ಹಾವೇರಿಜಿಲ್ಲೆಯಲ್ಲಿ ಏ.೨೩ ರಂದು ಕೋವಿಡ್ ಪ್ರಕರಣಗಳ ಸಂಖ್ಯೆ-೭೪, ಇಬ್ಬರ ಮರಣ, ಜಿಲ್ಲೆಯಲ್ಲಿ ಒಟ್ಟಾರೆ ೨೦೧ಕ್ಕೇರಿದ ಮೃತರ ಸಂಖ್ಯೆ
“ಸಾರ್ವಜನಿಕ ಮಹಾಪ್ರಭುಗಳೇ ದಯವಿಟ್ಟು ಮಾಸ್ಕ್ ಹಾಕಿಕೊಳ್ಳಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ”
ಹಾವೇರಿ: ಹಾವೇರಿ ಜಿಲ್ಲೆಯಲ್ಲಿ ಏ.23ರಂದು ಶುಕ್ರವಾರ 74 ಜನರಿಗೆ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ ಇಬ್ಬರು ಮರಣಹೊಂದಿದ್ದಾರೆ ಎಂದು ಆರೋಗ್ಯ ಇಲಾಖೆ ಏ.23 ರಂದು ಸಂಜೆ ಬಿಡುಗಡೆ ಮಾಡಿರುವ ವರದಿಯಲ್ಲಿ ದೃಢಪಡಿಸಲಾಗಿದೆ.
ಮೃತಪಟ್ಟವರಲ್ಲಿ ಹಾವೇರಿಯ ನಾಗೇಂದ್ರಮನಟ್ಟಿಯ ನಿವಾಸಿ 65 ವರ್ಷದ ಮಹಿಳೆಯಾಗಿದ್ದು, ಸದರಿಯವರು ದಿ.16-ರಂದು ತೀವೃ ಉಸಿರಾಟದ ತೊಂದರೆಯಿಂದ ಹಾವೇರಿಯ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದರು. ಅಂದೇ ಇವರ ಮೂಗಿನ ದ್ರವವನ್ನು ಪರೀಕ್ಷಿಸಲಾಗಿ, ಇವರಿಗೆ ಕೋವಿಡ್ ದೃಢಪಟ್ಟಿರುತ್ತದೆ. ಇವರು ದಿ.22-04-2021ರಂದು ಹಾವೇರಿಯ ಜಿಲ್ಲಾ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾರೆ. ಸದರಿಯವರ ಅಂತ್ಯಕ್ರಿಯೆಯನ್ನು ಕೋವಿಡ್-೧೯ ನಿಯಮಾವಳಿಯ ಪ್ರಕಾರ ಕೈಗೊಳ್ಳಲಾಗಿದೆ.
ಮೃತಟ್ಟವರ ಪೈಕಿ ಇನ್ನೊಬ್ಬರು ಜಿಲ್ಲೆಯ ಹಿರೇಕೆರೂರು ತಾಲೂಕಿನ ಹಂಸಬಾವಿಯ 70 ವರ್ಷದ ಪುರುಷರಾಗಿದ್ದು, ಸದರಿಯವರು ದಿ.16-04-2021 ರಂದು ತೀವೃ ಉಸಿರಾಟದ ತೊಂದರೆಯಿಂದ ಹಾವೇರಿಯ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದರು. ಅಂದೇ ಇವರ ಮೂಗಿನ ದ್ರವವನ್ನು ಪರೀಕ್ಷಿಸಲಾಗಿ, ಇವರಿಗೆ ಕೋವಿಡ್ ದೃಢಪಟ್ಟಿರುತ್ತದೆ. ಇವರು ದಿ.೨೨-೦೪-೨೦೨೧ರಂದು ಹಾವೇರಿಯ ಜಿಲ್ಲಾ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾರೆ. ಸದರಿಯವರ ಅಂತ್ಯಕ್ರಿಯೆಯನ್ನು ಕೋವಿಡ್-೧೯ ನಿಯಮಾವಳಿಯ ಪ್ರಕಾರ ಕೈಗೊಳ್ಳಲಾಗಿದೆ.
ಏ. 23 ರಂದು ಬ್ಯಾಡಗಿ-10, ಹಾನಗಲ್ಲ-07, ಹಾವೇರಿ-18, ಹಿರೇಕೆರೂರು-15, ರಾಣೇಬೆನ್ನೂರು-18 ಸವಣೂರು-೦೦, ಶಿಗ್ಗಾವ-01. ಇತರೆ ಪ್ರಕರಣಗಳು-5ಸೇರಿ ಜಿಲ್ಲೆಯಲ್ಲಿ ಒಟ್ಟು ೭೪ ಜನರಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಘವೇಂದ್ರ ತಿಳಿಸಿದ್ದಾರೆ.
ಇಲ್ಲಿಯವರೆಗೆ ಜಿಲ್ಲೆಯಲ್ಲಿ ೧೧೮೯೧ ಪ್ರಕರಣ ಗಳಿವೆ. ಕೋವಿಡ್ ಪಾಸಿಟಿವ ಪ್ರಕರಣಗಳಲ್ಲಿ ೧೧೩೫೨ ಜನರು ಗುಣಮುಖರಾಗಿದ್ದಾರೆ. ಏ.23ರಂದು 58 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಏ.23ರಂದು ದೃಢಪಡಿಸಲಾದ ಇಬ್ಬರ ಮರಣ ಸೇರಿ ಜಿಲ್ಲೆಯಲ್ಲಿ ಇಲ್ಲಿಯವರೆಗೆ 201 ಜನರು ಕೊರೋನಾ ರೋಗಕ್ಕೆ ಮೃತಪಟ್ಟಿದ್ದಾರೆ.