Breaking News

ಅತಿವೃಷ್ಟಿ ಹಾನಿ: ಮೂಲಸೌಕರ್ಯಗಳ ದುರಸ್ತಿಗೆ ಹಾವೇರಿಜಿಲ್ಲೆಗೆ ೨೫೯೯.೨೫ ಲಕ್ಷ ರೂ. ಬಿಡುಗಡೆ

ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ

ಅತಿವೃಷ್ಟಿ ಹಾನಿ: ಮೂಲಸೌಕರ್ಯಗಳ ದುರಸ್ತಿಗೆ ಹಾವೇರಿಜಿಲ್ಲೆಗೆ ೨೫೯೯.೨೫ ಲಕ್ಷ ರೂ. ಬಿಡುಗಡೆ
ಹಾವೇರಿ: ಕಳೆದ ಆಗಸ್ಟ್, ಸೆಪ್ಟೆಂಬರ ಹಾಗೂ ಅಕ್ಟೋಬರ್-೨೦೨ರ ಮಾಹೆಯಲ್ಲಿ ಜಿಲ್ಲೆಯಲ್ಲಿ ಉಂಟಾದ ಅತಿವೃಷ್ಟಿ ಹಾಗೂ ಪ್ರವಾಹದಿಂದ ಹಾನಿಯಾದ ಮೂಲ ಸೌಕರ್ಯಗಳ ಅಭಿವೃದ್ಧಿಗೆ ಸರ್ಕಾರ ಜಿಲ್ಲೆಗೆ ೨೫೯೯.೨೫ ಲಕ್ಷ ರೂ. ಬಿಡುಗಡೆ ಮಾಡಿದೆ. ಅನುಷ್ಠಾನಾಧಿಕಾರಿಗಳು ಎರಡು ದಿನದೊಳಗಾಗಿ ಕಾಮಗಾರಿವಾರು ಅಂದಾಜು ವೆಚ್ಚ ಹಾಗೂ ಕ್ರಿಯಾ ಯೋಜನೆಯನ್ನು ಸಲ್ಲಿಸುವಂತೆ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಸೂಚಿಸಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣಂದಲ್ಲ ಮಂಗಳವಾರ ಸಂಜೆ ಅತಿವೃಷ್ಟಿ ಕಾಮಗಾರಿಗಳ ದುರಸ್ತಿ ಕುರಿತಂತೆ ಸಂಬಂಧಿಸಿದ ಇಲಾಖಾ ಅಧಿಕಾರಿಗಳ ಸಭೆ ನಡೆಸಿದ ಅವರು ಎರಡು ದಿನಗಳಲ್ಲಿ ಕ್ರಿಯಾ ಯೋನೆಯ ಅನುಮೋದನೆ ಪಡೆದು ನಿಗಧಿತ ಅನುದಾನದ ಶೇ.೭೫ರಷ್ಟು ಅನುದಾನ ಬಿಡುಗಡೆಮಾಡಿಸಕೊಂಡು ಕಾಲಮಿತಿಯೊಳಗೆ ಕಾಮಗಾರಿ ಪೂರ್ಣಗೊಳಿಸಲು ಸೂಚನೆ ನೀಡಿದರು.

ಲೋಕೋಪಯೋಗಿ ಇಲಾಖೆ ರಾಜ್ಯ ಹೆದ್ದಾರಿ ಮತ್ತು ಪ್ರಮುಖ ಜಿಲ್ಲಾ ರಸ್ತೆಗಳ ದುರಸ್ಥಿಗೆ ೨೯೮.೫೩ ಲಕ್ಷ ರೂ., ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಗ್ರಾಮೀಣ ರಸ್ತೆಗಳು ಮತ್ತು ಸೇತುವೆಗಳ ದುರಸ್ಥ್ಥಿಗೆ ೧೦೪೫.೩೫ ಲಕ್ಷ ರೂ., ಹೆಸ್ಕಾಂಗೆ ೧.೨೭ ಲಕ್ಷ ರೂ., ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳ ಕೊಠಡಿ ಮತ್ತು ದುರಸ್ಥಿಗೆ ೯೧೬.೦೩ ಲಕ್ಷ ರೂ., ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಂಗನವಾಡಿ ಕಟ್ಟಡ ದುರಸ್ಥಿಗೆ ೩೩೮.೦೭ ಲಕ್ಷ ರೂ. ಸೇರಿ ಒಟ್ಟು ೨೫೯೯.೨೫ ಲಕ್ಷ ರೂ.ಗಳನ್ನು ಸರ್ಕಾರ ಅತಿವೃಷ್ಟಿ ಹಾಗೂ ಹಾನೀಗಾಡ ಮೂಲ ಸೌಕರ್ಯಗಳ ತುರ್ತು ದುರಸ್ಥಿಗೆ ಬಿಡುಗಡೆ ಮಾಡಿದೆ ಎಂದು ತಿಳಿಸಿದರು.
೨೦೨೦ರ ಆಗಸ್ಟ್, ಸೆಪ್ಟೆಂಬರ ಹಾಗೂ ಅಕ್ಟೋಬರ ಮಾಹೆಯಲ್ಲಿ ಅತಿವೃಷ್ಟಿ ಹಾಗೂ ಪ್ರವಾಹದಿಂದ ಹಾನಿಯಾದ ಕಾಮಗಾರಿಗಳನ್ನು ಮಾತ್ರ ಕೈಗೆತ್ತಿಕೊಳ್ಳಬೇಕು. ಈಗಾಗಲೇ ತಾವು ಸಲ್ಲಿಸಿರುವ ಪ್ರಸ್ತಾವನೆಗಳನ್ನು ಪಾತ್ರ ಕೈಗೆತ್ತಿಗೊಳ್ಳಬೇಕು. ಸ್ಥಳ ಮತ್ತು ಕಾಮಗಾರಿಗಳನ್ನು ಬದಲಾವಣೆಮಾಡುವ ಅವಕಾಶ ಇರುವುದಿಲ್ಲ. ಈಗಾಗಲೇ ಹಾನಿಯಾದ ಕಾಮಗಾರಿಗಳ ಸ್ಥಳ ಹಾಗೂ ವಿವರಗಳು ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಆಗಿದೆ. ಈ ಕಾಮಗಾರಿಗಳನ್ನೇ ಹಂಚಿಕೆಯಾದ ಅನುದಾನದಲ್ಲಿ ದುರಸ್ತಿ ಮತ್ತು ನಿರ್ಮಾಣಕೈಗೊಳ್ಳುವಂತೆ ಅನುಷ್ಠಾನಾಧಿಕಾರಿಗಳಿಗೆ ಸೂಚನೆ ನೀಡಿದರು.
ಅತಿವೃಷ್ಟಿ ಪರಿಹಾರದಡಿ ಬಿಡುಗಡೆಯಾದ ಅನುದಾನವನ್ನು ಬಳಕೆಮಾಡದೇ ವ್ಯರ್ಥಮಾಡಿದರೆ ಅಂತಹ ಅಧಿಕಾರಿಗಳ ವಾರ್ಷಿಕ ಕಾರ್ಯನಿರ್ವಹಣಾ ವರದಿಯಲ್ಲಿ ನಮೂದಿಸಿ ಅಂತಹವರ ಮೇಲೆ ಕ್ರಮಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದು ಜಿಲ್ಲಾಧಿಕಾರಿಗಳು ಎಚ್ಚರಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಯೋಗೇಶ್ವರ, ಉಪವಿಭಾಗಾಧಿಕಾರಿ ಡಾ.ದಿಲೀಷ್ ಶಶಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಅಂದಾನೆಪ್ಪ ವಡಗೇರಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪರ್ದೇಶಕ ಪಿ.ವೈ.ಶೆಟ್ಟೆಪ್ಪನವರ, ನಿರ್ಮಿತಿ ಕೇಂದ್ರದ ಯೋಜನಾಧಿಕಾರಿ ತಿಮ್ಮೇಶ, ತಹಶೀಲ್ದಾರ ಶಂಕರ, ಹೆಸ್ಕಾಂ, ಲೋಕೋಪಯೋಗಿ, ಪಂಚಾಯತ್ ರಾಜ್ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.

Show More

Related Articles

Leave a Reply

Your email address will not be published. Required fields are marked *

Back to top button
Close