Breaking News

ಲಾಕ್‌ಡೌನ್‌ಗೆ ಬೆಲೆ ಇಲ್ಲವೇ…? ನಿರ್ಬಂಧದ ನಡುವೆ ಹಾವೇರಿ ತಾಲೂಕಿನ ಮೇವುಂಡಿಯ ಬಳಿ ನಡೆದಿದೆ ರಸ್ತೆ ಕಾಮಗಾರಿ!, ಸಂಬಂಧಪಟ್ಟವರು ಯಾರ್ರೀ…?

 ಲಾಕ್‌ಡೌನ್‌ಗೆ ಬೆಲೆ ಇಲ್ಲವೇ…? ನಿರ್ಬಂಧದ ನಡುವೆ ಹಾವೇರಿ ತಾಲೂಕಿನ ಮೇವುಂಡಿಯ
ಬಳಿ ನಡೆದಿದೆ ರಸ್ತೆ
ಕಾಮಗಾರಿ!, ಸಂಬಂಧಪಟ್ಟವರು ಯಾರ್ರೀ…?
ಹಾವೇರಿ: ಕೊರೊನಾಕ್ಕೆ ವಿಶ್ವಕ್ಕೆ ವಿಶ್ವವೇ ತಲ್ಲಣ ಗೊಂಡಿದೆ. ಹೇಗಾದರು ಆಗಲಿ
ಒಟ್ಟಾರೆ ಈರೋಗ ಹರಡದಂತೆ ಆದರೆ ಸಾಕೇಂದು  ಭಾರತ ಸರ್ಕಾರದ ಪ್ರಧಾನ ಮಂತ್ರಿ ನರೇಂದ್ರ
ಮೋದಿಯವರು ಲಾಕ್‌ಡೌನ್ ಘೋಷಣೆ ಮಾಡಿ ಇದೀಗ ನಾಲ್ಕಾರುದಿನಗಳು ಕಳೆದಿವೆ.  ದೇಶ-ರಾಜ್ಯ
ಸ್ವಯಂ ಕರ್ಫ್ಯೂ ನಿರ್ಬಂಧಕ್ಕೆ ಒಳಗಾಗಿ ಹೊರಗಡೆ ಯಾರು ಸಹ ಓಡಾದಂತೆ ನಿರ್ಬಂದ
ವಿಧಿಸಲಾಗಿದೆ. ಆದರೆ ಈನಿರ್ಬಂಧವನ್ನು ಉಲ್ಲಂಘಿಸಿ ತಾಲೂಕಿನ ಮೇವುಂಡಿ ಬಳಿ ಮೇವುಂಡಿ
-ಕೆಮ್ಮಣ್ಣಗುಂಡಿ ರಸ್ತೆ ಕಾಮಗಾರಿ ನಡೆದಿದೆ.
ಈ ಕಾಮಗಾರಿಯನ್ನು ಹತ್ತಾರು ಕಾರ್ಮಿಕರು ಯಂತ್ರದ ಸಹಾಯದಿಂದ ಕೈಗೊಂಡಿದ್ದು,  ರಸ್ತೆ
ಕಾಮಗಾರಿ  ಕೈಗೊಂಡಿರುವ ದೃಶ್ಯಗಳನ್ನು ಮಾ.೨೯ರಂದು ಭಾನುವಾರ ಅಪರಾಹ್ನ
೧೧-೩೦ರಸುಮಾರಿಗೆ ಗ್ರಾಮಸ್ಥರು ವಿಡಿಯೋ ಚಿತ್ರೀಕರಣ ಮಾಡಿದ್ದಾರೆ. ಕಾಮಗಾರಿಯ ವಿಡಿಯೋ
ಚಿತ್ರಣವನ್ನು ನೋಡಬಹುದಾಗಿದೆ.
ಈ ಕಾಮಾಗಾರಿ ಯಾವ ಇಲಾಖೆಗೆ ಬರುತ್ತದೆಯೋ..?  ಗೊತ್ತಿಲ್ಲ.  ಈಕಾಮಗಾರಿ
ನಡೆಯುತ್ತಿರುವ ಸ್ಥಳದಲ್ಲಿ ಹಾಕಲಾಗಿದ್ದ ಕಾಮಗಾರಿಯ ನಿರ್ವಹಣೆಯ ಬ್ಯಾನರನ್ನು ಸಹ
ಕಿತ್ತೆಸೆಯಲಾಗಿದೆಯಂತೆ!.
ಈ ಕಾಮಗಾರಿಗೆ ಸಂಬಂಧಿಸಿದ ಅಧಿಕಾರಿಗಳು, ಇಂಜನಿಯರುಗಳು ಏನುಮಾಡುತ್ತಿದ್ದಾರೆ?.
ಸರಕಾರದ ಕಾಮಗಾರಿಗೆ ಒಂದು ನ್ಯಾಯವಾದರೇ ನಮಗೊಂದು ನ್ಯಾಯವೇ?.  ಜನತಾ ಕರ್ಫ್ಯೂ
ಈಕಾಮಗಾರಿಗೆ ಸಂಬಂಧ ಪಡುವುದಿಲ್ಲವೇ? ಎಂದು ಮೇವುಂಡಿ ಗ್ರಾಮದ ಗ್ರಾಮಸ್ಥರು
ಪ್ರಶ್ನಿಸಿದ್ದಾರೆ. ಸರಕಾರದ ನಿರ್ಬಂಧ ನಡುವೆ ನಡೆದಿರುವ ಕಾಮಗಾರಿಯ ಬಗ್ಗೆ ತೀವೃ
ಆಕ್ರೋಶ  ವ್ಯಕ್ತಪಡಿಸಿದ್ದಾರೆ. ಸಂಬಂಧಿಸಿದ ಅಧಿಕಾರಿಗಳು ಈಕಾಮಗಾರಿ ತಮಗೆ
ಸಂಬಂಧವಿದ್ದರೆ ಕ್ರಮ ಕೈಗೊಳ್ಳಲು ಸಾಧ್ಯವಿದ್ದರೇ, ಈಹೊತ್ತಿನಲ್ಲಿ ಕೈಗೊಂಡಿರುವ
ಈಕಾಮಗಾರಿಯ ಹಿಂದಿರುವ ಪ್ರಭಾವಿ ಯಾರು? ಎನ್ನುವುದನ್ನು ಪತ್ತೆ ಹಚ್ಚಿ ಅಂತವರ ಮೇಲೆ
ಕ್ರಮ ಕೈಗೊಳ್ಳಬೇಕೆನ್ನುವುದು ಗ್ರಾಮಸ್ಥರ ಆಗ್ರಹವಾಗಿದೆ.ಕ್ರಮ ಜರುಗಿಸುವುದು,
ಬಿಡುವುದು ಅಧಿಕಾರಿಗಳಿಗೆ ಬಿಟ್ಟಿರುವ ವಿಷಯವಾಗಿದೆ.
Show More

Related Articles

Leave a Reply

Your email address will not be published. Required fields are marked *

Back to top button
Close