ಬಾಯಾರಿದವರ ದಾಹ ತಣಿಸಿದ ನೀರುದಾನಿ ಶಿವರಾಜ್ ಮರ್ತೂರ
ಎತ್ತಿನಗಾಡಿಯಲ್ಲಿದ್ದ ಶ್ರಮಿಕನಿ ನೀರಿನ ಬಾಟಲಿಯನ್ನು ನೀಡುತ್ತಿರುವ ಶಿವರಾಜ್ ಮರ್ತೂರ.
ಹಾವೇರಿ: ಕೊರೋನಾ ಸೊಂಕಿನ ಎರಡನೆ ಅಲೆ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಏ.೨೮ರಂದು ಲಾಕ್‌ಡೌನ್ ಘೋಷಣೆ ಮಾಡಲಾಗಿದ್ದು, ಈಲಾಕ್ ಡೌನ್ ಮೇ.೧೨ರವರೆಗೆ ಮುಂದುವರೆಯಲಿದೆ ಎಂದು ಸರ್ಕಾರ ಘೋಷಣೆ ಮಾಡಿದೆ. ಏ.೨೮ರಿಂದಲೇ ಲಾಕ್‌ಡೌನ್ ಏಫೇಕ್ಷ ಆರಂಭವಾಗಿದ್ದು, ಪೊಲಿಸ್ ಸಿಬ್ಬಂದಿ, ಪತ್ರಕರ್ತರು, ಆರೋಗ್ಯ ಇಲಾಖೆಯ ಸಿಬ್ಬಂದಿ ಸೇರಿದಂತೆ ಕೊರೋನಾ ವಾರಿಯರ‍್ಸ್ ಬಿಸಿಲಿನ ತಾಪದಲ್ಲಿ ಕಾರ್ಯನಿರ್ವಹಿಸಿದರು. ಬಿಸಿಲಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕೊರೋನಾ ವಾರಿರ್ಯರ‍್ಸ್‌ಗಳಿಗೆ ಹಾಗೂ ದುಡಿವ ವರ್ಗದ ಬಾಯಾರಿ ಬಳಲಿದವರಿಗೆ ಹಾವೇರಿಯ ನೀರುದಾನಿ ಶಿವರಾಜ್ ಮರ್ತರ ಬಿಸಲೇರಿ ಬಾಟಲಿ ನೀರು ವಿತರಿಸುವ ಮೂಲಕ ಮಾನವೀಯ ಕಾರ್ಯಕೈಗೊಂಡರು.
ಸಮಾಜಸೇವಕರಾಗಿರುವ ಶಿವರಾಜ್ ಮರ್ತೂರ, ತಮ್ಮ ದ್ವಿಚಕ್ರವಾಹನದಲ್ಲಿ ನಿತ್ಯ ೨೦೦ಲೀಟರ್ ಶುದ್ಧೀಕರಿಸಿದ ಅರ್ಧ ಲೀಟರ್ ನೀರಿನ ಬಾಟಲಿಗಳನ್ನು ಇಟ್ಟುಕೊಂಡು ಮಧ್ಯಾಹ್ನದ ಹೊತ್ತಿನಲ್ಲಿ ಪೊಲೀಸರು ಕರ್ತವ್ಯ ನಿರ್ವಹಿಸುವ ಸ್ಥಳಗಳಿಗೆ ತಗೆದುಕೊಂಡು ಹೋಗಿ ಅವರಿಗೆ ನೀಡಿದರು.ಕೇವಲ ಪೊಲೀಸರಿಗೆ ಮಾತ್ರ ಇವರು ನೀರಿನ ಬಾಟಲಿಗಳನ್ನು ನೀಡದೇ ಪತ್ರಕರ್ತರು, ಪೌರ ಕಾರ್ಮಿಕರಿಗೆ, ದಾರಿಯಲ್ಲಿ ಕಾಣಿಸುವ ರೈತರು, ವೈದ್ಯಕೀಯ ಸಿಬ್ಬಂದಿ, ಕೃಷಿ ಕಾರ್ಮಿಕರು, ತರಕಾರಿ ವ್ಯಾಪಾರಿಗಳು, ಆಸ್ಪತ್ರೆಗೆ ಚಿಕಿತ್ಸೆಗೆ ಬಂದಿರುವ ಜನರಿಗೂ ಇವರು ನೀರಿನ ಬಾಟಲಿಗಳನ್ನು ನೀಡಿ ಅವರ ದಾಹ ತಣಿಸಿದರು.
ಬುಧವಾರ ಮಧ್ಯಾಹ್ನ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಸುದ್ದಿ ಅರಸುವ ಕಾರ್ಯದಲ್ಲಿ ನಿರತರಾಗಿದ್ದ ಸುದ್ದಿಗಾರರ ಬಳಿ ಆಗಮಿಸಿದ ಶಿವರಾಜ್ ಅವರು ಕಡಿಯುವ ನೀರಿನ ಬಾಟಲಿಯನ್ನು ಬಾಟಲಿಗಳನ್ನು ವಿತರಿಸಿದರು. ಅರ್ಧ ಲೀಟರ್ ನೀರಿನ ಬಾಟಲಿಗಳನ್ನಿಟ್ಟುಕೊಂಡು ನೀರಿನ ಬಾಟಲಿಗಳನ್ನು ಪೊಲೀಸರಿಗೆ, ರೈತರಿಗೆ ನೀಡುತ್ತಿದ್ದ ದೃಶ್ಯ ಕಂಡಿತು,
ಕೂತುಹಲದಿಂದ ಈಬಗ್ಗೆ ಶಿವರಾಜ್ ಮರ್ತೂರ ಅವರನ್ನು ಪ್ರಶ್ನಿಸಿದಾಗ ಬೇಸಿಗೆಯ ಈದಿನಗಳಲ್ಲಿ ಬಿಸಿಲಿನ ತಾಪಹೆಚ್ಚಾಗಿದೆ. ಸುಡು ಬಿಸಿಲಿನಲ್ಲಿ ಕರ್ತವ್ಯ ನಿರ್ವಹಿಸುವ ಪೊಲೀಸರಿಗೆ, ಹೊರಗಡೆಯಿಂದ ಬಂದ ಜನರಿಗೆ ನೀರಿನ ದಾಹ ತಣಿಸಲು ಅರ್ಧಲೀಟರ್ ಬಾಟಲಿಗಳನ್ನು ವಿತರಿಸುತ್ತಿರುವುದಾಗಿ ತಿಳಿಸಿದರು.
ಸ್ಕೂಟಿಯಲ್ಲಿ ಅರ್ಧಲೀಟರ್ ಬಾಟಲಿಗಳನ್ನಿಟ್ಟುಕೊಂಡು ನಗರದ ತುಂಬೆಲ್ಲ ಸಂಚರಿಸಿ ಹೊಲಕ್ಕೆ ತೆರಳುವ ರೈತರು,ಕೃಷಿ ಕಾರ್ಮಿಕರಿಗೆ, ಪೊಲೀಸ್ ಸಿಬ್ಬಂದಿಯವರುಗಳಿಗೆ, ವಾಹನ ಸವಾರರಿಗೆ ಹಿಗೇ ಹಾದಿಯಲ್ಲಿ ಯಾರೆ ಸಿಕ್ಕರು ಅವರಿಗೆ ನೀರಿನ ಬಾಟಲಿಗಳನ್ನು ವಿತರಿಸುವ ಮೂಲಕ ಚಿಕ್ಕ ಸಮಾಜಸೇವೆಯನ್ನು ಮಾಡುತ್ತಿರುವುದಾಗಿ ಅವರು ತಿಳಿಸಿದರು.
ಸಾರ್ವಜನಿಕ ವಿತರಣೆಗೋಸ್ಕರ ನಿತ್ಯ ೨೦೦ ಅರ್ಧ ಲೀಟರ್ ಬಿಸ್ಲೇರಿ ನೀರಿನ ಬಾಟಲಿಗಳನ್ನು ಖರೀದಿಸಿ ವಿತರಿಸುವುದಾಗಿ ತಿಳಿಸಿದರು. ಹೆದ್ದಾರಿ ಪಕ್ಕದಲ್ಲಿ ನಿಂತುಕೊಂಡು ಬೇರೆ ಬೇರೆ ನಗರ ಪಟ್ಟಣಗಳಿಗೆ ಹೋಗುವ ಬೈಕ್, ಟ್ರಕ್, ಕಾರ್‌ದಲ್ಲಿದ್ದವರಿಗೂ ಉಚಿತವಾಗಿ ನೀರಿನ ಬಾಟಲನ್ನು ನೀಡುತ್ತಿದ್ದಾರೆ.
ಬಿಸಿಲಿನ ಬೇಗೆಯಲ್ಲಿ ಬಾಯಾರುವ ಜನರ ದಾಹ ತಣಿಸಲು ಶ್ರಮಿಸುತ್ತಿರುವ ಶಿವರಾಜ್ ಮರ್ತರ ಅವರು ಈಸಂದರ್ಭದಲ್ಲಿ ನೀಡುತ್ತಿರುವ ಸೇವೆ ನಿಜಕ್ಕೂ ಪ್ರಶಂಸಾರ್ಹವಾಗಿದೆ. ಇಂತವರ ಸಂಖ್ಯೆ ಹೆಚ್ಚಲಿ ಎನ್ನುವ ಸದಾಶಯ ಹಲವರದ್ದಾಗಿದೆ.