ಅಂದಲಗಿ ಗ್ರಾಮವನ್ನು ಲಾಕ್ ಡೌನ್ ಮಾಡಿರುವುದು.
ಹಾವೇರಿ: ಜಿಲ್ಲೆಯ ಶಿಗ್ಗಾವಿ ತಾಲೂಕಿನಅಂದಲಗಿಗ್ರಾಮದ ಮಾವಿನಹಣ್ಣಿನ ವ್ಯಾಪಾರಿಗೆ ಕೊರೊನಾ ಸೋಂಕಿರುವುದು ಲಾಬ್ ವರದಿಯಿಂದ ದೃಢಪಟ್ಟಿದೆ. ಸೋಮವಾರ ಹೊಸ ಪ್ರಕರಣಗ ವರದಿಯಾಗಿದ್ದು, ಮುಂಬೈನ ವ್ಯಾಪಾರಿಗಳೊಂದಿಗೆ ನಂಟು ಹೊಂದಿದ್ದ ಅಂದಲಿಗಿಯ ಮಾವಿನಹಣ್ಣಿನ ವ್ಯಾಪಾರಿಗೆ ಪಾಸಿಟಿವ್ ಬಂದ ಕಾರಣಕ್ಕೆ ಆತನನ್ನು ಪಿ-೮೫೩ ಎಂದು ಗುರುತಿಸಲಾಗಿದ್ದು, ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಯಲ್ಲಿರುವ ಐಸುಲೇಶನವಾರ್ಡಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ಅಂದಲಿಗಿ ಸಂಪೂರ್ಣ ಶೀಲ್ಡೌನ್: ಶಿಗ್ಗಾವಿ ತಾಲೂಕಿನ ಅಂದಲಗಿಗ್ರಾಮದ ಮಾವಿನಹಣ್ಣಿನ ವ್ಯಾಪಾರಿಗೆ ಕೊರೊನಾ ಸೋಂಕಿರುವುದು ಲಾಬ್ ವರದಿಯಿಂದ ದೃಢಪಟ್ಟಿರುವ ಹಿನ್ನಲೆಯಲ್ಲಿ ಅಂದಲಗಿಗ್ರಾಮವನ್ನು ತಾಲೂಕಾ ಆಡಳಿತ ಸಂಪೂರ್ಣವಾಗಿ ಶೀಲ್ಡೌನ್ ಮಾಡಿದೆ.
ಅಂದಲಗಿಗ್ರಾಮದ ಮಾವಿನಹಣ್ಣಿನ ವ್ಯಾಪಾರಿ ಬೇರೆ ಬೇರೆಕಡೆಗಳಲ್ಲಿ ಮಾವಿನಕೊಪ್ಪಲಗಳನ್ನು ಗುತ್ತಿಗೆಪಡೆದು ಮಾಹಿನ ಕಾಯಿಗಳನ್ನು ಮುಂಬೈ ಹಾಗೂ ಪೂನಾಗಳಿಗೆ ಕಳಿಸುತ್ತಿದ್ದನೆಂದು, ಈವ್ಯಾಪಾರದ ನಂಟಿಗಾಗಿ ಇತ ಮುಂಬೈಗೆ ಕದ್ದು ಐವರೊಂದಿಗೆ ಇತ ಮುಂಬೈಗೆ ತೆರಳಿದ್ದನೆಂದು, ಇತನನ್ನು ಮೂರುದಿನಗಳ ಕಾಲ ಶಿಗ್ಗಾವಿ ತಾಲೂಕಿನ ವಸತಿಶಾಲೆಯೊಂದರಲ್ಲಿ ಕ್ವಾರಂಟೆನ್ನಲ್ಲಿ ಇಡಲಾಗಿತ್ತೆಂದು, ಇದೀಗ ಇತನ ತಪಾಸಣಾ ವರದಿ ಪಾಜಿಟಿವ್ ಎಂದು ಬಂದ ಕಾರಣಕ್ಕೆ ಜಿಲ್ಲಾಆಸ್ಪತ್ರೆ ಐಶುಲೇಶನ್ ವಾರ್ಡಗೆ ಇತನನ್ನು ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.
ಒಂದುವಾರದ ಹಿಂದೆ ಸವಣೂರಲ್ಲಿನ ಇಬ್ಬರಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗ ಪತ್ತೆಯಾಗಿದ್ದು, ವಾರದ ನಂತರ ಶಿಗ್ಗಾವಿ ತಾಲೂಕಿನ ಅಂದಲಗಿಗ್ರಾಮದ ವ್ಯಕ್ತಿಯಲ್ಲಿ ಕೊರೊನಾ ಪಾಸಿಟಿವ್ ಕಂಡು ಬಂದಿರುವ ಹಿನ್ನಲೆಯಲ್ಲಿ ಮತ್ತೆ ಜಿಲ್ಲೆಯ ಜನರಲ್ಲಿ ಆತಂಕ ಆರಂಭವಾಗಿದೆ.
ಒಂದುವಾರದ ಹಿಂದೆ ಸವಣೂರಲ್ಲಿನ ಇಬ್ಬರಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗ
ಪತ್ತೆಯಾಗಿದ್ದು, ವಾರದ ನಂತರ ಶಿಗ್ಗಾವಿ ತಾಲೂಕಿನ ಅಂದಲಗಿಗ್ರಾಮದ ಇಪ್ಪತ್ತಾರು
ವರ್ಷದ ವ್ಯಕ್ತಿಯಲ್ಲಿ ಕೊರೊನಾ ಪಾಸಿಟಿವ್ ಕಂಡು ಬಂದಿರುವ ಹಿನ್ನಲೆಯಲ್ಲಿ ಮತ್ತೆ
ಜಿಲ್ಲೆಯ ಜನರಲ್ಲಿ ಆತಂಕ ಆರಂಭವಾಗಿದ.
ಗೃಹ ಸಚಿವ ಬಸವರಾಜ ಬೊಮ್ಮಾಯಿ ಕ್ಷೇತ್ರದಲ್ಲಿ
ಪತ್ತೆಯಾದ ಮೂರನೆ ಪ್ರಕರಣ ಇದಾಗಿದೆ. ಅಂದಲಗಿ ಗ್ರಾಮಕ್ಕೆ ತಹಶೀಲ್ದಾರ ಪ್ರಕಾಶ ಕುದರಿ,
ಡಿವೈಎಸ್ಪಿ ಕಲ್ಲೇಶಪ್ಪ ಭೇಟಿ ನೀಡಿದ್ದರು. ಗ್ರಾಮದಿಂದ ಯಾರೂ ಹೊರಗೆ ಹೋಗದಂತೆ
ಗ್ರಾಮಸ್ಥರಿಗೆ ಸೂಚನೆ ನೀಡಲಾಗಿದೆ. ಏಪ್ರೀಲ್ ೨೩,೨೦೨೦ರಿಂದ ಮೂರು ಬಾರಿ ಮುಂಬೈಗೆ
ವ್ಯಾಪಾರಿ ಹೋಗಿ ಬಂದಿದ್ದ . ಮೇ ೫,೨೦೨೦ರಂದು ವ್ಯಾಪಾರಿಯನ್ನ ಕ್ವಾರಂಟೈನ್ ಮಾಡಿ ಸ್ಯಾಂಪಲ್ಸ್ ಆರೋಗ್ಯ ಇಲಾಖೆ ಕಳಿಸಿತ್ತು.