ಹಾವೇರಿ: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯಾಧ್ಯಕ್ಷರು ಹಾಗೂ ಶಾಸಕರಾದ ಸತೀಶ್ ಜಾರಕಿಹೊಳಿ ಅವರ ಹುಟ್ಟುಹಬ್ಬವನ್ನು ಜೂನ್-೧ರಂದು ಇಲ್ಲಿನ ನಾಗೇಂದ್ರನಮಟ್ಟಿ ಪ್ರದೇಶದಲ್ಲಿರುವ ಶಕ್ತಿ ವೃದ್ಧಾಶ್ರಮದಲ್ಲಿನ ವೃದ್ಧರಿಗೆ ಸಿಹಿ ಹಂಚಿ, ಊಟ ಬಡಿಸುವ ಮೂಲಕ ಆಚರಿಸಲಾಯಿತು.
ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷ ನಾಗರಾಜ್ ಬಡಮ್ಮನವರ, ರಾಜ್ಯ ಯುವ ಕಾಂಗ್ರೆಸ್ ಉಪಾಧ್ಯಕ್ಷರು, ಬೆಳಗಾವಿ ವಿಭಾಗದ ಉಸ್ತುವಾರಿ ರಾಜೇಂದ್ರ, ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ನಾಸಿರಖಾನ್ ಪಠಾಣ, ಸುನಿಲ್ ಬಿದರಿ ಮತ್ತಿತರರು ಮಾತನಾಡಿ, ಕೆಪಿಸಿಸಿ ಕಾರ್ಯಾಧ್ಯಕ್ಚರಾಗಿರುವ ಸತೀಶ ಜಾರಕಿಹೊಳಿಯವರು ಮೌಢ್ಯತೆಯ ವಿರುದ್ಧ ಹೋರಾಟಕ್ಕೆ ಚಾಲನೆ ನೀಡುವ ಮೂಲಕ ಚಂಚಲನ ಸೃಷ್ಟಿಸಿದ್ದಾರೆ. ಪ್ರಖರ ವಿಚಾರಗಳ ಮೂಲಕ ಅಂಧಕಾರದಲ್ಲಿರುವ ಜನರಿಗೆ ತಿಳುವಳಿಕೆ ನೀಡುವ ಕಾರ್ಯಕ್ರಮಗಳು ಮಹತ್ವದ್ದಾಗಿವೆ. ಅವರ ಹೋರಾಟವನ್ನು ಯುವಶಕ್ತಿ ಬೆಂಬಲಿಸುವ ಮೂಲಕ ಅವರ ವಿಚಾರಗಳನ್ನು ಜನತೆಗೆ ತಲುಪಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕಿದೆ ಎಂದರು.
ಸತೀಶ್ ಜಾರಕಿಹೊಳಿ ಅವರು ಸಮಾಜಕ್ಕೆ ನೀಡುತ್ತಿರುವ ಕೊಡುಗೆ ಅತ್ಯಮೂಲ್ಯವಾದದ್ದು, ಅವರಂತಹ ರಾಜಕಾರಿಣಿ ಜೊತೆಗೆ ಕೆಲಸ ಮಾಡುತ್ತಿರುವುದು ನಮ್ಮೆಲ್ಲೆರ ಸೌಭಾಗ್ಯ ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ನಾಸಿರಖಾನ ಪಠಾಣ್ ರವರು ಸತೀಶ್ ಜಾರಕಿಹೊಳಿ ಅವರು ಸಮಾಜಕ್ಕೆ ಅವರು ನೀಡಿರುವ ಕೊಡುಗೆ ಅಪಾರವಾಗಿದೆ. ಅವರ ಜನ್ಮದಿನವನ್ನು ವೃದ್ಧಶ್ರಮದಲ್ಲಿ ಆಚರಿಸುತ್ತಿರುವದು ಸಂತಸದ ಸಂಗತಿಯಾಗಿದೆ ಎಂದರು.
ಈಸಂದರ್ಭದಲ್ಲಿ ಸುನಿಲ್ ಬಿದರಿ, ಶಶಿ ಹುಲಿಕಂತಿಮಠ, ಬಸವರಾಜ್ ಮಾಳಗಿ, ಭರತ್ ರೆಡ್ಡಿ, ಸಂಜಯಗಾಂಧಿ ಸಂಜೀವಣ್ಣವರ್, ಜಾಬೀರ್ ಅಗಡಿ, ಶಾಬಾಜ್ ಕುಲಕರ್ಣಿ, ಜಾವೇದ್ ಹಿತ್ತಲಮನಿ, ಬೀರಪ್ಪ ಲಮಾಣಿ, ಮ್ಯಾಕ್ಬುಲ್ ಯಲವಟ್ಟಿ , ರವೀಂದ್ರ ಬಾಲಣ್ಣವರ್, ಜೀಲಾನಿ ಕ್ವಾಟಿ, ಇಬ್ರಾಹಿಂ ಮುಲ್ಲಾ, ಇಲಿಯಾಸ್ ದರೂದವಾಲೆ ಸೇರಿದಂತೆ ಅನೇಕ ಕಾರ್ಯಕರ್ತರು ಹಾಜರಿದ್ದರು.