ಕೆಟ್ಟಿರುವ ವಾಲ್ ದುರಸ್ತಿ ಪಡೆಸುತ್ತಿರುವ ವಾಲ್‌ಮ
ಹಾವೇರಿ: ಕೊರೊನಾ ಲಾಕ್‌ಡೌನ್ ಘೋಷಣೆಯಾದಾಗಿನಿಂದ ಹಲವು ಹತ್ತು ಸಂಕಷ್ಟಗಳ ನಡುವೆ ಜನರ ಸಂಕಷ್ಟಗಳಿಗೆ ಸ್ಪಂದಿಸುತ್ತಾ ನಾನಾ ಇಲಾಖೆಗಳ ಹಲವಾರು ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಕಾರ್ಯನಿರ್ವಹಿಸುತ್ತಾ ಬಂದಿದ್ದಾರೆ. ಇವರಲ್ಲಿ ಪ್ರಮುಖವಾಗಿ ನಗರಸಭೆಯ ಪೌರಕಾರ್ಮಿಕರು ಹಾಗೂ ನೀರು ಸರಬರಾಜು ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ವಾಲ್‌ಮೆನ್‌ರುಗಳ ಕಾರ್ಯ ಮೆಚ್ಚಲೇಬೇಕಿದೆ.
ಮಳೆ ಎನ್ನದೇ, ಸುಡು ಬಿಸಿಲನ್ನು ಲೆಕ್ಕಿಸದೇ ವಾಲ್‌ತಿರುವುವ ಪಾನಾಗಳನ್ನು ಸೈಕಲ್ ಮೇಲೆ, ಬೈಕ್‌ಗಳ ಮೇಲೆ ಇಟ್ಟುಕೊಂಡು ತಾವು ಕಾರ್ಯನಿರ್ವಹಿಸುವ ವಾರ್ಡಗಳಲ್ಲಿ ನೀರು ಸರಬರಾಜು ಮಾಡುವ ವಾಲ್‌ಮನ್‌ರಗಳಷ್ಟು ಟೀಕೆಗೆ ಒಳಗಾದವರು ಬೇರ‍್ಯಾರು ಇಲ್ಲವೇನೋ? . ಅಷ್ಟು ಟೀಕೆಗಳನ್ನು ಇವರು ಎದುರಿಸುತ್ತಾರೆ.
ಎಲ್ಲಿ ಯಾವಾಗ ಯಾವ ಪೈಪು ಒಡೆಯುತ್ತದೆಯೋ ಗೊತ್ತಿಲ್ಲ, ನಗರದ ೩೧ ವಾರ್ಡುಗಳ ಸದಸ್ಯರು ನೀರು ಸರಬರಾಜಿಗೆ ಸಂಬಂಧಿಸಿದಂತೆ ಇವರಿಗೆ ಕರೆಮಾಡುತ್ತಾರೆ, ಸದಸ್ಯರಿಂದ , ಅಧಿಕಾರಿಗಳಿಂದ ಹಲವಾರು ಬಾರಿ ನಿಂದನೆ, ಅವಮಾನಗಳಿಗೆ ಗುರಿಯಾಗಿ ಇವರು ತಾಳ್ಮೆಯಿಂದ ಕಾರ್ಯನಿರ್ವಹಿಸುತ್ತಾ ಇರುವ ನೀರಿನ ಲಭ್ಯತೆಯಲ್ಲಿಯೇ ನಗರದ ಜನತೆ ನೀರಿನ ದಾಹ ತೀರಿಸುತ್ತಾ ಬಂದಿದ್ದಾರೆ.
ನಗರದಲ್ಲಿ ಶುದ್ಧ ನೀರಿನ ಘಟಕಗಳು ಇವೆ, ಕಲವು ಜನರು ಈಶುದ್ಧ ನೀರಿನ ಮೊರೆ ಹೋಗುತ್ತಾರೆ, ಆದರೆ ಬಹುತೇಕ ಜನರು ನಗರಸಭೆಯ ವಾಲ್‌ಮನ್‌ಗಳು ಪೂರೈಸುವ ತುಂಗಭದ್ರಾ ನೀರನ್ನೆ ಅವಲಂಭಿಸಿದ್ದಾರೆ. ಈನೀರಿನಿಂದ ತಯಾರಿಸುವ ಅಡುಗೆ ರುಚಿಯಾಗಿರುತ್ತದೆ, ಕುಡಿಯಲು ನೀರು ಬಹಳ ಬಹಳ ಆರೋಗ್ಯಪೂರ್ಣವಾಗಿರುತ್ತದೆ. ಆದರೆ ವಾಲ್‌ಮನ್‌ರುಗಳ ಜೀವನ ಮಾತ್ರ ಕಹಿಯಾಗಿದೆ.
ಅನೇಕ ಸಂದರ್ಭಗಳಲ್ಲಿ ನೀರು ಸರಬರಾಜಿಗೆ ಸಂಬಂಧಿಸಿದಂತೆ ಇವರ ಮೇಲೆ ಹಲ್ಲೆಗಳು ನಡೆದಿವೆ. ಇತ್ತೀಚೆಗೆ ಶಿವಾಜಿನಗರದ ನಗರಸಭಾ ಸದಸ್ಯೆಯ ಪತಿ ಓರ್ವ ವಾಲ್‌ಮನ್ ಮೇಲೆ ಹಲ್ಲೆ ನಡೆಸಿದ್ದ , ಹೀಗೆ ಈರೀತಿಯಹಲ್ಲೆ, ನಿಂದನೆ, ಬೇಗುಳ ತಿನ್ನುವು ಪ್ರಕರಣಗಳು ನಡೆಯುತ್ತಲೇ ಇರುತ್ತವೆ.
ಸ್ಥಳೀಯ ನಗರಸಭೆಯ ನೀರು ಸರಬರಾಜು ವಿಭಾಗದಲ್ಲಿ ಗುತ್ತಿಗೆ ಆಧಾರದ ಮೇಲೆ ವಾಲ್‌ಮನ್‌ರೆಂದು ಕೆಲಸ ಮಾಡುತ್ತಿರುವ ೩೫ಕ್ಕೂ ಹೆಚ್ಚು ವಾಲ್‌ಮನ್‌ರುಗಳಿದ್ದು, ಈಗಾಗಲೇ ಕರ್ಜಗಿಯ ವರದಾನದಿಯಲ್ಲಿ ನೀರಿನ ಸಂಗ್ರಹ ಕಡಿಮೆಯಾದ ಪರಿಣಾಮ ಅಲ್ಲಿಂದ ನಿರು ಸರಬರಾಜು ನಿಂತಿದೆ. ಕಂಚಾರಗಟ್ಟಿಯ ಬಳಿ ತುಂಗಭದ್ರಾ ನದಿಯಿಂದ ಮಾತ್ರ ನಗರಕ್ಕೆ ನೀರು ಸರಬರಾಜಾಗುತ್ತಿದೆ. ಇಲ್ಲಿಂದ ಸರಬರಾಜಾಗುವ ನೀರನ್ನು ಸರದಿಯ ಪ್ರಕಾರ ನಗರದ ೩೧ವಾಡುಗಳಿಗೆ ಪೂರೈಕೆಮಾಡಲಾಗುತ್ತಿದೆ. ಸದ್ಯಕ್ಕೆ ೧೨ದಿನಗಳಿಗೊಮ್ಮೆ ನಗರಕ್ಕೆ ನೀರು ಸರಬರಾಜು ಮಾಡಲಾಗುತ್ತಿದೆ.
ನಗರದ ೩೧ವಾರ್ಡುಗಳಿಗೆ ನೀರು ಸರಬರಾಜು ಕೆಲಸವನ್ನು ಮೇಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ವಾಲ್‌ಮೆನ್‌ರುಗಳಿಗೆ ಕಳೆದ ನಾಲ್ಕು ತಿಂಗಳಿಂದ ಸಂಬಳ ಪಾವತಿಯಾಗಿಲ್ಲ!. ಇಂತ ಸಂಕಟ ಸ್ಥಿತಿಯಲ್ಲಿಯು ಕಾರ್ಯನಿರ್ವಹಿಸುತ್ತಿರುವ ವಾಲ್‌ಮೆನ್‌ರುಗಳ ಈಸಂದರ್ಭದಲ್ಲಿ ಜೀವನ ನಿರ್ವಹಣೆ ಮಾಡುವುದು ಕಷ್ಟವಾಗಿದೆ.
ಇವರುಗಳಿಗೆ ಇತ್ತೀಚೆಗೆ ಒಂದು ತಿಂಗಳ ಸಂಬಳವನ್ನು ನೀಡಲಾಗಿದೆಯಂತೆ, ಅದರಿಂದ ಹೇಗೋ ಜೀವನ ನಡೆಸುತ್ತಾ ಬಂದಿರುವ ಇವರಿಗೆ ಕಳೆದ ೪ ತಿಂಗಳಿಂದ ಸಂಬಳ ಇವರ ಕೈಸೇರಿಲ್ಲ. ನಾಲ್ಕು ತಿಂಗಳಿಂದ ಸಂಬಳ ಇಲ್ಲದ ಕಾರಣ ಮನೆನಡೆಸುವುದು ಕಷ್ಟವಾಗಿದೆ. ಕಿರಾಣಿ ತರುವುದು, ತರಕಾರಿ, ಮನೆ ಕರ್ಚು ನಿರ್ವಹಿಸುವುದು ಸಹ ಕಷ್ಟವಾಗಿದೆಯಂತೆ.
ನಾಲ್ಕು ತಿಂಗಳಿಂದ ಸಂಬಳವಿಲ್ಲದೇ ಕಾರ್ಯರ್ವಹಿಸುತ್ತಿರುವ ವಾಲ್‌ಮನ್‌ರುಗಳು ಜನರ ನೀರಿನ ದಾಹವನ್ನು ಸಾಧ್ಯವಾದಮಟ್ಟಿಗೆ ತೀರಿಸುತ್ತಾ ಬಂದಿದ್ದಾರೆ. ಆದರೆ ಇವರ ಹಸಿವಿನ ದಾಹ ತೀರಿಸುವುದು ಸಂಬಂಧಿಸಿದವರ ಕರ್ತವ್ಯವಾಗಿದೆ. ನಗರದ ೩೧ವಾರ್ಡಗಳಲ್ಲಿ ಹಗಲು-ರಾತ್ರಿಎನ್ನದೆ ಓಡಾಡಿ ಜನರ ನೀರಿನ ದಾಹ ತೀರಿಸುವ ಹೊರಗುತ್ತಿಗೆ ಕಾರ್ಮಿಕರಾಗಿರುವ ವಾಲ್‌ಮೆನ್‌ರುಗಳು ಕೊರೊನಾ ಸೋಂಕು ಹರಡದಂತೆ ತಡೆಯುವ ನಿಟ್ಟಿನಲ್ಲಿ ನಾವೇಲ್ಲಾ ಮನೆ ಸೇರಿದ್ದೇವೆ, ಆದರೆ ವಾಲ್‌ಮನ್‌ರುಗಳ ಮಾತ್ರ ನಗರದಲ್ಲಿ ಓಡಾಡಿ ಒಡೆದಿರುವ ಪೈಪ್‌ಗಳನ್ನುದುರಸ್ತಿಮಾಡುವುದು, ವಾಲ್‌ಗಳ ರಿಪೇರಿ ಮಾಡುವುದು, ಅಧಿಕಾರಿಗಳು ಕರೆದಲ್ಲಿ ಓಡುವುದು, ಸದಸ್ಯರು ಕರೆದಲ್ಲಿ ಹೋಗುತ್ತಾ ಕಾರ್ಯನಿರ್ವಹಿಸುತ್ತಿದ್ದಾರೆ.ಇವರಿಗೊಂದು ಸಲಾಮ್. ಇವರ ಸಂಕಷ್ಟಗಳಿಗೆ ಸರಕಾರ, ಸಮಾಜ ಸ್ಪಂದಿಸಬೇಕಿದೆ.