ, ನೀಲಪ್ಪ ಗುಡ್ಢಣ್ಣನವರ, ಮುತ್ತಪ್ಪ ಆರಿಕಟ್ಟಿ, ಮಂಜು ಆರಿಕಟ್ಟಿ, ಉಚ್ಚಂಗೆಪ್ಪ ರಾಮಣ್ಣವರ, ಬಸವರಾಜ ಕನವಳ್ಳಿ ಭಾಗವಹಿಸಿದ್ದರು.