Breaking News

ಕೊರೋನ ಎರಡನೇ ಅಲೆಯ ವೀಕೆಂಡ್ ಕರ್ಪ್ಯೂದ ಮೊದಲ ದಿನ ಹಾವೇರಿಯಲ್ಲಿ ಹೇಗಿದೆ ಗೊತ್ತಾ?

ಮನೆಯಲ್ಲಿಯೇ ಇರಿ, ಅನಗತ್ಯವಾಗಿ ಹೊರಗಡೆ ಬರಬೇಡಿ

ಶನಿವಾರ ನಗರಸಭೆ ಆಟದ ಮ್ಯೆದಾನ ಕಂಡು ಬಂದದ್ದು ಹೀಗೆ….
ಕೊರೋನ ಎರಡನೇ ಅಲೆಯ ವೀಕೆಂಡ್ ಕರ್ಪ್ಯೂದ ಮೊದಲ ದಿನ ಹಾವೇರಿಯಲ್ಲಿ
ಹೇಗಿದೆ ಗೊತ್ತಾ?
ಹಾವೇರಿ: ಕೊರೋನ ಎರಡನೇ ಅಲೆಯ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ
ರಾತ್ರಿ ಕರ್ಪ್ಯೂ ಮತ್ತು ವೀಕೆಂಡ್ ವಿಧಿಸಿರುವ ಹಿನ್ನಲೆಯಲ್ಲಿ ವೀಕೆಂಡ್ ನ ಮೊದಲ ದಿನವಾದ ಏ.೨೪ರಂದು ಬೆಳಿಗ್ಗೆ ೬ರಿಂದ ಜನರ ಓಡಾಟ ವಿರಳವಾಗಿತ್ತು. ಆದರೆ ಇಲ್ಲಿನ ನಗರಸಭೆಯ ಆಟದ ಅಂಕಣ ಮಾತ್ರ ಸಂಪೂರ್ಣವಾಗಿ ಮಾರುಕಟ್ಟೆ ಮಯವಾಗಿತ್ತು.
ಎಪಿಎಮ್ಸಿ ತರಕಾರಿ ಹರಾಜು ಮಾರುಕಟ್ಟೆ ಹಾಗೂ ಲಾಲಬಹದ್ದೂರ ಶಾಸ್ತ್ರಿ ತರಕಾರಿ ಮಾರುಕಟ್ಟೆಯನ್ನು ಸ್ಥಳಾಂತರ ಮಾಡಿರುವ ಕಾರಣದಿಂದ ನಗರಸಭೆಯ ಮ್ಯೆದಾನ ಜನಜಂಗುಳಿ ಇಂದ ಕೂಡಿತ್ತು. ಸಾಮಾಜಿಕ ಅಂತರ ಇರಲಿಲ್ಲ. ಎಲ್ಲಿಂದರಲ್ಲಿ ವಾಹನಗಳ ನಿಲುಗಡೆ ಮಾಡಲಾಗಿತ್ತು.
ಜನರಿಗೆ ತರಕಾರಿಗಳನ್ನು ‌ಖರೀದಿಸಲು ಪರ್ಯಾಯ ವ್ಯವಸ್ಥೆ ಇರದ ಕಾರಣ ಅನಿವಾರ್ಯ ವಾಗಿ ಜನರು ನಗರಸಭೆಯ ಮ್ಯೆದಾನಕ್ಕೆ ಆಗಮಿಸಿದ್ದರು. ಭದ್ರತೆಗೆ ನಿಯೋಜಿತ ಪೊಲೀಸ್ ಸಿಬ್ಬಂದಿ ನಾಗರಿಕರಿಗೆ, ತರಕಾರಿ ವರ್ತಕರಿಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ತಿಳಿಹೇಳುತ್ತಿದ್ದರು.
ನಗರದಲ್ಲಿ ಏ.೨೪ರಂದು ಶನಿವಾರ ಹಾವೇರಿಯಲ್ಲಿ ಯಾವುದೇ  ಅಂಗಡಿ, ಮುಂಗಟ್ಟುಗಳನ್ನು ತೆರಯಲಾಗಿರಲಿಲ್ಲ. ಆದರೆ ಕೆಲವು ಬೇಕರಿಗಳು, ಕಿರಾಣಿ‌ಅಂಗಡಿಗಳು ಅರ್ಧ ಬಾಗಿಲನ್ನು ತೆರೆದು ವಹಿವಾಟು ನಡೆಸಿದರು.
 ಪೊಲೀಸ್ರು ಮುಚ್ಚಿಸಿದರು.
ಪೊಲೀಸರು ನಗರದಲ್ಲಿಎಲ್ಲ ವಾಣಿಜ್ಯ ಚಟುವಟಿಕೆಗಳು‌ ಸೇರಿದಂತೆ  ಜನರ ಓಡಾಟಕ್ಕೂಬ್ರೇಕ್ ಹಾಕುತ್ತಿದ್ದಾರೆ. ಧ್ವನಿವರ್ಧಕದ ಮೂಲಕ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸಿದರು.
ಸದಾ ಜನರ‌ ಓಡಾಟದಿಂದ ಜನದಟ್ಟಣೆಯಿಂದ ಕೂಡಿರುತ್ತಿದ್ದ ಮಹಾತ್ಮಾ ಗಾಂಧಿರಸ್ತೆ. ಲಾಲಬಹದ್ದೂರ ಶಾಸ್ತ್ರಿ‌ಮಾರುಕಟ್ಟೆ,‌ಜೆಪಿ ಸರ್ಕಲ್, ಬಸ್ ನಿಲ್ದಾಣ ರಸ್ತೆಗಳು ಜನರ ಓಡಾಟವಿಲ್ಲದೇ ಬಣಗೂಡುತಿದ್ದವು.
ನಗರದಲ್ಲಿ ಪೊಲೀಸರಿಂದ ಭಾರೀ ಬಿಗಿ ಭದ್ರತೆ:
ನಗರದೆಲ್ಲಡೆ ಸರ್ಕಲ್ ಗಳಲ್ಲಿ ಪೊಲೀಸರು ಲಾಠಿಹಿಡಿದು ಓಡಾಟ ನಡೆಸಿದ್ದಾರೆ. ನಗರದ ಬಸ್ ನಿಲ್ದಾಣ ದಲ್ಲಿ ಬಸ್ ಗಳ ಸಾಕಷ್ಟು ಸಂಖ್ಯೆಯಲ್ಲಿ ದ್ದವು. ಆದರೆ ಪ್ರಯಾಣಿಕರ ಸಂಖ್ಯೆ ತೀರಾ ವಿರಳವಾಗಿತ್ತು.ಅನಗತ್ಯವಾಗಿ ಯಾರು ಸಹ ಮನೆಯಿಂದ ಹೊರಬರಬೇಡಿ.
Show More

Related Articles

Leave a Reply

Your email address will not be published. Required fields are marked *

Back to top button
Close