ಹಾವೇರಿಯಲ್ಲಿ ಮತ್ತೆ ಸರಗಳ್ಳರ ಹಾವಳಿ, ವಿದ್ಯಾನಗರದಲ್ಲಿ ಮಹಿಳೆಯ ಚಿನ್ನದ ತಾಳಿಸರ್ ಕಿತ್ತು ಇಬ್ಬರು ಕಳ್ಳರು ಪರಾರಿ
ಹಾವೇರಿ; ಹಾವೇರಿ ನಗರದಲ್ಲಿ ಮತ್ತೆ ಸರಗಳ್ಳರ ಹಾವಳಿ ಮುಂದಯವರೆದಿದ್ದು, ಬುಧವಾರ ಸಂಜೆ ಇಲ್ಲಿನ ವಿದ್ಯಾನಗರದಲ್ಲಿ ಮಹಿಳೆಯ ಕೊರಳಲ್ಲಿದ್ದ ನಾಲ್ಕು ತೊಲೆಯ ಚಿನ್ನದ ಮಾಂಗಲ್ಯ ಸರವನ್ನು ಕಳ್ಳರು ಕಿತ್ತುಕೊಂಡು ಪರಾರಿಯಾಗಿರುವ ಘಟನೆ ನಡೆದಿದೆ.
ವಿದ್ಯಾನಗರದ ಪೂರ್ವ ಬಡಾವಣೆಯ ತಮ್ಮ ಮನೆಯಿಂದ ಬುಧವಾರ ಸಂಜೆ ೬-೩೦ರ ಸಮಯದಲ್ಲಿ ಕೋಮಲಮ್ಮ ಬ್ಯಾಡಗಿ ಎನ್ನುವರು ವಾಯುವಿಹಾರಕ್ಕೆ ಹೊರಟಿದ್ದವೇಳೆ ಪಲ್ಸರ್ ದ್ವಿಚಕ್ರ ವಾಹನದಲ್ಲಿ ಹೆಲ್ಮೆಟ್ ಧರಿಸಿದ್ದ ಇಬ್ಬರು ಖದಿಮರು ಮಹಿಳೆಕೊರಳಲ್ಲಿನ ೬೦ಗ್ರಾಮ್ ಮಾಂಗಲ್ಯ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ.
ಕೋಮಲಮ್ಮ ಬ್ಯಾಡಗಿ (76) ಸರ ಕಳೆದುಕೊಂಡವರು. ಇವರು ಯುವತಿಯೊಂದಿಗೆ ವಾಕಿಂಗ್ ಮಾಡುವ ವೇಳೆ ಇಬ್ಬರು ಬೈಕ್‌ನಲ್ಲಿ ಬಂದು ಸರ ಅಪಹರಿಸಿದರು. ಸರ ಕಸಿದುಕೊಳ್ಳುವ ವೇಳೆ ವೃದ್ಧೆ ನೆಲಕ್ಕೆ ಬಿದ್ದ ಪರಿಣಾಮ ಸೊಂಟದ ಮೂಳೆ ಮುರಿದಿದ್ದು, ಇವರನ್ನುದಾವಣಗೆರೆ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಸ್ಥಳಕ್ಕೆ ಡಿವೈಎಸ್ಪಿ ವಿಜಯಕುಮಾರ ಸಂತೋಷ, ನಗರ ಠಾಣೆ ಸಬ್‌ಇನ್‌ಸ್ಪೆಕ್ಟರ್ ಹೊಸಮನಿ ಮತ್ತು ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ, ಮಾಹಿತಿ ಕಲೆ ಹಾಕಿದರು. ಘಟನಾ ಸ್ಥಳದ ಸುತ್ತಮುತ್ತ ಇರುವ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ವೀಕ್ಷಿಸಿದರು.