ಡಾ.ರಾಜಕುಮಾರ್ 92ನೇ ಹುಟ್ಟುಹಬ್ಬ: ಸರಳ ಆಚರಣೆ
ಹಾವೇರಿ: ಕನ್ನಡದ ಮೇರುನಟ ಡಾ.ರಾಜಕುಮಾರ್ ಅವರ 92ನೇ
ಜಯಂತಿಯನ್ನು ಪುಷ್ಪಾರ್ಚನೆ ಮೂಲಕ
ಇಲ್ಲಿನ ಜಿಲ್ಲಾ ವಾರ್ತಾ ಭವನದಲ್ಲಿಂದು
ಸರಳವಾಗಿ ಆಚರಿಸಲಾಯಿತು.
ಕೋವಿಡ್ ಸೋಂಕು ಹಾಗೂ ವಾರಾಂತ್ಯದ ಲಾಕ್ಡೌನ್ ಹಿನ್ನಲೆಯಲ್ಲಿ ಜಿಲ್ಲಾ ವಾರ್ತಾ ಭವನದಲ್ಲಿ ಡಾ.ರಾಜಕುಮಾರ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆಮಾಡಿ ಶ್ರದ್ಧಾಪೂರ್ವಕವಾಗಿ ನಮಿಸಲಾಯಿತು.
ವಾರ್ತಾಧಿಕಾರಿ ಡಾ.ಬಿ.ಆರ್.ರಂಗನಾಥ್, ಸಾಹಿತಿ ಸತೀಶ ಕುಲಕರ್ಣಿ, ವಾರ್ತಾ ಸಹಾಯಕರಾದ ಶ್ರೀಮತಿ ಭಾರತಿ ಎಚ್. ಹಾಗೂ ಕಚೇರಿ ಸಿಬ್ಬಂದಿಗಳು ಭಾಗವಹಿಸಿದ್ದರು.