ಹಾವೇರಿಯ ಎಸ್.ಎಂ.ಎಸ್ ನ ಪ್ರೊ.ಕಾಂತೇಶ ಸಿದ್ದಣ್ಣನವರಿಗೆ “ಜ್ಞಾನಸಂಜೀವಿನಿ” ರಾಜ್ಯ ಪ್ರಶಸ್ತಿ
ಹಾವೇರಿ: ಇಲ್ಲಿನ ಎಸ್.ಎಂ.ಎಸ್ ಕಾಲೇಜಿನ ಕನ್ನಡ ಉಪನ್ಯಾಸಕರಾದ ಪ್ರೊ. ಕಾಂತೇಶ ಹ ಸಿದ್ದಣ್ಣನವರಿಗೆ “ಜ್ಞಾನಸಂಜೀವಿನಿ” ರಾಜ್ಯ ಪ್ರಶಸ್ತಿಯನ್ನು ಮಾ.೨೦ ರಂದು ದಾವಣಗೆರೆಯಲ್ಲಿ ಜರುಗಿದ ಶಿಕ್ಷಣ ವಿಕಾಸ ಪತ್ರಿಕೆಯ ೧೮ನೇ ವಾರ್ಷಿಕೋತ್ಸವ ಮತ್ತು ರಾಜ್ಯ ಮಟ್ಟದ ಶೈಕ್ಷಣಿಕ ಸಮಾವೇಶ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರದಾನ ಮಾಡಲಾಯಿತು.
ಹಾವೇರಿಯ ಎಸ್.ಎಂ.ಎಸ್ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ಪ್ರೊ. ಕಾಂತೇಶ ಸಿದ್ದಣ್ಣನವರ ಅನೇಕ ಸಾಹಿತ್ಯ ಚಟುವಟಿಕೆಗಳಲ್ಲಿ ಭಾಗವಹಿಸುವ ಮೂಲಕ ಶೈಕ್ಷಣಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಶೈಕ್ಷಣಿಕ ಕ್ಷೇತ್ರದಲ್ಲಿನ ಸಾಧನೆಯನ್ನು ಗುರುತಿಸಿ ಇವರನ್ನು “ಜ್ಞಾನಸಂಜೀವಿನಿ” ರಾಜ್ಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿತ್ತು.
ದಾವಣಗೆರೆಯ ಬಾಪೂಜಿ ಬ್ಯಾಂಕ್ ಸಭಾ ಭವನದಲ್ಲಿ ನಡೆದ ಸಮಾರಂಭದಲ್ಲಿ ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಜಿ ಹಾಗೂ ದಾವಣಗೆರೆ ಮಹಾನಗರ ಪಾಲಿಕೆಯ ಮಹಾಪೌರ ಎಸ್.ಟಿ.ವೀರೇಶ, ವಿಶ್ರಾಂತ ಪ್ರಾಚಾರ್ಯ ಕೆ.ಆರ್.ಸಿದ್ದಪ್ಪ ಅಧ್ಯಕ್ಷತೆ ವಹಿಸಿದ್ದರು. ಸ್ವಾಮಿ ವಿವೇಕನಂದ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಂ.ಎಸ್.ಪಾಟೀಲ, ಶಿಕ್ಷಣ-ಜ್ಞಾನ ಮಾಸ ಪತ್ರಿಕೆಯ ಸಂಪಾದಕ ಎನ್.ವಿ.ನಾಗರಾಜ ಮತ್ತಿತತರು ಪ್ರೊ.ಕಾಂತೇಶ ಸಿದ್ದಣ್ಣನವರಿಗೆ “ಜ್ಞಾನಸಂಜೀವಿನಿ” ರಾಜ್ಯ ಪ್ರಶಸ್ತಿ ಪ್ರದಾನ ಮಾಡಿದರು.
“ಜ್ಞಾನಸಂಜೀವಿನಿ” ರಾಜ್ಯ ಪ್ರಶಸ್ತಿ ಪುರಸ್ಕೃತರಾಗಿರುವ ಪ್ರೊ. ಕಾಂತೇಶ ಸಿದ್ದಣ್ಣನವರನ್ನು ಆದರ್ಶ ಶಿಕ್ಷಣ ಸಮಿತಿಯ ಚೇರಮನ್‌ರಾದ ಮಲ್ಲಣ್ಣ ಕೊಳ್ಳಿ, ಗೌರವ ಕಾರ್ಯದರ್ಶಿ ಎಸ್.ಎಸ್.ಬೇವಿನಮರದ
ಆಡ ಳಿತ ಮಂಡಳಿಯವರು ಹಾಗೂ ಪ್ರಾಚಾರ್ಯರು-ಸಿಬ್ಬಂದಿವರ್ಗದವರು ಅಭಿನಂದಿಸಿದ್ದಾರೆ.