ಹಾವೇರಿ

ಹಾವೇರಿ: ಸರಳವಾಗಿ ರಂಜಾನ್ ಆಚರಣೆ, ಮನೆಗಳಲ್ಲಿಯೇ ಪ್ರಾರ್ಥನೆ

ಸೋಮವಾರ ಈದುಲ್ ಫಿತ್ರ್ ಹಬ್ಬವನ್ನು ಹಾವೇರಿನಗರ ವಿವಿಧ ಭಾಗಗಳಲ್ಲಿರುವ ಮುಸ್ಲಿಂ ಬಾಂಧವರು ತಮ್ಮ ಕುಟುಂಬದ ಸದಸ್ಯರೊಂದಿಗೆ  ಪ್ರಾರ್ಥನೆ ಸಲ್ಲಿಸಿ ಆಚರಿಸಿದರು.
ಹಾವೇರಿ: ಕೋವಿಡ್-೧೯ ಕೊರೊನಾ ಸೋಂಕಿನ ಆತಂಕದ ಹಿನ್ನಲೆಯಲ್ಲಿ ಲಾಕ್‌ಡೌನ್ ನಿಯಮಗಳ ಅನ್ವಯ ಪವಿತ್ರವಾದ ರಂಜಾನ್ ಹಬ್ಬವನ್ನು ಮುಸ್ಲಿಂ ಬಾಂಧವರು ಮೇ.೨೫ರಂದು ಸೋಮವಾರ ಸರಳವಾಗಿ ತಮ್ಮ ತಮ್ಮ ಮನೆಗಳಲ್ಲಿಯೇ ಪ್ರಾರ್ಥನೆ ಸಲ್ಲಿಸುವ ಮೂಲಕ ಆಚರಿಸಿದರು.
ಈದುಲ್ ಫಿತ್ರ್ ಹಬ್ಬವನ್ನು ಹಾವೇರಿನಗರವು ಸೇರಿದಂತೆ ಗ್ರಾಮೀಣ ಭಾಗಗಳಲ್ಲಿಯು ಸಹ ಸರಳವಾಗಿ ಆಚರಿಸಲಾಯಿತು. ಕೆಲವು ಮುಸ್ಲಿಂ ಬಾಂಧವರು ಊಟೋಪಚಾರದ ಖರ್ಚುನ್ನು  ಬಡವರ ವೈದ್ಯಕೀಯ ಚಿಕಿತ್ಸೆಗೆ ನೆರವು ನೀಡುವ ಮೂಲಕ ಮಾನವೀಯತೆ ಮೆರೆದರು.
ರಂಜಾನ್ ತಿಂಗಳ ಉಪವಾಸ ಕೈಗೊಂಡಿದ್ದ ಮುಸ್ಲಿಂಬಾಂಧವರು ತಮ್ಮ ಕುಟುಂಬದವರೊಂದಿಗೆ ಮೇ ೨೫ರ ಸೋಮವಾರ ಬೆಳಿಗ್ಗೆ ತಮ್ಮ ಮನೆಗಳಲ್ಲಿ ಶೃದ್ಧಾಭಕ್ತಿಯಿಂದ ಪ್ರಾರ್ಥನೆ ಸಲ್ಲಿಸಿ ಈದುಲ್ ಫಿತ್ರ್ ಹಬ್ಬವನ್ನು ಆಚರಿಸಿದರು.
ಪ್ರತಿವರ್ಷ ಈ ಹಬ್ಬವನ್ನು ಹೊಸ ಬಟ್ಟೆ, ಫ್ಯಾನ್ಸಿ, ಪಾದರಕ್ಷೆಗಳ ಖರೀದಿ, ಇತ್ಯಾದಿ ಶಾಪಿಂಗ್ ಮೂಲಕ ಸಂಭ್ರಮದಿಂದ ಎದುರುಗೊಳ್ಳುತ್ತಿದ್ದರು. ಆದರೆ ಪ್ರಸಕ್ತವರ್ಷ ಕೋವಿಡ್-೧೯ ಸೋಂಕು ಜನರನ್ನು ಸಂಕಷ್ಟಕ್ಕೆ ತಳ್ಳಿರುವ ಹಿನ್ನಲೆಯಲ್ಲಿ ಸರಳವಾಗಿ ಹಬ್ಬವನ್ನು ಆಚರಿಸಿದರು.
ಜಿಲ್ಲಾ ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ದಾವಲಸಾಬ ಹಿರೇಮುಗದೂರು ತಮ್ಮ ಕುಟುಂಬದ ಸದಸ್ಯರೊಂದಿಗೆ ಶಿವಾಜನಗರದಲ್ಲಿನ ತಮ್ಮ ಮನೆಯಲ್ಲಿ ರಂಜಾನ ಪ್ರಾರ್ಥನೆ ಸಲ್ಲಿಸಿ ಪರಸ್ಪರ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು. ನಗರಸಭೆಯ ಸದಸ್ಯ ಬಾಬುಸಾಬ ಮೋಮಿನಗಾರ ಅವರು ತಮ್ಮ ಕುಟುಂಬದ ಸದಸ್ಯರೊಂದಿಗೆ ತಮ್ಮ ಮನೆಯಲ್ಲಿ ರಂಜಾನ ಪ್ರಾರ್ಥನೆಯನ್ನು ಸಲ್ಲಿಸಿದರು.
ಆಶ್ರಯ ಸಮಿತಿಯ ಸದಸ್ಯ ಮೆಹಬೂಬಅಲಿ ನಾರಂಗಿ ತಮ್ಮ ಕಟುಂಬ ಸದಸ್ಯರೊಂದಿಗೆ ತಮ್ಮ ಮನೆಯಲ್ಲಿ ರಂಜಾನ ಪ್ರಾರ್ಥನೆಯನ್ನು ಸಲ್ಲಿಸಿದರು. ಪ್ರಾಥನೆಯ ನಂತರ ಮುಸಿಂ ಬಾಮಧವರು ತಮ್ಮ ಸ್ನೇಹಿತರಿಗೆ, ಪರಿಚಿತರಿಗೆ ರಂಜಾನ ಹಬ್ಬದ ಶುಭಾಶಯಗಳನ್ನು ಕೋರಿದರು.

ಈಬಗ್ಗೆ ಕೌರವದೊಂದಿಗೆ ತಮ್ಮ ಅನಿಸಿಕೆ ಹಂಚಿಕೊಂಡ ದಾವಲಸಾಬ ಹಿರೇಮೂಗದೂರ, ಕೊರೊನಾ ಸೋಂಕು ಹರಡುವುದನ್ನು ತಡೆಯಲು ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಿಲ್ಲ. ಕೊರೊನಾ ಸೋಂಕಿನ ವಿರುದ್ಧ ಹೋರಾಟ ನಡೆದಿದೆ. ಸೋಂಕು ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ಸಾಮೂಹಿಕ ಪ್ರಾರ್ಥನೆಯ ಬದಲು ಮನೆಯಲ್ಲಿಯೇ ನಾವು ನಮ್ಮ ಕುಟುಂಬದ ಸದಸ್ಯರೊಂದಿಗೆ ರಂಜಾನ ಪ್ರಾರ್ಥನೆ ಸಲ್ಲಿಸಿದ್ದೇವೆ.
ದುಂದುವೆಚ್ಚಕ್ಕೆ ಕಡಿವಾಣ ಹಾಕುವುದರ ಜೊತೆಗೆ, ಈ ಬಾರಿ ಹಬ್ಬಕ್ಕೆ ಹೊಸ ಬಟ್ಟೆಗಳನ್ನು ಖರೀದಿಸಲಿಲ್ಲ. ಉಳಿತಾಯ ಮಾಡಿದ ಹಣದಿಂದ ಸಂಕಷ್ಟದಲ್ಲಿರುವ ಜನರ ಸೇವೆ ಮಾಡುವ ಮೂಲಕ ಸರಳವಾಗಿ ಹಬ್ಬವನ್ನು ಆಚರಿಸಿದ್ದೇವೆ. ಕೊರೊನಾ ಸೋಂಕು ಹರಡುವುದನ್ನು ತಡೆಯಲು ಜಾಗ್ರತೆ ವಹಿಸುವದು ಅಗತ್ಯವಿದೆ. ಸಾಮಾಜಿಕ ಅಂತರ ಕಾಪಾಡಿಕೊಂಡು, ಸರಕಾರ ನೀಡಿರುವ ಎಲ್ಲಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕಿದೆ ಎಂದು ದಾವಲಸಾಬ ಹಿರೇಮೂಗದೂರ ಅವರು ತಿಳಿಸಿದರು.

Show More

Related Articles

Leave a Reply

Your email address will not be published. Required fields are marked *

Back to top button
Close