Breaking News

ಹಾವೇರಿಜಿಲ್ಲೆಯಲ್ಲಿ ಏ.೨೫ ರಂದು ಕೋವಿಡ್ ಪ್ರಕರಣಗಳ ಸಂಖ್ಯೆ-೯೯, ನಾಲ್ವರ ಮರಣ

 

ಹಾವೇರಿಜಿಲ್ಲೆಯಲ್ಲಿ ಏ.೨೫ ರಂದು ಕೋವಿಡ್ ಪ್ರಕರಣಗಳ ಸಂಖ್ಯೆ-೯೯, ನಾಲ್ವರ ಮರಣ


ಹಾವೇರಿ: ಹಾವೇರಿ ಜಿಲ್ಲೆಯಲ್ಲಿ ಏ.೨೫ರಂದು ಭಾನುವಾರ _ ೯೯ಜನರಿಗೆ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ. ನಾಲ್ವರು ಮರಣಹೊಂದಿದ್ದಾರೆ ಎಂದು ಆರೋಗ್ಯ ಇಲಾಖೆ ಏ.೨೫ ರಂದು ಸಂಜೆ ಬಿಡುಗಡೆ ಮಾಡಿರುವ ವರದಿಯಲ್ಲಿ ದೃಢಪಡಿಸಲಾಗಿದೆ.
ನಾಲ್ವರು ವಿವಿಧ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾರೆ. ಸದರಿಯವರ ಅಂತ್ಯಕ್ರಿಯೆಯನ್ನು ಕೋವಿಡ್-೧೯ ನಿಯಮಾವಳಿಯ ಪ್ರಕಾರ ಕೈಗೊಳ್ಳಲಾಗಿದೆ.
ಏ. ೨೫ ರಂದು ಬ್ಯಾಡಗಿ-೦೬, ಹಾನಗಲ್ಲ-೦೦, ಹಾವೇರಿ-೩೪, ಹಿರೇಕೆರೂರು-೦೫, ರಾಣೇಬೆನ್ನೂರು-೨೮, ಸವಣೂರು-೦೯, ಶಿಗ್ಗಾವ-೦೯. ಇತರೆ ಪ್ರಕರಣಗಳು-೮ ಸೇರಿ ಜಿಲ್ಲೆಯಲ್ಲಿ ಒಟ್ಟು ೯೯ ಜನರಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಘವೇಂದ್ರ ತಿಳಿಸಿದ್ದಾರೆ.
ಇಲ್ಲಿಯವರೆಗೆ ಜಿಲ್ಲೆಯಲ್ಲಿ ೧೨೦೮೨ ಪ್ರಕರಣ ಗಳಿವೆ. ಕೋವಿಡ್ ಪಾಸಿಟಿವ ಪ್ರಕರಣಗಳಲ್ಲಿ ೧೧೪೪೪ ಜನರು ಗುಣಮುಖರಾಗಿದ್ದಾರೆ. ಏ.೨೫ರಂದು ೫೩ ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಏ.೨೫ರಂದು ದೃಢಪಡಿಸಲಾದನಾಲ್ವರ ಮರಣ ಸೇರಿ ಜಿಲ್ಲೆಯಲ್ಲಿ ಇಲ್ಲಿಯವರೆಗೆ ೨೧೦ ಜನರು ಕೊರೋನಾ ರೋಗಕ್ಕೆ ಮೃತಪಟ್ಟಿದ್ದಾರೆ.

Show More

Related Articles

Leave a Reply

Your email address will not be published. Required fields are marked *

Back to top button
Close