ಹಾವೇರಿ: ತಾಲೂಕಾ ದಂಡಾಧಿಕಾರಿ ಹಾಗೂ ವ್ಯೆದ್ಯಾಧಿಕಾರಿಯ ನಡುವೆ ಮಾತಿಗೆ ಮಾತು ಬೆಳೆದು ಇಬ್ಬರ ನಡುವೆ ಮಾರಾಮಾರಿ ನಡೆದಿರುವ ಘಟನೆ ಜಿಲ್ಲೆಯ ಹಾನಗಲ್ಲ ತಾಲೂಕಿನ
ತಿಳುವಳ್ಳಿ ಗ್ರಾಮದಲ್ಲಿ ಭಾನುವಾರ ವರದಿಯಾಗಿದೆ.
ಕೊರೊನಾ ಸೋಂಕು ಹರಡುವುದನ್ನು ತಡೆಯಲು ಶ್ರಮಿಸಬೇಕಿದ್ದ ಅಧಿಕಾರಿಗಳು ಬಡಿದಾಡಿಕೊಂಡ ಘಟನೆ ಚರ್ಚೆಗೆ ಗ್ರಾಸವಾಗಿದೆ.
ತಿಳವಳ್ಳಿಗ್ರಾಮದ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭಾನುುವಾರ
ಮಧ್ಯಾಹ್ನ ಹಾನಗಲ್ ತಹಶೀಲ್ದಾರ ಎರ್ರಿಸ್ವಾಮಿ.ಪಿ.ಎಸ್ ಭೇಟಿ ನೀಡಿದ್ದರು. ತಹಶೀಲ್ದಾರ ಭೇಟಿ ವೇಳೆ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ವೈದ್ಯ ಡಾ.ರಾಘವೇಂದ್ರ ಆಸ್ಪತ್ರೆಯಲ್ಲಿ ಇರಲಿಲ್ಲವೆಂದು, ಡಾ.ರಾಘವೇಂದ್ರ ಆಸ್ಪತ್ರೆಯಲ್ಲಿ ಇಲ್ಲದಿರುವದನ್ನು
ತಹಶೀಲ್ದಾರ ಎರ್ರಿಸ್ವಾಮಿ ಪ್ರಶ್ನಿಸಿದ್ದಾರೆ. ಅಷ್ಟರಲ್ಲಿ ಸ್ಥಳಕ್ಕೆ ಬಂದ ಡಾ.ರಾಘವೇಂದ್ರ ಮತ್ತು ತಹಶೀಲ್ದಾರ ಎರ್ರಿಸ್ವಾಮಿ ನಡುವೆ ಫೈಟಿಂಗ್ ನಡೆದಿದೆ. ನಂತರ ಆಸ್ಪತ್ರೆ ಮುಂಭಾಗದಲ್ಲಿ ವೈದ್ಯಾಧಿಕಾರಿ ಮತ್ತು ತಹಶೀಲ್ದಾರ ಇಬ್ಬರೂ ಪರಸ್ಪರ ಏಕವಚನದಲ್ಲಿ ಫೈಟಿಂಗ್ ಮಾಡಿದ್ದಾರೆ.
ಪರಿಸ್ಥಿತಿ ಪರಸ್ಪರ ಕೈ ಮಿಲಾಯಿಸುವ ಹಂತಕ್ಕೂ ಹೋಗಿತ್ತು. ಸ್ಥಳೀಯರು ಹಾಗೂ ಪೊಲೀಸರು ಇಬ್ಬರ ನಡುವಿನ ಫೈಟಿಂಗ್ ಶಮನಕ್ಕೆ ಪ್ರಯತ್ನಿಸಿದ್ರೂ ಕೆಲಕಾಲ ಇಬ್ಬರ ನಡುವಿನ ಏಕವಚನದ ಟಾಕ್ ಫೈಟ್ ಜೋರಾಗಿ ನಡೆದಿತ್ತು. ನಂತರ ಆಸ್ಪತ್ರೆಗೆ ಬೀಗ ಹಾಕಲಾಗಿದೆ. ಇಬ್ಬರ ಫೈಟಿಂಗ್ ನೋಡಿದ ಆಸ್ಪತ್ರೆಗೆ ಚಿಕಿತ್ಸೆಗೆ ಬಂದಿದ್ದ ರೋಗಿಗಳು ಕಂಗಾಲಾಗಿದ್ದರು.
ಹಾನಗಲ್ ತಹಶೀಲ್ದಾರ ತಮ್ಮ ಮೇಲೆ ದೈಹಿಕ ದೌರ್ಜನ್ಯ ಮಾಡಿದ್ದಲ್ಲದೇ ಮಾನಸಿಕ ಹಿಂಸೆ ನೀಡಿದ್ದಾರೆ ಎಂದು ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ರಾಘವೇಂದ್ರ ತಹಶೀಲ್ದಾರ ವಿರುದ್ಧ ಆರೋಪ ಮಾಡ್ತಿದ್ದಾರೆ.
ಆದರೆ ಡಾ.ರಾಘವೇಂದ್ರ ಆರೋಪವನ್ನು
ಲ್ಲಗಳೆದಿರೋವ ತಹಶೀಲ್ದಾರ ಜನರ ದೂರಿನ ಮೇರೆಗೆ ಆಸ್ಪತ್ರೆಗೆ ಭೇಟಿ ನೀಡಿದ್ದೆ. ಆಸ್ಪತ್ರೆಯಲ್ಲಿ ಇಲ್ಲದ್ದನ್ನ ಪ್ರಶ್ನಿಸಿದ್ದಕ್ಕೆ ಡಾ.ರಾಘವೇಂದ್ರ ಸುಳ್ಳು ಆರೋಪ ಮಾಡ್ತಿದ್ದಾರೆ ಎಂದು ತಿಳಿಸಿದ್ದಾರೆ.
ಆಸ್ಪತ್ರೆಯಲ್ಲಿ ಇಲ್ಲದ್ದನ್ನ ಪ್ರಶ್ನಿಸಿದ್ದಕ್ಕೆ ಡಾ.ರಾಘವೇಂದ್ರ ಸುಳ್ಳು ಆರೋಪ ಮಾಡ್ತಿದ್ದಾರೆ ಎಂದು ತಿಳಿಸಿದ್ದಾರೆ.