ವ್ಯೆವಿಧ್ಯತೆ

ಮೂಲಸೌಲಭ್ಯಗಳ ಕೊರತೆಯ ನಡುವೆ ಕೊರೊನಾ ವಿರುದ್ಧ ಜೀವದ ಹಂಗು ತೊರೆದು ಹೋರಾಟ ನಡೆಸುತ್ತಿರುವ ಪೊಲೀಸರಿಗೊಂದು ದೊಡ್ಡಸಲಾಮ್….


ಹಾವೇರಿ: ಕೊರೊನಾ ಲಾಕ್‌ಡೌನ್ ಘೋಷಣೆಯಾದಾಗಿನಿಂದ ತಮ್ಮ ಜೀವದ ಹಂಗು ತೊರೆದು ಕರ್ತವ್ಯ ನಿರ್ವಹಿಸುತ್ತಿರುವವರಲ್ಲಿ ಪ್ರಮುಖವಾಗಿ ವೈದ್ಯರು, ದಾದಿಯರು, ಆಶಾಕಾರ್ಯಕರ್ತರೆಯರು ನಾನಾ ಇಲಾಖೆಯ ಅಧಿಕಾರಿಗಳನ್ನು ಹೆಸರಿಸಬಹುದು. ಆದರೆ ಜನರನ್ನು ನಿಯಂತ್ರಿಸುವಲ್ಲಿ ನಮ್ಮ ಪೊಲೀಸ್ ಸಿಬ್ಬಂದಿ ಹಾಗೂ ಅಧಿಕಾರಿಗಳ ಕಾರ್ಯನಿರ್ವಹಣೆ ನಿಜಕ್ಕು ಅಭಿನಂದನಾರ್ಹವಾಗಿದೆ.
ಲಾಕ್‌ಡೌನ್‌ನಿಂದಾಗಿ ಒತ್ತಡದ ಮಧ್ಯ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸರು ಕೆಲಸ ಒಂದು ರೀತಿ ತಮ್ಮ ಜೀವವನ್ನೆ ಪಣಕ್ಕಿಟ್ಟಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪೊಲೀಸರು ಲಾಠಿ ಬೀಸುತ್ತಾರೆ, ದನಕ್ಕೆ ಬಡಿಯುವ ಹಾಗೆ ಬಡಿಯುತ್ತಾರೆ, ಧರ್ಪದಿಂದ ವತಿಸುತ್ತಾರೆ. ಅವರಿಗೆ ಮಾನವೀಯತೆ ಇಲ್ಲ! ಎಂದು ನಾವು-ನೀವು ಜಾಲತಾಣಗಳಲ್ಲಿ, ಪತ್ರಿಕೆಗಳಲ್ಲಿ ಪೋಟೋಗಳನ್ನು, ವಿಡಿಯೋ ತುಣುಕುಗಳನ್ನು ನೋಡುತ್ತೇವೆ. ಇವರಬಗ್ಗೆ ಕೆಟ್ಟದ್ದಾಗಿ ಬಿಂಬಿಸುವ ಕಾಮೆಂಟ್‌ಗಳನ್ನು ಓದುತ್ತೇವೆ. ಆದರೆ ಪೊಲೀಸ್‌ರು ಯಾವ ಸ್ಥಿತಿಯಲ್ಲಿ ನಮ್ಮ ರಕ್ಷಣೆಗಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎನ್ನುವದನ್ನು ನಾವು ಮರೆತುಬಿಟ್ಟಿದ್ದೇವೆ?.
ಹೌದು ಕೊರೊನಾ ವಿರುದ್ಧ ಜೀವದ ಹಂಗು ತೊರೆದು ಹೋರಾಟ ನಡೆಸುತ್ತಿರುವ ಕೊರೊನಾ ಯೋಧರರಾಗಿರುವ ಪೊಲೀಸರು ಹಾಗೂ ಅಧಿಕಾರಿಗಳು ನಮಗೆ ಈ ಸಂದರ್ಭದಲ್ಲಿ ವೈರಿಗಳಾಗಿ ಕಾಣುತ್ತಾರೆ!. “ನಾವು ತಗೆದುಕೊಂಡು ಓಡಾಡುವ ವಾಹನವನ್ನು ನಿಲ್ಲಿಸಿ ಲೈಸನ್ಸ್ ಕೇಳುತ್ತಾರೆ, ಲೈಸನ್ಸ್ ಇದ್ದರೆ ಹೆಲ್ಮೇಟ್ ಕೇಳುತ್ತಾರೆ, ಎರಡು ಇದ್ದರೆ ಇನ್ಸುರನ್ಸ್ ಕೇಳುತ್ತಾರೆ. ಒಂದು ವೇಳೆ ಇನ್ಸುರನ್ಸ್ ಇದ್ದರು ವಾಯುಮಾಲಿನ್ಯ ನಿಯಂತ್ರಣ ಪ್ರಮಾಣ ಪತ್ರ ಕೇಳುತ್ತಾರೆ, ಇಬ್ಬರು ಯಾಕೆ ಹೊರಟಿದ್ದೀರಿ ಎನ್ನುತ್ತಾರೆ. ಇದರಲ್ಲಿ ಯಾವುದಾದರು ಒಂದು ತಪ್ಪನ್ನು ಹುಡುಕಿ ನಮ್ಮಿಂದ ದಂಡ ವಸೂಲಿಮಾಡುತ್ತಾರೆ ಎಂದು ನಾವು ಗೊಣಗುತ್ತೇವೆ”. ಆದರೆ ದಂಡವಸೂಲಿಯ ಹಿಂದಿನ ಉದ್ದೇಶವನ್ನು ನಾವು ಮರೆತುಬಿಡುತ್ತೇವೆ.
ಕೊರೊನಾ ಸೋಂಕು ಹರಡುವುದನ್ನು ತಡೆಯಲು ಸಮುದಾಯದ ಜೀವವನ್ನು ರಕ್ಷಣೆ ಮಾಡಲು ಸರಕಾರ ಲಾಕ್‌ಡೌನ್ ಘೋಷಣೆಮಾಡಿದೆ. ನಾವು ಸುರಕ್ಷಿತವಾಗಿರಲು ಮನೆಯಿಂದ ಹೊರಬರಬೇಡಿ ಎಂದು ಕೇಂದ್ರ-ರಾಜ್ಯ ಸರ್ಕಾರಗಳು, ಸ್ಥಳೀಯ ಜಿಲ್ಲಾಡಳಿತ, ನಗರಸಭೆ, ಪುರಸಭೆ, ಪಟ್ಟಣಪಂಚಾಯತಿ, ಗ್ರಾಮಪಂಚಾಯತಿಗಳ ಹೋಯ್ಯಕೊಳ್ಳುತ್ತಿವೆ. ಆದರು ನಮ್ಮಲ್ಲಿ ಕೆಲವು ಪಣ್ಯಾತ್ಮರು ದ್ವಿಚಕ್ರವಾಹನಗಳನ್ನು ತಗೆದುಕೊಂಡಿ ನಗರಸಂಚಾರಕ್ಕೆ ಹೊರಟು ಬಿಡುತ್ತಾರೆ. (“ಇದಕ್ಕೆ ನಾವು ಹೊರತಲ್ಲ. ನಾವು ಬೈಕ್‌ಗಳಲ್ಲಿ ಓಡಾಡಿ ಸುದ್ದಿ ಸಂಗ್ರಹಿಸಬೇಕು, ಸಂಗ್ರಹಿಸಿದ ಮಾಹಿತಿಯನ್ನು ಕಂಪ್ಯೂಟರ ಮುಂದೆ ಕುಳಿತು ಟೈಪಿಸಬೇಕು”.”ಟೈಪಿಸಿದ ಸುದ್ದಿಗೆ ತಕ್ಕ ಪೋಟೋಗಳನ್ನು ಪತ್ರಿಕೆಯ ಕಾರ್ಯಾಲಯಕ್ಕೆ ಕಳಿಸಬೇಕು”. “ಪತ್ರಿಕೆಯ ಹೊಟ್ಟೆ ತುಂಬಿಸಬೇಕು, ಪತ್ರಿಕೆಯ ಹೊಟ್ಟೆ ತುಂಬಿದರೆ ನಮ್ಮ ಹೊಟ್ಟೆ ಅರೆಬರೆ ತುಂಬುತ್ತದೆ!”. ಪೂರ್ತಿಯಾಗಿ ಅಲ್ಲ”!).
ಇನ್ನು ನಮ್ಮ ವೃತ್ತಿಯಲ್ಲಿ ಅಸೂಯೇ, ಧ್ವೇಶ, ಹೊಟ್ಟೆ ಕಿಚ್ಚು, ಕಿವಿ ಕಡಿಯುವುದು, ಸಣ್ಣಪತ್ರಿಕೆ-ದೊಡ್ಡ ಮತ್ತು ಅಂತರಾಷ್ಟ್ರೀಯ ಪತ್ರಿಕೆ ಎಂದು ತಾರತಮ್ಯ ಮಾಡುವುದು, ಕೆಲವರು ಕೆಲವರನ್ನು ಅಸ್ಪ್ರಶ್ಯರಂತೆ ಕಾಣುವುದು, ತಾವು ಬರೆದದ್ದು ಅಷ್ಟೆ ಸುದ್ದಿ, ಬೇರೆಯವರು ಬರೆದದ್ದು ರದ್ದಿಯಂತೆ ಕಾಣುವುದು!. ಅವ್ನ ಪತ್ರಿಕೆ ಯಾರು ಓದುತ್ತಾರೆ..! ಎಂದು ಗೇಲಿಮಾಡುವುದು. ಬರೆಯುತ್ತಾ ಹೋದರೆ ನಮ್ಮದೇ ದೊಡ್ಡ ಪುರಾಣವಾಗುತ್ತದೆ ಇರಲಿ.) ಹೀಗಾಗಿ ನಮಗೆ ಕರ್ಫ್ಯೂ ಪಾಸಗಳನ್ನು ನೀಡಲಾಗಿದೆ. ನಾವು ಸಹ ಕೆಲವು ಸಂದರ್ಭಗಳಲ್ಲಿ ಪೊಲೀಸರಿಂದ ಪ್ರಶ್ನೆಗಳನ್ನು ಎದುರಿಸಿದ್ದೇವೆ. ಕೆಲವು ಸಂದರ್ಭಗಳಲ್ಲಿ ಪೊಲೀಸರು ನಮ್ಮಮೇಲೆಯು ಲಾಠಿ ಪ್ರಯೋಗಿಸಲು ಮುಂದಾಗಿದ್ದರು!, ಆದರೆ ಪರಿಚಿತ ಪೊಲೀಸರು ನಮ್ಮ ರಕ್ಷಣೆಗೆ ಬಂದಿದ್ದರಿಂದ ನಾವು ಲಾಠಿ ಏಟಿನಿಂದ ತಪ್ಪಿಸಿಕೊಂಡಿದ್ದೇವೆ.)
ಇಂತವರಿಗೆ ಯಾವ ಭಾಷೆಯಲ್ಲಿ ತಿಳಿಹೇಳಬೇಕು?. ತಿಳುವಳಿಕೆ ನೀಡುವ ಸಂದರ್ಭದಲ್ಲಿ ಪೊಲೀಸರು ದಂಡಿಸರಿಬಹದು!, ಆದರೆ ಇದನ್ನು ನಾನು ಸಮರ್ಥನೆಮಾಡುವುದಿಲ್ಲ. ಅಗತ್ಯಿದ್ದಾಗ ವೈದ್ಯಕೀಯ ಕಾರಣಕ್ಕೆ, ಜೀವನಾವಶ್ಯಕ ಔಷಧಿ, ಮಾತ್ರೆಗಳನ್ನು ಖರೀದಿಸಲು ಅವಕಾಶವಿದೆ. ಬೆಳಿಗ್ಗೆ ೧೦ರವರೆಗೂ ಅವಕಾಶ ಮಾಡಿಕೊಡಲಾಗಿದೆ. ಈಸಮಯದಲ್ಲಿ ಓಡಾಡಲು ಯಾರ ಅಭ್ಯಂತರ ಇರುವುದಿಲ್ಲ. ಆದರೆ ಈಬಗ್ಗೆ ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ.
“ಕೊರೊನಾ ಬಿಕ್ಕಟ್ಟಿನ ಈ ಸಂದರ್ಭದಲ್ಲಿ, ಹಗಲಿರುಳು ಸೇವೆ ಸಲ್ಲಿಸುತ್ತಿರುವ ಪೊಲೀಸರು, ಕೊರೊನಾ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ವೈದ್ಯರು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಕೆಲಸ ಮಾಡುತ್ತಿದ್ದಾರೆ. ವೈದ್ಯಕೀಯ ಸೌಲಭ್ಯಗಳ ಕೊರತೆಯ ನಡುವೆಯೂ ಕೊರೊನಾ ಪೀಡಿತರ ಚಿಕಿತ್ಸೆಗಾಗಿ ಶ್ರಮ ಪಡುತ್ತಿದ್ದಾರೆ. ಜಿಲ್ಲೆಯ ರಾಣೇಬೆನ್ನೂರು ಹಾಗೂ ಹಿರೇಕೆರೂರುಗಳಲ್ಲಿ ಲಾಕ್‌ಡೌನ್ ನಿರ್ಭಂಧಿಸುವ ವೇಳೆ ಸ್ಯಾನಿಟೈಜರ್ ಹಾಗೂ ಮಾಸ್ಕ್‌ಗಳ ಸಂಬಂಧಿಸಿದವರು ಪೂರೈಸದ ಕಾರಣಕ್ಕೆ ತಮ್ಮ ಜೇಬಿನಿಂದ ದುಡ್ಡು ಖರ್ಚುಮಾಡಿಕೊಂಡು ಪೊಲೀಸರು ಸ್ಯಾನಿಟೈಜರ್ ಹಾಗೂ ಮಾಸ್ಕ್‌ಗಳ ಧರಿಸಿ ಕರ್ತವ್ಯ ನಿರ್ವಹಿಸಿದರು. ಇಂತವರನ್ನು ಗುರುತಿಸಿ ಸೂಕ್ತ ಸೌಲಭ್ಯಗಳನ್ನು ನೀಡುವುದು ಸರ್ಕಾರದ ಆದ್ಯ ಕರ್ತವ್ಯವಾಗಿದೆ.
ಇವರಂತೆ ಆಶಾ ಕಾರ್ಯಕರ್ತರು, ಪಂಚಾಯತ್ ಮಟ್ಟದ ಆರೋಗ್ಯ ಕಾರ್ಯಕರ್ತರು ಕೂಡಾ ಕೊರೊನಾ ನಿಯಂತ್ರಣ ಮಾಡಲು ಹೋರಾಟ ನಡೆಸುತ್ತಿದ್ದಾರೆ. ಜನರಿಗೆ ಅಗತ್ಯ ಮಾಹಿತಿಗಳನ್ನು ಮನೆ ಮನೆಗೆ ತಲುಪಿಸುತ್ತಿದ್ದಾರೆ. ಇಂತವರಿಗೂ ಸರ್ಕಾರ ಸೂಕ್ತ ಸೌಲಭ್ಯಗಳನ್ನು ಒದಗಿಸಿಕೊಡಬೇಕಿದೆ.
ಲಾಕ್‌ಡೌನ್ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುವಲ್ಲಿ ಸೈ ಎನಿಸಿಕೊಂಡಿರುವ ಪೊಲೀಸ್ ಇಲಾಖೆ, ಈ ನಿಟ್ಟಿನಲ್ಲಿ ಕೈಗೊಂಡಿರುವ ಕ್ರಮಗಳು ಅತ್ಯಂತ ಶ್ಲಾಘನೀಯ. ಅಷ್ಟೇ ಅಲ್ಲದೇ ಮಾರಕ ಕೊರೊನಾ ವೈರಸ್ ಕುರಿತು ಜನಜಾಗೃತಿ ಮೂಡಿಸುವಲ್ಲಿಯೂ ಪೊಲೀಸರು ನಿರತರಾಗಿದ್ದಾರೆ.
ಕೊರೊನಾ ವೈರಸ್ ಕುರಿತು ಜನಜಾಗೃತಿ ಮೂಡಿಸಲು ಪೊಲೀಸ್ ಇಲಾಖೆ ಇನ್ನಿಲ್ಲದ ಕಸರತ್ತು ನಡೆಸಿದೆ. ಲಾಕ್‌ಡೌನ್ ಸಮಯದಲ್ಲಿ ಮನೆಯಿಂದ ಹೊರಗೆ ಬರದಂತೆ ಜನರಲ್ಲಿ ಮನವಿ ಮಾಡುತ್ತಿರುವ ಪೊಲೀಸರು, ಲಾಕ್‌ಡೌನ್ ಆದೇಶ ಉಲ್ಲಂಘಿಸಿದವರಿಗೆ ಬೆತ್ತದ ರುಚಿಯನ್ನೂ ತೋರಿಸುತ್ತಿದ್ದಾರೆ. ಕೊರೊನಾ ವೈರಸ್ ವಿರುದ್ಧದ ಈ ಹೋರಾಟದಲ್ಲಿ ಅತ್ಯಂತ ಮುಂಚೂಣಿಯಲ್ಲಿ ನಿಂತಿರುವ ಪೊಲೀಸ್ ಇಲಾಖೆಗೆ ಅದೆಷ್ಟು ಸಲಾಂ ಹೇಳಿದರೂ ಕಡಿಮೆಯೇ. ಸಂಕಷ್ಟದ ಸಮಯದಲ್ಲಿ ಜನರೊಂದಿಗೆ ಸಂಯಮದಿಂದ ವರ್ತಿಸಿ ಮಾರಕ ವೈರಾಣು ಕುರಿತು ಜಾಗೃತಿ ಮೂಡಿಸುತ್ತಿರುವ ಪೊಲೀಸರ ಕಾರ್ಯ ಶ್ಲಾಘನೀಯ.
ಮಾಲತೇಶ ಅಂಗೂರ, ಹಾವೇರಿ..

Show More

Related Articles

Leave a Reply

Your email address will not be published. Required fields are marked *

Back to top button
Close