ಕೋವಿಶೀಲ್ಡ್ ಲಸಿಕೆ ಹಾಕಿಸಿಕೊಂಡ ನಗರದ ಮಕ್ಕಳ ತಜ್ಞ ಡಾ.ರಾಜಕುಮಾರ ಮರೋಳ
ಹಾವೇರಿ: ಬಹುನಿರೀಕ್ಷಿತ ಕೋವಿಶೀಲ್ಡ್ ಲಸಿಕಾ ಕಾರ್ಯಕ್ರಮಕ್ಕೆ ಜಿಲ್ಲಾ ಹಾಗೂ ತಾಲೂಕಾ ಆಸ್ಪತ್ರೆ ಕೇಂದ್ರಗಳಲ್ಲಿ ಚಾಲನೆ ದೊರೆತಿದೆ. ನಗರದ ಜಿಲ್ಲಾ ಆಸ್ಪತ್ರೆಯಲ್ಲಿ ಬುಧವಾರ ಮಕ್ಕಳತಜ್ಞವೈದ್ಯರಾಗಿರುವ ಡಾ.ರಾಜಕುಮಾರ ಮರೋಳ ಅವರು ಕೋವಿಶೀಲ್ಡ್ ಲಸಿಕೆಯನ್ನು ಜಿಲ್ಲಾ ಆಸ್ಪತ್ರೆಯ ವ್ಯದ್ಯರಿಂದ ಪಡೆದುಕೊಂಡರು.
ಕೋವಿಶೀಲ್ಡ್ ಲಸಿಕೆ ಪಡೆದಕೊಂಡ ಡಾ.ರಾಜಕುಮಾರ ಮರೋಳ ಅವರನ್ನು ಪತ್ರಿಕೆಯ ಪ್ರತಿನಿಧಿ ಪ್ರತಿಕ್ರಿಯೆ ಕೇಳಿದ ಸಂದರ್ಭದಲ್ಲಿ ಮಾತನಾಡಿದ ಡಾ.ರಾಜಕುಮಾರ ಮರೋಳ ಅವರು, ತಾವು ಹಾಗೂ ತಮ್ಮಶ್ರೀಮತಿ ಡಾ.ರೇಣುಕಾ ಮರೋಳ ಅವರು ಬುಧವಾರ ಜಿಲ್ಲಾ ಆಸ್ಪತ್ರೆಯಲ್ಲಿ ಕೋವಿಶೀಲ್ಡ್ ಲಸಿಕ ಪಡೆದಿರುತ್ತೇವೆ, ತಮಗೆ ಯಾವುದೇ ತರಹದ ತೊಂದೆರಗಳಾಗಲಿ, ಅಡ್ಡಪರಿಣಾಮಗಳಾಗಲಿ ಕಾಣಿಸಿಕೊಂಡಿಲ್ಲ. ಲಸಿಕೆ ಪಡೆಯುವದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಕೊರೋನಾ ಬರದಂತೆ ತಡೆಯಬಹುದಾಗಿದೆ. ತಾವು ಸೇರಿದಂತೆ ನಗರದ ಅನೆಕ ವ್ಯದ್ಯರುಗಳು ಕೋವಿಶೀಲ್ಡ್ ಲಸಿಕೆ ಪಡೆದಿದ್ದಾರೆ. ಸಾರ್ವಜನಿಕರು ಕೋವಿಶೀಲ್ಡ್ ಲಸಿಕ ಪಡೆಯುವ ಮೂಲಕ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದಾಗಿದೆ ಎಂದು ಅವರು ಹೇಳಿದರು.