Breaking News

೮೬ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ: ಸೋಮವಾರದೊಳಗೆ ವೇದಿಕೆಗಳ ವಿನ್ಯಾಸ ಅಂತಿಮಗೊಳಿಸಿ: -ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ

೮೬ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ:
ಸೋಮವಾರದೊಳಗೆ ವೇದಿಕೆಗಳ ವಿನ್ಯಾಸ ಅಂತಿಮಗೊಳಿಸಿ:
-ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ
ಹಾವೇರಿ: ೮೬ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಮುಖ್ಯ ವೇದಿಕೆ ಸೇರಿದಂತೆ ವಿವಿಧ ಸ್ಟಾಲ್‌ಗಳ ವಿನ್ಯಾಸವನ್ನು ಸೋಮವಾರದ ಒಳಗಾಗಿ ಅಂತಿಮಗೊಳಿಸಿ ಸಲ್ಲಿಸಲು ಜಿಲ್ಲಾಧಿಕಾರಿ ಸಂಯ ಶೆಟ್ಟೆಣ್ಣವರ ಅವರು ಸೂಚನೆ ನೀಡಿದ್ದಾರೆ.
ಅಖಿಲ ಭಾರತ ೮೬ನೇ ಕನ್ನಡ ಸಾಹಿತ್ಯ ಸಮ್ಮೇಳನದ ಮುಖ್ಯ ವೇದಿಕೆಯ ನಿರ್ಮಾಣ ಹಾಗೂ ವಿವಿಧ ಮಳಿಗೆಗಗಳ ವಿನ್ಯಾಸ ಕುರಿತಂತೆ ಎಂ.ಸಿ.ಎ. ತಂಡ ಅಧಿಕಾರಿಗಳೊಂದಿಗೆ ಗುರುವಾರ ಉದ್ದೇಶಿತ ನಿವೇಶನದ ಸ್ಥಳ ಪರಿಶೀಲನೆ ನಡೆಸಿತು.
ಅಭಿಯಂತರರು ಹಾಗೂ ಎಂ.ಸಿ.ಎ. ತಂಡದೊಂದಿಗೆ ಚರ್ಚಿಸಿದ ಜಿಲ್ಲಾಧಿಕಾರಿಗಳು, ಮುಖ್ಯ ವೇದಿಕೆ ನಿರ್ಮಾಣ, ಪುಸ್ತಕ ಮಳಿಗೆಗಳ ನಿರ್ಮಾಣ ಹಾಗೂ ವಸ್ತು ಪ್ರದರ್ಶನ ಮಳಿಗೆಗಳು, ಊಟದ ಪೆಂಡಾಲ್ ನಿರ್ಮಾಣ, ಮಾಧ್ಯಮ ಕೇಂದ್ರ, ಫುಡ್ ಕೋರ್ಟ್, ವಾಹನ ನಿಲುಗಡೆ, ನೊಂದಣಿ ಕೌಂಟರ್, ಸಾರ್ವಜನಿಕ ಓಡಾಟಕ್ಕೆ ರಸ್ತೆ ನಿರ್ಮಾಣ, ಪಾರ್ಕಿಂಗ್ ವ್ಯವಸ್ಥೆ, ಸಮಾನಾಂತರ ವೇದಿಕೆಗಳ ನಿರ್ಮಾಣ ಹಾಗೂ ವೇದಿಕೆಗಳ ನೀಲಿ ನಕ್ಷೆಗಳನ್ನು ಅಂತಿಮಗೊಳಿಸಿ ಸೋಮವಾರದೊಳಗಾಗಿ ಸಲ್ಲಿಸಲು ಸೂಚನೆ ನೀಡಿದರು.
ಸಮ್ಮೇಳನಕ್ಕೆ ಪೂರ್ವ ಸಿದ್ಧತೆಗಳು ನಿರಂತರವಾಗಿ ನಡೆಯಬೇಕು. ಸಮ್ಮೇಳನ ನಡೆಯುವ ಖಾಲಿ ಜಮೀನಿನ ಸ್ವಚ್ಛತೆ ಮತ್ತು ಸಮತಟ್ಟುಗೊಳಿಸುವ ಕಾರ್ಯ, ತಾತ್ಕಾಲಿಕ ರಸ್ತೆ ನಿರ್ಮಾಣ ಕಾರ್ಯವನ್ನು ತ್ವರಿತವಾಗಿ ಆರಂಭಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮುಖ್ಯ ವೇದಿಕೆ ಹೊರತುಪಡಿಸಿ ಎರಡು ಸಮನಾಂತರ ವೇದಿಕೆ ನಿರ್ಮಾಣ ಅಗತ್ಯವಿದೆ. ಒಂದು ಸಾವಿರದಿಂದ ಒಂದೂವರೆಸಾವಿರ ಸಾಮರ್ಥ್ಯದ ಆಸನ ವ್ಯವಸ್ಥೆಯ ಸಮನಾಂತರ ವೇದಿಕೆ ಅವಶ್ಯಕತೆ ಇದ್ದು, ಹಳೆ ಪಿಬಿ ರಸ್ತೆಯಲ್ಲಿರುವ ಸಿದ್ಧರಾಮೇಶ್ವರ ಸಮುದಾಯ ಭವನ, ಅಂಬೇಡಕರ ಭವನ, ಜಿ.ಎಚ್.ಕಾಲೇಜ್ ಕ್ರೀಡಾಂಗಣದಲ್ಲಿ ತಾತ್ಕಾಲಿಕ ವೇದಿಕೆ ನಿರ್ಮಾಣ ಮಾಡುವ ಕುರಿತಂತೆ ಅಧಿಕಾರಿಗಳಿಂದ ಸಲಹೆ ಪಡೆಯಲಾಯಿತು.
ಈಗಾಗಲೇ ೧೯ ಸಮಿತಿಗಳನ್ನು ರಚಿಸಲಾಗಿದೆ. ಸಮಿತಿವಾರು ಟೆಂಡರ್ ಪ್ರಕ್ರಿಯೆ ಕೈಗೊಳ್ಳಲು ಅನುಕೂಲವಾಗುವಂತೆ ಬೇಡಿಕೆಯ ಪಟ್ಟಿಯನ್ನು ಸಲ್ಲಿಸುವಂತೆ ಸೂಚನೆ ನೀಡಲಾಯಿತು.
ಫೆಬ್ರುವರಿ ಕೊನೆಯ ವಾರದಲ್ಲಿ ನಿಗಧಿಯಾದ ಸಮ್ಮೇಳನ ತಾತ್ಕಾಲಿಕವಾಗಿ ಮುಂದೂಡಲಾಗಿದೆ. ಶೀಘ್ರವೇ ದಿನಾಂಕ ನಿಗಧಿಯಾಗಬಹುದು. ಸಮ್ಮೇಳನದ ಸಿದ್ಧತೆ ಕೆಲಸಗಳು ಹಿನ್ನಡೆಯಾಗಬಾರದು. ನಿರಂತರವಾಗಿ ಸಿದ್ಧತಾ ಕಾರ್ಯಗಳನ್ನು ಸಮಿತಿಗಳ ಸದಸ್ಯ ಕಾರ್ಯದರ್ಶಿಗಳು ನಡೆಸುವಂತೆ ಸೂಚನೆ ನೀಡಿದರು.
ಅಪರ ಜಿಲ್ಲಾಧಿಕಾರಿ ಯೋಗೇಶ್ವರ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಡಿ.ವೈ.ಎಸ್.ಪಿ.ವಿಜಯಕುಮಾರ ಸಂತೋಷ್, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಲಿಂಗಯ್ಯ ಹಿರೇಮಠ, ತಾಲೂಕಾ ಅಧ್ಯಕ್ಷ ಯಲ್ಲಪ್ಪ ಆಲದಕಟ್ಟಿ, ಕಾರ್ಯದರ್ಶಿ ಎಸ್.ಎಸ್.ಬೇವಿನಮರದ, ಜಿಲ್ಲಾ

Show More

Related Articles

Leave a Reply

Your email address will not be published. Required fields are marked *

Back to top button
Close