ಹಾವೇರಿ

“೮೬ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಪ್ಲಾಸ್ಟಿಕ್ ಮುಕ್ತವಾಗಿಸಲು ಎಲ್ಲರೂ ಕೈಜೋಡಿಸಿ”

ಹೋಟೆಲ್ ಮಾಲಕರ ಸಭೆಯಲ್ಲಿ ನಗರಸಭೆ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಸೂಚನೆ

“೮೬ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಪ್ಲಾಸ್ಟಿಕ್ ಮುಕ್ತವಾಗಿಸಲು ಎಲ್ಲರೂ ಕೈಜೋಡಿಸಿ”
ಹೋಟೆಲ್ ಮಾಲಕರ ಸಭೆಯಲ್ಲಿ ನಗರಸಭೆ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಸೂಚನೆ
*ನಗರದ ಸ್ವಚ್ಛತೆಗೆ ಆದ್ಯತೆ ನೀಡುವುದರ ಜೊತೆ ಹೋಟೆಲ್‌ಗಳಲ್ಲಿ ನಾಡು-ನುಡು ಬಿಂಬಿಸುವ ಸಾಹಿತಿಗಳ ಸಾಲು-ಭಾವಚಿತ್ರ ಅಳವಡಿಸಿ

  • ಯಾಲಕ್ಕಿ ಕಂಪಿನ ನಗರ ಎನ್ನುವ ಖ್ಯಾತಿಯನ್ನು ಉಳಿಸುವ ಜವಾಬ್ದಾರಿ ನಮ್ಮೇಲ್ಲರ ಮೇಲಿದೆ * ಪ್ಲಾಸ್ಟಿಕ್ ಬಳಕೆ ಮಾಡಿದರೆ ದಂಡ ವಿಧಿಸಲಾಗುವುದು  

ಹಾವೇರಿ: ಐತಿಹಾಸಿಕ ನಗರವಾಗಿರುವ ಹಾವೇರಿನಗರದಲ್ಲಿ ಜರಗಲಿರುವ ೮೬ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನಕ್ಕೆ ಲಕ್ಷಗಟ್ಟಲೆ ಜನರು ಹಾವೇರಿನಗರಕ್ಕೆ ಬರುತ್ತಾರೆ. ಬಂದವರಿಗೆ ನಾವು ಸಾಹಿತ್ಯದ ರಸದೌತಣ ಉಣಬಡಿಸಬೇಕೆ ಹೊರತು ದುರ್ನಾತವನ್ನಲ್ಲ. ಈನಿಟ್ಟಿನಲ್ಲಿ ನಗರದ ಹೋಟೆಲ್ ಮಾಲಕರು ನಗರದ ಸ್ವಚ್ಛತೆಗೆ ಆದ್ಯತೆ ನೀಡಬೇಕು. ತಮ್ಮ ಹೋಟೆಲ್‌ಗಳಲ್ಲಿ ನಾಡು-ನುಡಿ ಬಿಂಬಿಸುವ ಸಾಹಿತಿಗಳ ಸಾಲನ್ನು ಹಾಕವುದರ ಜೊತೆಗೆ ಸಾಹಿತಿಗಳ ಭಾವಚಿತ್ರಗಳನ್ನು ಅಳವಡಿಸುವ ಮೂಲಕ ಸಾಹಿತ್ಯ ಸಮ್ಮೇಳನದ ಯಶಸ್ವಿಗೆ ಸಹಕರಿಸಿ ಎಂದು ನಗರಸಭಾ ಅಧ್ಯಕ್ಷ ಹಾಗೂ ಕನ್ನಡ ಸಾಹಿತ್ಯ ಸಮ್ಮೇಳನ ಮೆರವಣಿಗೆ ಸಮಿತಿಯ ಅಧ್ಯಕ್ಷ ಸಂಜೀವಕುಮಾರ ನೀರಲಗಿ ತಿಳಿಸಿದರು.
ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಹಾವೇರಿ ನಗರ ಸಭೆ ಕಾರ್ಯಾಲಯದಲ್ಲಿ ಹೋಟೆಲ್ ಮಾಲಕರ ಸಭೆಯಲ್ಲಿ ಮಾತನಾಡಿದ ಅವರು, ಯಾಲಕ್ಕಿ ಕಂಪಿನ ನಗರ ಎನ್ನುವ ಖ್ಯಾತಿಯನ್ನು ಹಾವೇರಿನಗರ ಹೊಂದಿದೆ. ಈಖ್ಯಾತಿಯನ್ನು ಉಳಿಸುವ ಜವಾಬ್ದಾರಿ ನಮ್ಮೇಲ್ಲರ ಮೇಲಿದೆ. ನಗರದ ಸ್ವಚ್ಛತೆಗೆ ಹೋಟೆಲ್ ಮಾಲಕರು ಮೊದಲ ಆದ್ಯತೆ ನೀಡಬೇಕು. ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ವಿವಿಧ ಜಿಲ್ಲೆಗಳಿಂದ ಹಾಗೂ ಬೇರೆ , ಬೇರೆ ರಾಜ್ಯಗಳಿಂದ ಸಾಹಿತಿಗಳು, ಸಾಹಿತ್ಯಾಸಕ್ತರು, ಜನ ಪ್ರತಿನಿಧಿಗಳು ಹಲವಾರು ಸಾಹಿತ್ಯಾಸಕ್ತರು ಬರುತ್ತಾರೆ. ಆದ ಕಾರಣ ಎಲ್ಲರೂ ಸಹಕಾರ ಕೊಡಬೇಕು ಎಂದು ಅವರು ಸೂಚಿಸಿದರು.
ನಗರದ ಹೋಟೆಲ್ ಹಾಗೂ ಬಾರ್ ಅಂಡ್ ರೆಸ್ಟೋರೆಂಟ್ ಮಾಲೀಕರು ಪ್ಲಾಸ್ಟಿಕ್ ಬಳಕೆಯನ್ನು ಮಾಡಬಾರದು, ಪ್ಲಾಸ್ಟಿಕ್ ಬಳಕೆಯಿಂದ ಪರಿಸರಕ್ಕೆ ಹಾನಿಯಾಗುತ್ತದೆ. ಒಂದುವೇಳೆ ಪ್ಲಾಸ್ಟಿಕ್ ಬಳಕೆ ಮಾಡಿದರೆ ದಂಡ ವಿಧಿಸಲಾಗುವುದು. ನಗರಸಭೆಯ ಪವರಾಯುಕ್ತರು, ಅಧಿಕಾರಿಗಳು ಯಾವಾಗಬೇಕಾದರು ನಿಮ್ಮ ಹೋಟೆಲ್‌ಗಳಲ್ಲಿ ಪರಿಶೀಲಿಸಬಹುದು. ಆಗ ಪ್ಲಾಸ್ಟಿಕ್ ಸಿಕ್ಕರೆ ದಂಡ ವಿಧಿಸಲಾಗುವುದು. ಆಗ ಯಾರ ವಸೂಲಿ ತಂದರು ಕೇಳುವುದಿಲ್ಲ ಎಂದು ಸಂಜೀವಕುಮಾರ ನೀರಲಗಿ ಎಚ್ಚರಿಕೆ ನೀಡಿದರು.
ಸಾಹಿತ್ಯ ಸಮ್ಮೇಳದಲ್ಲಿ ತಮ್ಮ ಅಂಗಡಿಗಳನ್ನು ಸ್ವಚ್ಛವಾಗಿ, ಸುಂದರವಾಗಿ ಕಾಣುವಂತೆ ಅಲಂಕಾರವನ್ನು ಮಾಡಬೇಕು. ೮೬ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಯಾಗಿಸುವ ನಿಟ್ಟಿನಲ್ಲಿ, ಹಾವೇರಿ ನಗರ ಸುಂದರವಾಗಿ ಕಾಣಲು ತಾವೂ ಎಲ್ಲರೂ ಕಾರಣಿಕರ್ತರಾಗಬೇಕು. ಯಾರು ಟ್ರೇಡ್ ಲೈಸೆನ್ಸ್ ತಗೆದುಕೊಂಡಿಲ್ಲ ಂತವರು ಲೈಸನ್ಸ್ ತೆಗೆದುಕೊಳ್ಳಬೇಕು. ಸಾಹಿತ್ಯಸಮ್ಮೇಳನ ಪ್ಲಾಸ್ಟಿಕ್ ಮುಕ್ತವಾಗಿ ನಡೆಸುವ ನಿಟ್ಟಿನಲ್ಲಿ ತಮ್ಮ ಸಹಕಾರ, ಜನರ ಸಹಕಾರ ಬಹಳಮುಖ್ಯವಾಗಿದೆ ಎಂದು ನಗರಸಭಾ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಕೋರಿದರು.
ಈ ಸಂದರ್ಭದಲ್ಲಿ ನಗರ ಸಭೆ ಪೌರಾಯುಕ್ತ ಪಿ.ಎಂ. ಚಲವಾದಿ ಸೇರಿದಂತೆ ನಗರದ ಹೋಟೆಲ್ ಮಾಲಕರು ಉಪಸ್ಥಿತರಿದ್ದರು.

Show More

Related Articles

Leave a Reply

Your email address will not be published. Required fields are marked *

Back to top button
Close