ಇಂದಿನ ಕೌರವಪತ್ರಿಕೆಯಲ್ಲಿ ಪ್ರಕಟವಾದ ವರದಿ
ಕೆಪಿಎಸ್‌ಸಿ ಪ್ರಶ್ನೆ ಪತ್ರಿಕೆ ಲೀಕ್ ಹಾವೇರಿಗೂ ಲಿಂಕ್?, ಅಗಡಿಯಲ್ಲಿ ಓರ್ವ
ಪೊಲೀಸ್‌ಪೇದೆಯ ಬಂಧನ!
ಹಾವೇರಿ: ಪ್ರಥಮ ದರ್ಜೆ ಸಹಾಯಕ ನೇಮಕಾತಿ ಪ್ರಶ್ನೆ ಪ್ರತ್ರಿಕೆ ಕರ್ನಾಟಕ ಲೋಕಸೇವಾ
ಆಯೋಗದಿಂದಲೇ ಲೀಕ್ ಆಗಿರುವ ಸಂಗತಿ ಸಿಸಿಬಿ ತನಿಖೆಯಲ್ಲಿ ಹೊರ ಬಿದ್ದಿದೆ. ಜ.೧೭ರ
ಭಾನುವಾರ ನಡೆಯಬೇಕಿದ್ದ ಪರೀಕ್ಷೆಯನ್ನು ಮುಂದೂಡಲಾಗಿದ್ದು, ಇದೀಗ ಕೆಪಿಎಸ್‌ಸಿ
ಪ್ರಶ್ನೆ ಪತ್ರಿಕೆ ಲೀಕ್ ಲಿಕ್ ಲಿಂಗ್ ಹಾವೇರಿವರೆಗೂ ಹಬ್ಬಿದೆ. ಮಂಗಳವಾರ ಬೆಳಿಗ್ಗೆ
ಹಾವೇರಿ ತಾಲೂಕಿನ ಅಗಡಿಯಲ್ಲಿ ಓರ್ವ ಪೊಲೀಸ್ ಪೇದೆಯನ್ನು ಸಿಸಿಬಿ ಪೊಲೀಸ್‌ರು ಬಂಧಿಸಿ ವಿಚಾರಣೆಗೆ ಕರೆದುಕೊಂಡು ಹೋಗಿದ್ದಾರೆ.
ಲೋಕ ಸೇವಾ ಆಯೋಗದ ಪರೀಕ್ಷಾ ವಿಭಾಗದಲ್ಲಿ ಕೆಲಸ ಮಾಡುವ ಕೆಳ ಹಂತದ ಇಬ್ಬರು ನೌಕರರು ಸಿಸಿಬಿ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಕರ್ನಾಟಕ ಲೋಕ ಸೇವಾ ಆಯೋಗದ ಪರೀಕ್ಷಾ ವಿಭಾಗದ ಕಂಟ್ರೋಲರ್ ವಿಭಾಗದಲ್ಲಿ ಸೇನಾ ಬೇಡಿ ಎಂಬಾಕೆ ಕೆಲಸ ನಿರ್ವಹಿಸುತ್ತಿದ್ದರು.
ಇವರು ಹಾವೇರಿ ತಾಲೂಕಿನ ಅಗಡಿಗ್ರಾಮದ ಸದ್ಯ ಬೆಂಗಳೂರಿನ ಸಿಟಿ ರಿಜರ್ವ ಪೊಲೀಸ್
ಪೇದೆಯೊಬ್ಬರ ಮೊಬೈಲ್ ವಾಟ್ಸಪ್‌ಗೆ ಪ್ರಶ್ನೆ ಪ್ರತ್ರಿಕೆಯನ್ನು ಕಳಿಸಿರುವ ಸಂಗತಿ
ಬೆಳಕಿಗೆ ಬಂದಿರುವ ಹಿನ್ನಲೆಯಲ್ಲಿ ಮಂಗಳವಾರ ಬೆಳಿಗ್ಗೆ ೬ರಸುಮಾರಿಗೆ ಸಿಸಿಬಿ ತನಿಖಾ
ತಂಡದವರು ಹಾವೇರಿಗೆ ಬಂದು ಇಲ್ಲಿನ ಸೈಬರ್‌ಕ್ರೈಂ ಪೊಲೀಸ್‌ರ ಸಹಾಯದ ಮೂಲಕ ಪೊಲೀಸ್ ಪೇದೆಯನ್ನು ವಶಕ್ಕೆ ಪಡೆದು ವಿಚಾರಣೆಗೆ ಬೆಂಗಳೂರಿಗೆ ಕರೆದುಕೊಂಡು ಹೋಗಿದ್ದಾರೆಂದು
ಖಚಿತ ಮೂಲಗಳಿಂದ ತಿಳಿದು ಬಂದಿದೆ.
ಭಾನುವಾರ ನಡೆಯಬೇಕಿದ್ದ ಪ್ರಶ್ನೆ ಪತ್ರಿಕೆಯನ್ನು ಸೇನಾ ಬೇಡಿ ಆಯೋಗದಲ್ಲಿಯೇ ಕೆಲಸ
ಮಾಡುವ ದ್ವಿತೀಯ ದರ್ಜೆ ಸಹಾಯಕ ರಮೇಶ್ ಎಂಬಾತನಿಗೆ ನೀಡಿದ್ದಾರೆ. ಪೂರ್ವ ನಿಯೋಜಿತ
ಸಂಚಿನಂತೆ ಪ್ರಶ್ನೆ ಪತ್ರಿಕೆಯನ್ನು ರಮೇಶ್ ಕೈಗೆ ನೀಡಿದ್ದು, ಆತ ಅದನ್ನು ಚಂದ್ರು
ಹಾಗೂ ಇತರರಿಗೆ ನೀಡಿ ಹಣ ಪಡೆದಿರುವ ಸಂಗತಿ ಸಿಸಿಬಿ ತನಿಖೆಯಲ್ಲಿ ಈಗಾಗಲೇ ಬೆಳಕಿಗೆ
ಬಂದಿದೆ. ಇದರಲ್ಲಿ ಹಾವೇರಿ ತಾಲೂಕಿನ ಅಗಡಿಯ ಓರ್ವ ಪೊಲೀಸ್ ಪೇದೆಯನ್ನು ಸಿಸಿಬಿ
ಪೊಲೀಸ್‌ರು ವಶಕ್ಕೆ ಪಡೆದಿರುವುದು ಅನೇಕ ಅನುಮಾನಗಳಿಗೆ ಕಾರಣವಾಗಿದೆ.
ಹಾವೇರಿಯಲ್ಲಿಯು ಸಹ ಪ್ರಥಮ ದರ್ಜೆ ಸಹಾಯಕ ನೇಮಕಾತಿ ಪ್ರಶ್ನೆ ಪತ್ರಿಕಗೆಳು ಲೀಕ್
ಆಗಿವೇಯಾ?ಎನ್ನುವ ಅನುಮಾನಗಳು ಮೂಡಿವೆ. ಈಬಗ್ಗೆ ತನಿಖೆ ನಡೆದು ಸತ್ಯ ಹೊರಬರಬೇಕಿದೆ.
ಪ್ರಶ್ನೆ ಪತ್ರಿಕೆ ಮಾರಾಟ ದಂಧೆಯಲ್ಲಿ ತೊಡಗಿ ಸಿಕ್ಕಿಬಿದ್ದ ಚಂದ್ರು ನೀಡಿದ ಮಾಹಿತಿ
ಮೇರೆಗೆ ಆಯೋಗದ ದ್ವಿತೀಯ ದರ್ಜೆ ಸಹಾಯಕ ರಮೇಶ್ ನನ್ನು ಸಿಸಿಬಿ ಪೊಲೀಸರು ವಶಕ್ಕೆ
ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಮತ್ತು
ಎಸಿಪಿ ವೇಣುಗೋಪಾಲ್ ಅವರೇ ಖುದ್ದು ವಿಚಾರಣೆ ನಡೆಸುತ್ತಿದ್ದು, ಆಯೋಗದ ಪರೀಕ್ಷಾ
ವಿಭಾಗದಿಂದ ಪ್ರಶ್ನೆ ಪತ್ರಿಕೆ ಲೀಕ್ ಮಾಡಿದ ಸಂಗತಿಯನ್ನು ಬಾಯಿಬಿಟ್ಟಿದ್ದಾನೆ. ಈ
ಲೀಕ್ ದಂಧೆಯಲ್ಲಿ ಶಾಮೀಲಾಗಿರುವ ಇತರರ ಬಗ್ಗೆ ವಿಚಾರಣೆ ಮುಂದುವರೆದಿದೆ.
ಕೆಲವರ ಕರೆಗಳ ಮಾಹಿತಿ ಆಧರಿಸಿ ತನಿಖೆ ಮುಂದುವರೆಸಿದಾಗ ಪ್ರಶ್ನೆ ಪತ್ರಿಕೆಯ ಲೀಕ್
ಆಗಿರುವುದು ಕೆಪಿಎಸ್ ಸಿ ಹೆಬ್ಬಾಗಿಲಿನಿಂದಲೇ ಎಂಬ ಸಂಗತಿ ಹೊರ ಬಿದ್ದಿದ್ದು ಆಯೋಗ
ನಡೆಸಿರುವ , ನಡೆಸಲಿರುವ ಪರೀಕ್ಷೆಗಳ ಬಗ್ಗೆ ಸಂಶಯದಿಂದ ನೋಡುವಂತಾಗಿದೆ. ಆದರೆ
ಕೆಪಿಎಸ್‌ಸಿ ಪ್ರಶ್ನೆ ಪತ್ರಿಕೆ ಲೀಕ್ ಲಿಂಕ್ ಹಾವೇರಿಗೂ ಹಬ್ಬಿರುವುದು, ಅಗಡಿಯಲ್ಲಿ
ಓರ್ವ ಪೊಲೀಸ್‌ಪೇದೆಯನ್ನು ಬಂಧಿಸಿರುವುದು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ.