ಹಾವೇರಿಜಿಲ್ಲೆಯಲ್ಲಿ ಏ.೨೮ರಂದು ಕೋವಿಡ್ ಪ್ರಕರಣಗಳ ಸಂಖ್ಯೆ-೩೬, ಇಬ್ಬರ ಮರಣ
ಹಾವೇರಿ: ಕೊರೋನಾ ನಿಯಂತ್ರಣಕ್ಕಾಗಿ ರಾಜ್ಯಸರ್ಕಾರ ೧೪ದಿನಗಳ ಲಾಕ್ಡೌನ್ ಘೊಷಣೆಮಾಡಿದ್ದು, ಲಾಕ್ಡೌನ್ ಮೊದಲದಿನವಾದಏ.೨೮ರಂದು ಬುಧವಾರ ಹಾವೇರಿ ಜಿಲ್ಲೆಯಲ್ಲಿ ಬರೋಬ್ಬರಿ ೩೬ ಜನರಿಗೆ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ. ಇಬ್ಬರು ಮರಣಹೊಂದಿದ್ದಾರೆ ಎಂದು ಆರೋಗ್ಯ ಇಲಾಖೆ ಏ.೨೮ ರಂದು ಸಂಜೆ ಬಿಡುಗಡೆ ಮಾಡಿರುವ ಮಾಧ್ಯಮ ಪ್ರಕರಣೆಯಲ್ಲಿ ದೃಢಪಡಿಸಲಾಗಿದೆ.
ಮೃತಪಟ್ಟಿರುವ ಒಬ್ಬರು ಹಾವೇರಿ ತಾಲೂಕಿನವರಾಗಿದ್ದು, ಇವರು ಏ.೨೭ರಂದು ಮೃತಪಟ್ಟಿದ್ದಾರೆ. ಇನ್ನೊಬ್ಬರು ರಾಣೇಣೆಬೆನ್ನೂರು ತಾಲೂಕಿನವರಾಗಿದ್ದಾರೆ. ಇವರು ಏ.೨೬ರಂದು ಮೃತಪಟ್ಟಿದ್ದಾರೆ. ಸದರಿಯವರ ಅಂತ್ಯಕ್ರಿಯೆಯನ್ನು ಕೋವಿಡ್-೧೯ ನಿಯಮಾವಳಿಯ ಪ್ರಕಾರ ಕೈಗೊಳ್ಳಲಾಗಿದೆ.
ಏ. ೨೮ ರಂದು ಬ್ಯಾಡಗಿ-೦೧, ಹಾನಗಲ್ಲ-೦೩, ಹಾವೇರಿ-೧೦, ಹಿರೇಕೆರೂರು-೦೧, ರಾಣೇಬೆನ್ನೂರು-೦೮, ಸವಣೂರು-೦೩, ಶಿಗ್ಗಾವ-೦೭. ಇತರೆ ಪ್ರಕರಣಗಳು-೩ ಸೇರಿ ಜಿಲ್ಲೆಯಲ್ಲಿ ಒಟ್ಟು ೩೬ ಜನರಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಘವೇಂದ್ರ ತಿಳಿಸಿದ್ದಾರೆ.
ಇಲ್ಲಿಯವರೆಗೆ ಜಿಲ್ಲೆಯಲ್ಲಿ ೧೨೨೯೫ ಪ್ರಕರಣ ಗಳಿವೆ. ಕೋವಿಡ್ ಪಾಸಿಟಿವ ಪ್ರಕರಣಗಳಲ್ಲಿ ೧೧೫೪೯ ಜನರು ಗುಣಮುಖರಾಗಿದ್ದಾರೆ. ಏ.೨೮ರಂದು ೩೦ ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಏ.೨೮ರಂದು ದೃಢಪಡಿಸಲಾದ ಇಬ್ಬರ ಮರಣ ಸೇರಿ ಜಿಲ್ಲೆಯಲ್ಲಿ ಇಲ್ಲಿಯವರೆಗೆ ೨೧೭ ಜನರು ಕೊರೋನಾ ರೋಗಕ್ಕೆ ಮೃತಪಟ್ಟಿದ್ದಾರೆ.