ಹಿರೇಕೆರೂರು

ಬಿಜೆಪಿಗೆ ಬಿ.ಸಿ.ಪಿ ಸೇರ್ಪಡೆ, ಉಪಚುನಾವಣೆಗೆ ಸಿದ್ದರಾಗಲು ಕಾರ್ಯಕರ್ತರಿಗೆ ಬಿ.ಸಿ.ಪಾಟೀಲ ಸೂಚನೆ, ಗುರುವಾರ ಹಿರೇಕೆರೂರಿಗೆ ಭೇಟಿ.

ಹಾವೇರಿ: ನನ್ನ ತಾಲ್ಲೂಕಿನ ಅಭಿವೃದ್ಧಿ ಕಾರ್ಯದಲ್ಲಿ ಹಿನ್ನಡೆಯನ್ನು ಉಂಟು ಮಾಡಿದ ಈ ಹಿಂದಿನ ಸರ್ಕಾರದ ವಿರುದ್ಧ ಹೋರಾಡಿ ನನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆಯನ್ನು ಕೊಟ್ಟಿರೋದು ತಮ್ಮಲ್ಲರಿಗೂ ಗೊತ್ತಿರುವ ಸಂಗತಿ. ಇಷ್ಟು ದಿನ ಹಿರೇಕೆರೂರು ತಾಲ್ಲೂಕಿನ ಅಭಿವೃದ್ದಿಗೆ ನನ್ನ ಜೊತೆಗೆ ಕ್ಯೆ ಜೋಡಿಸಿ ಎಂತಹ ಕಷ್ಟ ಕಾಲದಲ್ಲೂ ಜೊತೆಗಿದ್ದು. ಈ ಮೂಲಕ ನನ್ನ ಅಭಿಮಾನಿ ಬಂಧುಗಳು ಮತ್ತು ಕಾರ್ಯಕರ್ತರಿಗೆ ವಿನಂತಿಸಿ ಕೊಳ್ಳುವದೆನೆಂದರೆ ಡಿ.೫ರಂದು ನಡೆಯಲಿರುವ ಉಪ ಚುನಾವಣೆಗೆ ನಾವೆಲ್ಲರೂ ಸಿದ್ಧರಾಗಿ ಉಪ ಚುನಾವಣೆಯಲ್ಲಿ ಗೆಲುವನ್ನು ಸಾಧಿಸಬೇಕೆಂಬುದು ನನ್ನ ಹಾಗೂ ತಮ್ಮೆಲ್ಲರ ಆಶಯ ಎಂದು ಬಿ.ಸಿ.ಪಾಟೀಲರು ತಮ್ಮ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.
ಈ ವಿಷಯಕ್ಕೆ ಸಂಬಂಧಿಸಿದಂತೆ ಇಂದು ಮಾನ್ಯ ಸರ್ವೋಚ್ಛ ನ್ಯಾಯಾಲಯವು ನೀಡಿರುವಂತಹ ತೀರ್ಪು ಸ್ವಾಗತಿಸುತ್ತೇನೆ.
ಆದ್ದರಿಂದ ತಮ್ಮೆಲ್ಲರ ಅಪ್ಪಣೆ ಹಾಗೂ ಆರ್ಶಿವಾದದಿಂದ ನಾನು ಗುರುವಾರ ಬೆಳಿಗ್ಗೆ ೧೦ ಗಂಟೆಗೆ ಬೆಂಗಳೂರಿನಲ್ಲಿರುವ ಭಾರತೀಯ ಜನತಾ ಪಾರ್ಟಿ ಕಚೇರಿಯಲ್ಲಿ ಬಿಜೆಪಿ ಪಕ್ಷವನ್ನು ಸೇರ್ಪಡೆಗೊಳ್ಳುತ್ತಿದ್ದೇನೆ. ಹಾಗೂ ಸಾಯಂಕಾಲ ೩ ಗಂಟೆಗೆ ಬೆಂಗಳೂರಿನಿಂದ ಹಿರೇಕೆರೂರ ತಾಲ್ಲೂಕಿಗೆ ಆಗಮಿಸುತ್ತಿದ್ದು. ತಾಲ್ಲೂಕಿನ ಬತ್ತೀಕೊಪ್ಪ ಕ್ರಾಸ್ ನಿಂದ ಹಿರೇಕೆರೂರನವರೆಗೆ ಬೈಕ್ ರ‍್ಯಾಲಿಯನ್ನು ಹಮ್ಮಿಕೊಂಡಿದ್ದು ಕಾರಣ ಹಿರೇಕೆರೂರು ಹಾಗೂ ರಟ್ಟಿಹಳ್ಳಿ ತಾಲ್ಲೂಕಿನ ಕಾರ್ಯಕರ್ತರು ಅಭಿಮಾನಿ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಬ್ಯೆಕ್ ರ‍್ಯಾಲಿಯನ್ನು ಯಶಸ್ವಿಗೊಳಿಸಬೇಕೆಂದು ಸೇವಕ ಬಿ.ಸಿ.ಪಾಟೀಲ್ ಕೋರಿದ್ದಾರೆ.

Show More

Leave a Reply

Your email address will not be published. Required fields are marked *

Back to top button
Close