ಮಾಜಿ ಸಚಿವ ಶಿವಣ್ಣವರ ಸಮ್ಮುಖದಲ್ಲಿ ಕೋಣತಂಬಗಿ ಗ್ರಾ.ಪಂ.ಸದಸ್ಯ ಬಣಕಾರ ಕಾಂಗ್ರೆಸ್ ಸೇರ್ಪಡೆ
ಹಾವೇರಿ: ತಾಲೂಕಿನ ಕೋಣತಂಬಗಿ ಗ್ರಾಮಪಂಚಾಯತಿ ಸದಸ್ಯ ಫಕ್ಕೀರೇಶ ಹೊನ್ನಪ್ಪ ಬಣಕಾರ ಗುರುವಾರ ಮಾಜಿ ಸಚಿವರು ಹಾಗೂ ಕಾಂಗ್ರೆಸ್‌ಪಕ್ಷದ ಹಿರಿಯ ಮುಖಂಡರಾದ ಬಸವರಾಜ ಶಿವಣ್ಣನವರ ಸಮ್ಮುಖದಲ್ಲಿ ಕಾಂಗ್ರೆಸ್‌ಪಕ್ಷ ಸೇರ್ಪಡೆಯಾದರು. ಕಾಂಗ್ರೆಸ್‌ಪಕ್ಷದ ಧ್ವಜನೀಡುವ ಮೂಲಕ ಪಕ್ಷಕ್ಕೆ ಬರಮಾಡಿಕೊಂಡ ಶಿವಣ್ಣವರ, ಪಂಚಾಯತಿ ವ್ಯಾಪ್ತಿಯ ಗ್ರಾಮಗಳ ಅಭಿವೃದ್ಧಿಗೆ ಶ್ರಮಿಸುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್‌ಪಕ್ಷದ ಮುಖಂಡ ಈರಪ್ಪ ಲಮಾಣಿ, ಗ್ರಾ.ಪಂ. ಮಾಜಿ ಅಧ್ಯಕ್ಷ ತಿಪ್ಪಣ್ಣ ಕಳ್ಳಿಮನಿ, ಗ್ರಾ.ಪಂ.ಸದಸ್ಯರುಗಳಾದ ಬಸನಗೌಡ ಹಿರೇಗೌಡ್ರ , ಪ್ರಮುಖರಾದ ನಾಗನಗೌಡ ಪಾಟೀಲ, ಹುಲಿಗೆಪ್ಪ ಗೋಣೆಮ್ಮನವರ, ಹೊನ್ನಪ್ಪ ಕಳ್ಳಿಮನಿ, ಪರಸಪ್ಪ ಹುಳಕೆಲ್ಲಪ್ಪನವರ, ಮಂಜಯ್ಯ ಹಾಲಪ್ಪನವರಮಠ, ಕರಿಯಪ್ಪ ಯಲಗಚ್ಚ, ಶಿವಬಸಪ್ಪ ಮೈಲಾರಪ್ಪನವರ, ಗ್ರಾ.ಪಂ.ಸದಸ್ಯ ಹೊಳಲಪ್ಪ ಪೂಜಾರ, ಗ್ರಾ.ಪಂ.ಸದಸ್ಯೆ ಚನ್ನವ್ವ ಹಳ್ಳೆಪ್ಪನವರ, ರಾಮಣ್ಣ ಕಳ್ಳಿಮನಿ, ಕಾಂತೇಶ ಹುಳಕೆಲ್ಲಪ್ಪನವರ, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಗುರುನಾಥಯ್ಯ ಮಣ್ಣೂರಮಠ ಮತ್ತಿತರರು ಹಾಜರಿದ್ದರು.