ಹಾವೇರಿ

ಹಾವೇರಿನಗರಸಭೆಯ ವ್ಯವಸ್ಥಾಪಕನ ಮೇಲೆ ಮಾರಣಾಂತಿಕ ಹಲ್ಲೆ, ಕಿರಣ ಬಡಮ್ಮನವರ ಸೇರಿ ಐವರ ಮೇಲೆ ದೂರು

ಹಾವೇರಿನಗರಸಭೆಯ ವ್ಯವಸ್ಥಾಪಕನ ಮೇಲೆ ಮಾರಣಾಂತಿಕ ಹಲ್ಲೆ, ಕಿರಣ ಬಡಮ್ಮನವರ ಸೇರಿ ಐವರ ಮೇಲೆ ದೂರು
ಹಾವೇರಿ: ಇಲ್ಲಿನ ನಗರಸಭೆಯ ಕಚೇರಿ ವ್ಯವಸ್ಥಾಪಕ ಮರಿಯಪ್ಪ ಮುಗಳಿ ಎನ್ನುವವರ ಮೇಲೆ ಶುಕ್ರವಾರ ಮಾರಣಾಂತಿಕವಾಗಿ ಹಲ್ಲೆಮಾಡಲಾಗಿದ್ದು, ಈಬಗ್ಗೆ ಹಲ್ಲೆನಡೆಸಿದ ಕಿರಣ
ಬಮ್ಮೊಣ್ಣನವರ ಸೇರಿದಂತೆ ಐವರಮೇಲೆ ದೂರು ನೀಡಲಾಗಿದೆ.
ವ್ಯವಸ್ಥಾಪಕ ಮರಿಯಪ್ಪ ಮುಗಳಿಯವರ ಬಲಗೈನ ಎರಡು ಬೆರಳುಗಳನ್ನು ಮುರಿಯಲಾಗಿದ್ದು,
ಹಾಗೂ ತಲೆಗೆ ಬಲವಾಗಿ ಹೊಡೆಯಲಾಗಿದ್ದು, ತೀವೃವಾಗಿ ಗಾಯಗೊಂಡಿರುವ ಮುಗಳಿಯವರನ್ನು
ಇಲ್ಲಿನ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.  ಬೆರಳುಗಳಿಗೆ ಹಾಗೂ ಕೈಗೆ ತೀವೃವಾಗಿ
ಗಾಯಗಳಾಗಿರುವ ಕಾರಣಕ್ಕೆ ಮುಗಳಿಯವರ ಬೆರಳುಗಳಿಗೆ ಹಾಗೂ ಕೈಗೆ ಪ್ಲಾಸ್ಟರ್ ಹಾಕಿ
ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆಯ ಹಿನ್ನಲೆ: ನಗರಸಭೆಯಲ್ಲಿ ಶ್ರೀಮತಿ ಗಂಗಮ್ಮ ಅಂಗಡಿ ಎನ್ನುವ ಮಹಿಳೆ ಕಂಪೂಟರ್
ಆಪರೇಟರ್ ಎಂದು  ಏಜೆನ್ಸಿಯೊಂದರ ಮೂಲಕ ಕಾರ್ಯನಿರ್ವಹಿಸುತ್ತಿದ್ದು, ಇವರಿಗೆ ಕಳೆದ
ಎರಡು ತಿಂಗಳಿಂದ ವೇತನವನ್ನು ನೀಡಲಾಗಿಲ್ಲ ಎಂದು, ಈಬಗ್ಗೆ ಶ್ರೀಮತಿ ಗಂಗಮ್ಮ ಅಂಗಡಿ
ಯವರ ಪತಿ ಕಿರಣ ಬಮ್ಮೊಣ್ಣನವರ ಶುಕ್ರವಾರ ಏಕಾಏಕಿ ಪೌರಾಯುಕ್ತರ ಕಚೇರಿಗೆ  ಬಂದು ವೇತನ
ನೀಡದ ಬಗ್ಗೆ ವಿಚಾರಿಸಿದ್ದಾರೆ. ಪೌರಾಯುಕ್ತರು  ಈಬಗ್ಗೆ ವಿಚಾರಿಸಲು ಕಚೇರಿ
ವ್ಯವಸ್ಥಾಪಕ ಮರಿಯಪ್ಪ ಮುಗಳಿ ಅವರನ್ನು ತಮ್ಮ ಚೇಂಬರಿಗೆ ಕರಿಸಿಕೊಂಡು ವಿಚಾರಿಸಲು
ಮುಂದಾಗಿದ್ದಾರೆ.
ಈವೇಳೆ ಕಿರಣ ಮತ್ತು ಅವರ ಐವರು ಸ್ನೇಹಿತರ ನಡುವೆ ಮಾತಿನ ಚಕಮಕಿ ನಡೆದು ಮುಗಳಿಯವರ
ಮೇಲೆ ಏಕಾಏಕಿ ಪವರಾಯುಕ್ತರ ಸಮ್ಮುಖದಲ್ಲಿಯೇ ಹಲ್ಲೆ ನಡೆದಿದೆ. ಈಸಂದರ್ಭದಲ್ಲಿ
ಮುಗಳಿಯವರ ಕೈಬೆರಳುಗಳನ್ನು ಬಲವಾಗಿ ತಿರುವಿ ಮುರಿಯಲು ಯತ್ನಿಸಲಾಗಿದೆ. ಗದ್ದಲ-ಗಲಾಟೆ ಜೋರಾದ ಹಿನ್ನಲೆಯಲ್ಲಿ ಜನರು-ಕಚೇರಿಯ ಸಿಬ್ಬಂದಿ  ಸೇರಿ ಜಗಳ ಬಿಡಿಸಿ  ಹಲ್ಲೆಗೊಳಗಾದ ಮುಗಳಿಯವರನ್ನು ಚಿಕಿತ್ಸೆಗೆ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈವೇಳೆ
ಪೌರಾಯುಕ್ತರು ಮೂಖಪ್ರೇಕ್ಷಕರಾಗಿದ್ದರು.
ಹಲ್ಲೆಖಂಡಿಸಿ ನೌಕರರ ಪ್ರತಿಭಟನೆ: ಕಚೇರಿಯ ವ್ಯವಸ್ಥಾಪಕ ಮರಿಯಪ್ಪ ಮುಗಳಿಯವರ ಮೇಲಿನ
ಹಲ್ಲೆ ಖಂಡಿಸಿ ನಗರಸಭೆಯ ನೌಕರರು ಹಾಗೂ ಪೌರಕಾರ್ಮಿಕರು ಕಚೇರಿಯ ಮುಭಾಗದಲ್ಲಿ ದಿಢೀರ ಮುಷ್ಕರ ನಡೆಸಿ, ಹಲ್ಲೆಮಾಡಿದ ಕಿರಣ ಬಮ್ಮೊಣ್ಣನವರ ಸೇರಿದಂತ ಹಲ್ಲೆಮಾಡಿದ
ಆರೋಪಿಗಳನ್ನು ತಕ್ಷಣ ಬಂಧಿಸಬೇಕು, ನಗರಸಭೆಯ ನೌಕರರಿಗೆ ಭದ್ರತೆ ನೀಡಬೇಕು ಎಂದು ಆಗ್ರಹಿಸಿದರು. ಈಬಗ್ಗೆ ಜಿಲ್ಲಾಧಿಕಾರಿಗಳಿಗೆ ಹಾಗೂ ನಗರಸಭೆಯ ಅಧ್ಯಕ್ಷ ಸಂಜೀವಕುಮಾರ
ನೀರಲಗಿ ಅವರಿಗೆ ಮನವಿ ಅರ್ಪಿಸಲಾಯಿತು. ಮನವಿ ಸ್ವೀಕರಿಸಿದ ನಗರಸಭೆಯ ಅಧ್ಯಕ್ಷ
ನೀರಲಗಿಯವರು , ಹಲ್ಲೆಮಾಡಿರುವ ಘಟನೆ ಖಂಡನಾರ್ಹವಾಗಿದೆ. ನಾನು ನಗರಸಭಾ ಸದಸ್ಯರು ನಿಮ್ಮ ಜೊತೆಗೆ ಇದ್ದೇವೆ, ಧೈರ್ಯದಿಂದ ಇರಿ, ಹಲ್ಲೆಮಾಡಿರುವವರ ಮೇಲೆ
ಕ್ರಮಜರಿಗಿಸುತ್ತೇವೆ. ಪ್ರತಿಭಟನೆ ಕೈಬಿಟ್ಟು ಕೆಲಸಕ್ಕೆ ಮರಳಿ ಎಂದು ಮನವಿ
ಮಾಡಿಕೊಂಡರು. ಮನವಿಗೆ ಸ್ಪಂದಿಸಿದ ನೌಕರರು ಪ್ರತಿಭಟನೆ ಮೊಟಕುಗೊಳಿಸಿ ಕೆಲಸಕ್ಕೆ
ಹಾಜರಾದರು.
ಆಸ್ಪತ್ರೆಗೆ ಅಧಿಕಾರಿಗಳು, ಮುಖಂಡರ ಭೇಟಿ: ಈಮಧ್ಯೆ ಜಿಲ್ಲಾ ಆಸ್ಪತ್ರೆಯಲ್ಲಿ
ಚಿಕಿತ್ಸೆ ಪಡೆಯುತ್ತಿದ್ದ ಮುಗಳಿಯವರನ್ನು ನಗರಸಭೆಯ ಪೌರಾಯುಕ್ತ ಪರಶುರಾಮ ಚಲವಾದಿ, ಕರ್ನಾಟಕ ರಾಜ್ಯ ಪೌರಸೇವಾ ನೌಕರರ ಸೇವಾ ಸಂಘದ ಏಸು ಬೆಂಗಳೂರ, ಆರ್.ಆರ್.ಮಂಜೋಜಿ,
ದಲಿತ ಸಂಘಟನೆಗಳ ಮುಖಂಡರಾದ ಉಡಚಪ್ಪ ಮಾಳಗಿ, ಅಶೋಕ ಮೆರಣ್ಣನವರ ಸೇರಿದಂತೆ ಅನೇಕರು
ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.
ರಾಜಿಮೂಲಕ ಪ್ರಕರಣ ಇತ್ಯರ್ಥಕ್ಕೆ ಯತ್ನ: ನಗರಸಭೆಯ ಕಚೇರಿ ವ್ಯವಸ್ಥಾಪಕರ ಮೇಲೆ ನಡೆದ ಹಲ್ಲೆ ಪ್ರಕರಣವನ್ನು ರಾಜಿ ಸಂಧಾನದ ಮೂಲಕ ಮುಕ್ತಾಯಗೊಳಿಸುವ ಮಾತುಗಳು ನಗರಸಭೆಯ ಆವರಣದಲ್ಲಿ ಕೇಳಿ ಬಂದವು.  ಕೆಲವರು ಈಪ್ರಕರಣದಲ್ಲಿ ಹಲ್ಲೆಮಾಡಿದ ಯುವಕನ ಭವಿಷ್ಯಹಾಳುಗುತ್ತದೆ ಎಂದು, ಈಪ್ರಕರಣವನ್ನು ರಾಜಿ ಸಂಧಾನದ ಮೂಲಕ ಬಗೆಹರಿಸುವ ಮಾತುಗಳನ್ನಾಡಿದರೆಂದು, ಈಸೂತ್ರಕ್ಕೆ ನೌಕರರ ಸಂಘಟನೆಗಳು ಮುಖ್ಯಸ್ಥರು ಬಗ್ಗದೇ,ಹಲ್ಲೆಗೊಳಗಾದ ವ್ಯವಸ್ಥಾಪಕ ಮುಗಳಿಯವರ ಪರ ನಿಂತು ಪ್ರಕರಣ ದಾಖಲಿಸುತ್ತೇವೆ, ದಯಮಾಡಿ
ಯಾರು ನಮ್ಮಗಳ ಮಧ್ಯ ಬರಬೇಡಿ, ಪದೇ ಪದೆ ಈರೀತಿಯ ಘಟನೆಗಳು ನಡೆಯುತ್ತಲೆಇವೆ.
ನೌಕರರಿಗೆ ರಕ್ಷಣಿ ಇಲ್ಲದಂತಾಗಿದೆ ಎಂದು ತಿಳಿಸಿದರೆಂದು ತಿಳಿದು ಬಂದಿದೆ. ಈಬಗ್ಗೆ
ಶುಕ್ರವಾರ ಸಂಜೆವೇಳೆಗೆ ಪೌರಾಯುಕ್ತರು ಪ್ರಕರಣ ದಾಖಲಿಸಲು ಪೊಲೀಸ್ ಠಾಣೆಗೆ
ತೆರಳಿದರೆಂದು ತಿಳಿದು ಬಂದಿದೆ.
ಹಲ್ಲೆಗೆ ವ್ಯಾಪಕ ಖಂಡನೆ: ನಗರಸಭೆಯ ವ್ಯವಸ್ಥಾಪಕರ ಮೇಲೆ ನಡೆದಿರುವ ಹಲ್ಲೆಗೆ
ವ್ಯಾಪಕವಾಗಿ ಖಂಡನೆ ವ್ಯಕ್ತವಾಗಿದೆ. ಹೊರಗುತ್ತಿಗೆಯ ಮೂಲಕ ಸಿಬ್ಬಂದಿಯನ್ನು
ಕೆಲಸಕ್ಕೆ ಕಳಿಸಿದದ್ದ ಏಜೆನ್ಸಿಯವರು ವೇತನ ನೀಡಬೇಕು, ಅವರನ್ನು ವೇತನ ಕೇಳುವುದನ್ನು
ಬಿಟ್ಟು ಪೌರಾಯುಕ್ತರನ್ನು, ಕಚೇರಿಯ ವ್ಯವಸ್ಥಾಪಕರನ್ನು ಸಂಬಳ ನೀಡುವಂತೆ ಕೇಳಿ
ಮೇಲಾಗಿ ಮಾರಣಾಂತಿಕವಾಗಿ ಹಲ್ಲೆಮಾಡಿರುವು ಗುಂಪಿನ ಕೃತ್ಯವನ್ನು ವಿವಿಧ  ನೌಕರರ
ಸಂಘಟನೆಗಳು ತೀವೃವಾಗಿ ಖಂಡಿಸಿವೆ. ಈಬಗ್ಗೆ ಸೂಕ್ತ ಕ್ರಮಜರುಗಿಸಲು ಆಗ್ರಹಿಸಿವೆ.
Show More

Related Articles

Leave a Reply

Your email address will not be published. Required fields are marked *

Back to top button
Close