ಅಂದು ಬಸ್ ಇರಲಿಲ್ಲ, ಪ್ರಯಾಣಿಕರಿದ್ದರು, ಇಂದು ಬಸ್ ಗಳಿವೆ ಆದರೆ ಪ್ರಯಾಣಿಕರಿಲ್ಲ….
ಹಾವೇರಿ: ಕೆಲದಿನಗಳ ಹಿಂದೆ ಸಾರಿಗೆ ನೌಕರರ ಮುಷ್ಕರದ ಹಿನ್ನಲೆಯಲ್ಲಿ ಬಸ್ ಗಳ ಸಂಚಾರ ಸ್ಥಗಿತ ಗೊಂಡಿತ್ತು. ಆದರೆ ಪ್ರಯಾಣಿಕರ ಇದ್ದರು. ಆದರೆ ಇಂದು ಬಸ್ ನಿಲ್ದಾಣದಲ್ಲಿ ಬಸ್ ಗಳಿವೆ,ಸಾರಿಗೆ ನೌಕರರು ಮುಷ್ಕರ ದಿಂದ ವಾಪಸು ಕರ್ತವ್ಯ ಕ್ಕೆ ಹಾಜರಾಗಿದ್ದಾರೆ. ವಿಪರ್ಯಾಸವೆಂದರೆ ಬಸ್ ನಲ್ಲಿ ಪ್ರಯಾಣಿಸಲು ಪ್ರಯಾಣಿಕರೆ ಇಲ್ಲ ದಂತಾಗಿದ.
ಕಾರಣ ಕೊರೋನ ಎರಡನೇ ಅಲೆಯ ನಿಯಂತ್ರಣ ದ ಹಿನ್ನಲೆಯಲ್ಲಿ ಘೋಷಣೆ ಮಾಡಿರುವ ಲಾಕ್ ಡೌನ್.
ಸಾರಿಗೆ ಸಂಸ್ಥೆಯ ಬಸ್ ಗಳಸಂಚಾರವು ಸಹ ವಿರಳವಾಗಿದೆ.ಶನಿವಾರ ಪತ್ರಿಕೆಯ ಪ್ರತಿನಿಧಿ ಹಾವೇರಿಯಲ್ಲಿ ನ ಬಸ್ ನಿಲ್ದಾಣ ಕ್ಕೆ ಬೇಟಿ ನೀಡಿದ ಸಂದರ್ಭದಲ್ಲಿ ಬೆರಳೆಣಿಕೆಯಷ್ಟು ಪ್ರಯಾಣಿಕರು ಕಂಡು ಬಂದರು. ಬಸ್ ಗಳ ಸಂಖ್ಯೆ ಸಾಕಷ್ಟಿದೆ.