ಫೆಲೋಶಿಪ್ ಗೌರವಕ್ಕೆ ಪಾತ್ರರಾದ ಡಾ. ರಾಜಕುಮಾರ ಮರೋಳ
ಅವರಿಗೆ ಸನ್ಮಾನ
ಹಾವೇರಿ : ಮಕ್ಕಳ ಆರೋಗ್ಯ ಮತ್ತು ಸುಧಾರಣೆ ಕುರಿತು ಪ್ರಬಂಧ ಮಂಡಿಸಿ, ಭಾರತೀಯ ವೈದ್ಯಕೀಯ ಸಂಘದ ಫೆಲೋಶಿಪ್ ಗೌರವಕ್ಕೆ ಪಾತ್ರರಾದ ಡಾ. ರಾಜಕುಮಾರ ಮರೋಳ ಅವರನ್ನು
ಜಿಲ್ಲಾ ಭಾರತ ವಿಜ್ಞಾನ ಸಮಿತಿ ಮತ್ತು ಜಿಲ್ಲಾ ಮಕ್ಕಳ ಸಾಹಿತ್ಯ ವೇದಿಕೆಯಿಂದ
ಸನ್ಮಾನಿಸಲಾಯಿತು.
ಆರಂಭದಲ್ಲಿ ಮಾತನಾಡಿದ ಜಿಲ್ಲಾ ಭಾರತ ಜ್ಞಾನ ವಿಜ್ಞಾನ ಸಮಿತಿಯ ಅಧ್ಯಕ್ಷರಾದ ಬಿ.ಬಸವರಾಜ ಅವರು ನೆಗಳೂರಂತಹ ಪುಟ್ಟ ಗ್ರಾಮದಿಂದ ಬೆಳೆದ ಡಾ. ಮರೋಳರು ರಾಷ್ಟ್ರಮಟ್ಟಕ್ಕೆ ಗುರುತಿಸಲ್ಪಡುವುದು ಹೆಮ್ಮೆಯ ಸಂಗತಿಯಾಗಿದೆ. ಸಮಾಜ ಆರೋಗ್ಯ ಕುರಿತುಇನ್ನಿಷ್ಟು ಶೋಧನೆ ಸಾಧನೆ ಮಾಡುವಂತಾಗಲೆ ಎಂದರು.
ಸನ್ಮಾನಕ್ಕೆ ಕೃತಜ್ಞತೆಯನ್ನು ಸೂಚಿಸಿ ಮಾತನಾಡಿದ ಡಾ. ರಾಜಕುಮಾರ ಮರೋಳ ಅವರು ಮಕ್ಕಳೇ ದೇಶದ ಮತ್ತು ಕುಟುಂಬದ ಆಸ್ತಿ. ಮಕ್ಕಳಿಂದಲೇ ಸರ್ವ ಸುಖ ನೆಮ್ಮದಿ ಸಿಗುವಾಗ, ಕೋವಿಡ್ ಅಂತಹ ದುರಿತ ಕಾಲದಲ್ಲಿ ನಾವು ಹೆಚ್ಚೆಚು ಜಾಗೃತರಾಗಿರಬೇಕು. ನನ್ನ ಸಂಶೋಧನೆಯ ಆಶೆಯವು ಕೂಡ ಅದೇ ಆಗಿದೆ. ಅದಕ್ಕೆ ರಾಷ್ಟ್ರ ಮಟ್ಟದಲ್ಲಿ ಗೌರವ ಪ್ರಾಪ್ತವಾದದ್ದು, ಹಿರಿಯರ ಪುಣ್ಯ ಎಂದರು.
ಈ ಸಂದರ್ಭದಲ್ಲಿ ಹಿರಿಯ ಸಾಹಿತಿ ಸತೀಶ್ ಕುಲಕರ್ಣಿ,ಭಾರತ ವಿಜ್ಞಾನ ಸಮಿತಿಯ ರಾಜ್ಯ ಸಮಿತಿ ಸದಸ್ಯೆ ಶ್ರೀಮತಿ ರೇಣುಕಾಗು ಡಿಮಮಕ್ಕಳ ಸಾಹಿತ್ಯ ವೇದಿಕೆ ಗೌರವಾಧ್ಯಕ್ಷರಾದ ಜೆ. ಎಂ ಮಠದ, ಕಾರ್ಯದರ್ಶಿ ಮಾಲತೇಶ ಕರ್ಜಗಿ, ಕಲಾ ಬಳಗದ ಪೃಥ್ವಿರಾಜ ಬೆಟಗೇರಿ ಹಾಗೂ ಆಸ್ಪತ್ರೆಯ ಸಿಬ್ಬಂದಿ ವರ್ಗಉಪಸ್ಥಿತರಿದ್ದರು.