ಹಾವೇರಿ: ಸ್ಥಳೀಯ ನಗರಸಭೆಗೆ ಐವರು ಪ್ರಮುಖರನ್ನು ನಗರಸಭಾ ಸದಸ್ಯರನ್ನಾಗಿ ಸರ್ಕಾರವು ನಾಮನಿರ್ದೇಶನಮಾಡಿ ಆದೇಶ ಹೊರಡಿಸಿದೆ. ಶಿವರಾಜ ಸಿದ್ದಪ್ಪ ಮತ್ತಿಹಳ್ಳಿ, ಜಗದೀಶ ಬಲರಾಮಪ್ಪ ಮಲಗೋಡ, ರತ್ನಾ ಶಿವಾನಂದ ಭೀಮಕ್ಕನವರ, ಚಂದ್ರಶೇಖರ ರೇವಣಸಿದ್ದಪ್ಪ ಯರೇಶಿಮಿ, ಬಾಬುಸಾಬ ಫಜಲುಸಾಬ ಮೋಮಿನಗಾರ ಅವರುಗಳನ್ನು ನಾಮನಿರ್ದೇಶನಮಾಡಿ ನಗರಾಭಿವೃದ್ಧಿ ಇಲಾಖೆಯ ಸರಕಾರದ ಅಧೀನ ಕಾರ್ಯದರ್ಶಿ ಆದೇಶ ಹರಡಿಸಿದ್ದಾರೆ. ನಗರಸಭೆಗೆ ಸದಸ್ಯರೆಂದು ನೇಮಕಗೊಂಡಿರುವ ಐವರನ್ನು ಶಾಸಕ ನೆಹರು ಓಲೇಕಾರ ಅಭಿನಂದಿಸಿ ಗೌರವಿಸಿದರು, ತಮ್ಮನ್ನು ನಗರಸಭೆಗೆ ಸದಸ್ಯರೆಂದು ನೇಮಕಮಾಡಿದ ಶಾಸಕ ನೆಹರು ಓಲೇಕಾರ ಅವರಿಗೆ ನೂತನವಾಗಿ ನೇಮಕೊಂಡಿರುವ ಸದಸ್ಯರು ಕೃತಜ್ಞತೆ ಸಲ್ಲಿಸಿದ್ದಾರೆ.