ಹಾವೇರಿ: ಕೋವಿಡ್ ಸೋಂಕಿನಿಂದ ಮೂವರು ಗುಣಮುಖರಾಗಿದ್ದು ಜಿಲ್ಲಾ ಕೋವಿಡ್ ಆಸ್ಪತ್ರೆಯಿಂದ ಸೋಮವಾರ ಈ ಮೂವರನ್ನು ಬಿಡುಗಡೆ ಮಾಡಲಾಯಿತು. ಸೋಂಕಿನಿಂದ ಗುಣಮುಖರಾದ ಮೂವರನ್ನು ಆಸ್ಪತ್ರೆಯ ವೈದ್ಯರು ಹಾಗೂ ದಾದಿಯರು, ಅರೆವೈದ್ಯಕೀಯ ಸಿಬ್ಬಂದಿಗಳು ಚಪ್ಪಾಳೆ ಮೂಲಕ ಗುಲಾಬಿ ಹೂ ನೀಡಿ ಶುಭ ಹಾರೈಸಿ ಬಿಳ್ಕೊಟ್ಟರು.
ಜಿಲ್ಲೆಯಲ್ಲಿ ಕೊರೊನಾ ಸೋಂಕಿತರು ೧೪ ಜನರಿದ್ದರು. ಇವರಲ್ಲಿ ಸೋಮವಾರ ಬಿಡುಗಡೆಯಾದ ಮೂವರು ಸೇರಿ ಒಟ್ಟು ಆರು ಜನರು ಗುಣುಮುಖರಾಗಿದ್ದಾರೆ. ಇವರು ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆಹೊಂದಿದ್ದಾರೆ. ಒಟ್ಟು ಇನ್ನು ಎಂಟು ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. ಈಎಂಟು ಜನರು ಸಹ ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಕೋವಿಡ್ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.
ಸೋಮವಾರ ಆಸ್ಪತ್ರೆಯಿಂದ ಬಿಡುಗಡೆಹೊಂದಿದವರು ಸವಣೂರ ಎಸ್.ಎಂ.ಕೃಷ್ಣ ನಗರದ ನಿವಾಸಿ ೫೫ ವರ್ಷದ ಮಹಿಳೆ (P -೧೬೮೯ ), ಯಲವಿಗಿ ಗ್ರಾಮದ ೨೭ ವರ್ಷದ ಮಹಿಳೆ (P -೧೬೯೦) ಹಾಗೂ ಬಂಕಾಪುರ ನಿವಾಸಿ ೨೨ ವರ್ಷದ ಚಾಲಕ(P -೧೬೯೧ ) ಇವರನ್ನು ಸರ್ಕಾರಿ ಅಂಬ್ಯಲೆನ್ಸ್ ಮೂಲಕ ಅವರವರ ಮನೆಗಳಿಗೆ ಕಳುಹಿಸಲಾಗಿದೆ.
ಬಿಡುಗಡೆಯಾದ ಕೃಷ್ಣಾನಗರದ ನಿವಾಸಿ ಮಹಿಳೆಗೆ ಯಾವುದೇ ಪ್ರವಾಸ ಹಿನ್ನಲೆ ಇರಲಿಲ್ಲ. ಬಂಕಾಪುರ ಹಾಗೂ ಯಲವಿಗಿಯ ಸೋಂಕಿತರಿಗೆ ಮುಂಬೈ ಪ್ರವಾಸ ಹಿನ್ನಲೆ ಹೊಂದಿದವರಾಗಿದ್ದರು.ಗಂಟಲು ದ್ರವ್ಯ ಪರೀಕ್ಷೆ ಯಲ್ಲಿ ಇವರಿಗೆ ಕರೊನಾ ಸೋಂಕು ಕಂಡುಬಂದಿತ್ತು.
ಗುಣಮುಖರಾಗಿ ಸೋಮವಾರ ಬಿಡುಗಡೆ ಹೊಂದಿದ P-೧೬೮೯ ಸವಣೂರ ಪಟ್ಟಣದ ಕಂಟೈನ್ಮೆಂಟ್ ಏರಿಯಾದ ಎಸ್.ಎಂ.ಕೃಷ್ಣನಗರದ ನಿವಾಸಿಯಾಗಿದ್ದರು. P-೧೬೯೦ ೨೭ ವರ್ಷದ ಮಹಿಳೆ ಸವಣೂರ ತಾಲೂಕು ಯಲವಗಿ ಗ್ರಾಮದ ನಿವಾಸಿ ಬಿ.ಎಸ್ಸಿ ನರ್ಸಿಂಗ್ ವ್ಯಾಸಂಗ ಮುಗಿಸಿ ಸಿ.ಎಚ್.ಓ( ಅommuಟಿiಣಥಿ ಊeಚಿಟಣh ಔಜಿಜಿiಛಿeಡಿ ) ತರಬೇತಿಗಾಗಿ ಮುಂಬೈನಲ್ಲಿದ್ದ ಈ ಮಹಿಳೆ ಸೇವಾ ಸಿಂಧು ಪಾಸ್ ಪಡೆದು ಹಾವೇರಿಗೆ ಮೇ ೧೯ ರಂದು ಆಗಮಿಸಿದ್ದರು. P -೧೬೯೧ ೨೨ ವರ್ಷದ ವ್ಯಕ್ತಿ ಚಾಲಕ ಬಂಕಾಪುರ ನಿವಾಸಿಯಾಗಿದ್ದಾನೆ.
ಈ ವ್ಯಕ್ತಿ ಬಂಕಾಪುರದಿಂದ ಮೆಣಸಿನಕಾಯಿ ಲೋಡ್‌ನ್ನು ತೆಗೆದುಕೊಂಡು ಮೂರು ಬಾರಿ ಮುಂಬೈನ ‘ವಾಸಿ’ ಮಾರುಕಟ್ಟೆಯ ಕೋಲ್ಡ್ ಸ್ಟೋರೇಜ್‌ಗೆ ಹೋಗಿಬಂದಿದ್ದ. ಮೇ ೨೨ ರಂದು ಈ ಮೂವರಿಗೆ ಕೋವಿಡ್ ಸೋಂಕು ದೃಢಪಟ್ಟ ವರದಿ ಬಂದ ಹಿನ್ನೆಲೆಯಲ್ಲಿ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.
ಡಾ.ಸುರೇಶ ಪೂಜಾರ ಮಾತನಾಡಿ, ಈಗಾಗಲೇ ಆರು ಜನ ಸೊಂಕಿತರು ಗುಣಮುಖರಾದ್ದು, ಉಳಿದವರು ಶೀಘ್ರದಲ್ಲಿಯೇ ಗುಣಮುಖರಾಗಲಿದ್ದು ಅವರ ಕೊನೆಯ ವರದಿ ಬಂದ ನಂತರ ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕೊರೊನಾ ನೋಡಲ್ ಅಧಿಕಾರಿ ಡಾ.ವಿಶ್ವನಾಥ ಸಾಲಿಮಠ, ಡಾ.ಎಲ್.ಎಲ್ ರಾಥೋಡ, ಡಾ. ನಿರಂಜನ, ಪ್ರಭಾರ ನರ್ಸಿಂಗ್ ಅಧಿಕ್ಷರಾದ ರಾಜೇಶ್ವರಿ ಭಟ್, ಆಸ್ಪತ್ರೆಯ ಸಿಬ್ಬಂದಿಗಳು, ವೈದ್ಯರು ಸೇರಿದಂತೆ ಮತ್ತಿತರರು ಹಾಜರಿದ್ದರು.