ಹಿರೇಕೆರೂರ-ಕಳೆದ ಬಾರಿ ಬಿ.ಸಿ. ಪಾಟೀ ಶಾಸಕನಾಗಿರುವುದು ನಾನು ಬಂದು ಮತಯಾಚನೆ ಮಾಡಿದ್ದಕ್ಕಾಗಿ ಹೊರತು ಬೇರೆ ಯಾವ ಕಾರಣದಿಂದಲ್ಲ. ತಾಲೂಕಿನ ಜನತೆಗೆ ಈಗಾಗಲೆ ಗೋತ್ತಾಗಿದೆ, ಬಿ.ಸಿ.ಪಾಟೀಲ ಅನರ್ಹ ಶಾಸಕ ಎಂದು, ಈ ಕ್ಷೇತ್ರದಲ್ಲಿ ನಿನ್ನ ಪೊಲೀಸ ಗಿರಿ ನಡೆಯುವುದಿಲ್ಲ. ಅಧಿಕಾರದ ದುರಾಸೆ, ಹಣಕ್ಕಾಗಿ ತಾಲೂಕಿನ ಜನತೆಗೆ ನಂಬಿಕೆ ದ್ರೋಹ ಮಾಡಿ ಕಾಂಗ್ರೆಸ ಪಕ್ಷವನ್ನು ತೊರೆದು ಇಗ ಬಿಜೆಪಿ ಸೇರುವ ಮೂದಲು ತಾಲೂಕಿನ ಜನತೆಗೆ ಕೆಳಿದ್ದೀಯಾ? ಈ ಸಲ ನಿನ್ನನ್ನು ಶಾಶ್ವತವಾಗಿ ಅನರ್ಹ ಮಾಡಲು ತಾಲೂಕಿ ಜನತೆ ಸಿದ್ದರಾಗಿದ್ದಾರೆ ಎಂದು ಮಾಜಿ ಮುಖ್ಯಮಂಮತ್ರಿ ಸಿದ್ಧರಾಮಯ್ಯವರು ಹೇಳಿದರು.
ಬುಧವಾರ ಅವರು ಪಟ್ಟಣದ ಶಿರಾಳಕೊಪ್ಪ ರಸ್ತೆಯಲ್ಲಿರುವ ತಂಬಾಕದ ಮೈದಾನದಲ್ಲಿ ಆಯೋಜಿಸಲಾಗಿದ್ದ ಕಾಂಗ್ರೆಸ ಪಕ್ಷದ ಅಭ್ಯರ್ಥಿ ಬಿ.ಹೆಚ್.ಬನ್ನಿಕೋಡ ಅವರ ಪರವಾಗಿ ಭಹಿರಂಗ ಚುನಾವಣೆ ಸಭೆಯನ್ನು ಉದೇಶಿಸಿ ಮಾತನಾಡಿದ ಅವರು ಬಿ.ಸಿ.ಪಾಟೀಲ ಶಾಸಕ ಇಲ್ಲದಿರುವಾಗ ಹಿರೇಕೆರೂರ ತಾಲೂಕಿಗೆ ೧೮೭ ಕೋಟಿರೂ ಹಣವನ್ನು ನೀಡಿರುವು ಕಾಂಗ್ರೆಸ್ ಪಕ್ಷ ರಟ್ಟಿಹಳ್ಳಿ ತಾಲೂಕು ರಚನೆ, ಸರ್ವಜ್ಞ ಪ್ರಾಧಿಕಾರ ಸೇರಿದಂತೆ ತಾಲೂಕಿಗೆ ಹಲವಾರು ಯೋಜನೆಗಳನ್ನು ಜಾರಿಗೆ ಮಾಡಿಸಿಕೊಂಡೆಯಲ್ಲ ಅವಾಗೆಲ್ಲಿ ಹಣವನ್ನು ಯಾರು ನೀಡಿದರಪ್ಪ ನೀನಗೆ ಆವಾಗ ನೀನು ಹಣಕಾಸು ಸಚಿವನಾಗಿದ್ದೇಏನು ಎಂದು ಸಿದ್ದರಾಮಯ್ಯನವರು ಪ್ರಶ್ನಿಸಿದರು.
ಬಿ.ಹೆಚ್.ಬನ್ನಿಕೋಡ ಅವರು ಪ್ರಾಮಾಣಿಕ ವ್ಯಕ್ತಿ,ಜನಪರ ಕಾಳಜಿ ಇಟ್ಟುಕೊಂಡಿರುವ ವ್ಯಕ್ತಿ, ಇಂತವರು ಜನಪ್ರತಿನಿಧಿಗಳಾಗ ಬೇಕು ಹೊರತು ನಿನ್ನಂತ ಕಳಂಕಿತನಲ್ಲ. ಬನ್ನಿಕೋಡ ಅವರ ಕಡೆ ಹಣ ಇಲ್ಲದಿರಬಹುದು, ಆದರೆ ಅವರ ಹಿಂದೆ ತಾಲೂಕಿನ ಜನತೆ ಇದ್ದಾರೆ .ನೀನು ನೀಡುವ ಹಡಬಿಟ್ಟಿ ದುಡ್ಡು ಯಾರದು? ಆ ಹಣವನ್ನು ಪಡೆದು ಜನತೆ ಬಿ.ಹಚ್.ಬನ್ನಿಕೋಡರನ್ನು ಗೆಲ್ಲಿಸುವ ಮೂಲಕ ಸ್ವಾಭಿಮಾನಿಗಳಾಗಲಿದ್ದಾರೆ ಎಂದು ಸಿದ್ದರಾಮಯ್ಯನವರು ಹೇಳಿದರು.
ಮಾಜಿಸಚಿವರಾದ ಹೆಚ್. ಆಂಜನೇಯ, ಹೆಚ್.ಕೆ.ಪಾಟೀಲ, ಮಾಜಿ ಸಂಸದರಾದ ಐ ಜಿ ಸನದಿ, ವಿ.ಎಸ್.ಉಗ್ರಪ್ಪ . ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಬಿ.ಹೆಚ್.ಬನ್ನಿಕೋಡ ಮಾತನಾಡಿದರು.
ಸಭೆಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಮ್.ಎಮ್.ಹಿರೇಮಠ, ಜಿ.ಪಂ ಅಧ್ಯಕ್ಷ ಎಸ್.ಕೆ ಕರಿಯಣ್ಣನವರ, ಮಾಜಿ ಸಚಿವ ರುದ್ರಪ್ಪ ಲಮಾಣಿ, ಶಾಸಕ ಮೂಹನ ಕೊಂಡಜ್ಜಿ, ಪ್ರಮುಖರಾದ ಜಿ.ಎಸ್.ಪಾಟೀಲ,ಎಸ್.ಬಿ.ತಿಪ್ಪಣ್ಣನವರ.ಪ್ರಕಾಶ ಬನ್ನಿಕೋಡ ಸೇರಿದಂತೆ ಜಿಲ್ಲಾ ಹಾಗೂ ತಾಲೂಕಿನ ಮುಖಂಡರು ರೈತ ಮುಖಂಡರು ಇದ್ದರು.