“ವೀರ ವಿರಾಗಿ ಬಾಹುಬಲಿ” ಬೈಲಾಟದ ಓದು ಕಾರ್ಯಕ್ರಮದಲ್ಲಿ ಡಾ.
ಬಾಳಾಸಾಹೇಬ ಲೋಕಾಪೂರ
ಹಾವೇರಿ : ನಾಟಕಕಾರ, ರಂಗಕರ್ಮಿ ಎಂ.ಎಸ್.ಮಾಳವಾಡರ ವೀರ ವಿರಾಗಿ ಬಾಹುಬಲಿ ಎಂಬ ಬಯಲಾಟ
ಹಸ್ತ ಪ್ರತಿಯ ಓದು ಮತ್ತು ಚರ್ಚೆ ಇಲ್ಲಿಯ ಹಂಚಿನಮನಿ ಆರ್ಟ ಗ್ಯಾಲರಿಯಲ್ಲಿ ಜರುಗಿತು.
ಖ್ಯಾತ ಕಲಾದಂಬರಿಕಾರ, ಕೇಂದ್ರ ಸಾಹಿತ್ಯ ಅಕಾಡೆಮಿಯ ಸದಸ್ಯರಾದ ಡಾ. ಬಾಳಾಸಾಹೇಬ
ಲೋಕಾಪೂರ ಅಧ್ಯಕ್ಷತೆ ವಹಿಸಿ ಮಾತನಾಡಿ ಹತ್ತಾರು ಕಲಾವಿದರು ಮತ್ತು ಸಾಹಿತಿಗಳು
ಬಯಲಾಟವೊಂದರ ಹಸ್ತ ಪ್ರತಿಯನ್ನು ಸಂಭಾಷಣೆಯ ರೂಪದಲ್ಲಿ ಓದಿ ಚರ್ಚಿಸುವುದು ವಿಭಿನ್ನ ಅನುಭವ ನೀಡುವ ಕೆಲಸ. ಬಯಲಾಟದ ಓದಂತು ಓದು ಕಲ್ಪನಾ ಶಕ್ತಿಗೆ ಪುಷ್ಠಿ ಕೊಡುವಂತಹದು ಎಂದರು.
ಸಹಬಾಳ್ವೆ ಮತ್ತು ಸಹನೆಯನ್ನು ಯಾವಾಗಲೂ ಮಂಡಿಸಿದ ಜಾನಪದ ರಂಗಭೂಮಿ ಈಗಲೂ ಪ್ರಸ್ತುತ. ಬಾಹುಬಲಿ ಬಯಲಾಟ ಇಂದಿನ ಯುದ್ಧ ಪಿಪಾಸು ಕಾಲದಲ್ಲಿ ಅಹಿಂಸಾ ಸಂದೇಶವನ್ನು ಕೊಡುವಂತಹದ್ದು. ನಾಟಕಕಾರ ಮಾಳವಾಡರು ಎಲ್ಲ ಕಾಲಕ್ಕೂ ಸಲ್ಲುವ ಭರತೇಶ ಬಾಹುಬಲಿ ಪ್ರಸಂಗವನ್ನು ಸೂಕ್ತ ಸಂದರ್ಭದಲ್ಲಿ ಹೊರ ತರುತ್ತಿರುವುದು ದೊಡ್ಡ ಪ್ರಯತ್ನ ಎಂದೂ ಡಾ. ಬಾಳಾಸಾಹೇಬ ನುಡಿದರು.
ವೀರ ವಿರಾಗಿ ಬಾಹುಬಲಿ ಎಂಬ ಹದಿನೆಂಟು ಅಂಕಗಳ ಬಯಲಾಟವನ್ನು 18 ಜನ ಕಲಾವಿದರು ಒದೊಂದೆ ಅಂಕಗಳನ್ನು ಕೇಳುಗರ ಮನ ತುಂಬುವಂತೆ ಓದಿದರು. ಬಯಲಾಟದ ಓದಿಗೆ ಚಾಲನೆಯನ್ನು ಬಾಗಲಕೋಟೆ ಬಯಲಾಟ ಅಕಾಡೆಮಿಯ ಸದಸ್ಯರಾದ ಶಿವಾನಂದ ಶೆಲ್ಲಿಕೇರಿ ನೀಡಿದರು.
ಸಾಹಿತಿ ಕಲಾವಿದರುಗಳಾದ ಡಾ. ಜಗನ್ನಾಥ ಗೇನಣ್ಣನವರ, ಮಾಲತೇಶ ಅಂಗೂರ, ಶಿವನಗೌಡ್ರಹೊಟ್ಟೇಗೌಡ್ರ, ಕೆ.ಆರ್ ಹಿರೇಮಠ, ಜಿ.ಎಂ. ಓಂಕಾರಣ್ಣನವರ. ಡಾ. ಶೋಭಾ ತಪಸಿ, ಪರಿಮಳಾ ಜೈನ್, ರೇಖಾ ಭೈರಕ್ಕನವರ, ನಂದಾ ಭಜಂತ್ರಿ, ಮಹಾವೀರ ದೊಡ್ಡಮನಿ, ವರ್ಧಮಾನ
ಛಬ್ಬಿ,ಬಸವರಾಜ ಶಿಗ್ಗಾವಿ, ವಿರೇಶ ಬಡಿಗೇರ, ರಾಜಶೇಖರ ಮಾಳವಾಡ ಮುಂತಾದವರು ಬಯಲಾಟ ಹಸ್ತಪ್ರತಿ ಓದಿದರು.
ಆತಿಥಿಗಳಾಗಿ ದುತ್ತರಗಿ ಪ್ರತಿಷ್ಠಾನದ ಸದಸ್ಯರಾದ ಚಂದ್ರಶೇಖರ ದೇಸಾಯಿ, ಹಾವೇರಿ
ಜಿಲ್ಲಾ ಜೈನ್ ಸಮಾಜದ ಅಧ್ಯಕ್ಷರಾದ ಮಾಣಿಕ್ಚಂದ ಲಾಡರ್, ನೇಮಿತಾಥ ದಿಗಂಬರ ಜೈನ ಸಮಾಜದ ಅಧ್ಯಕ್ಷರಾದ ವಿಜಯಕುಮಾರ ಸಾತಗೊಂಡ, ಆರ್ಟ ಗ್ಯಾಲರಿಯ ಕರಿಯಪ್ಪ ಹಂಚಿನಮನಿ ಮಾತನಾಡಿದರು.
ಜಿಲ್ಲೆಯ ಹಿರಿಯ ದೊಡ್ಡಾಟ ಕಲಾವಿದರುಗಳಾದ ನಾಗಪ್ಪ ಶಿಂಧೆ, ಫಕ್ಕೀರೇಶ ಬಿಶೆಟ್ಟಿ,
ಪರಮೇಶ್ವರಪ್ಪ ಕಡಳ್ಳಿ, ಮಹಾಂತೇಶ ನಿಂಬನಗೌಡ, ಶೇಕಪ್ಪ ಹೂಲಿಕಟ್ಟಿ ಹಾಗೂ ಕಲಾ ಬಳಗದ ಎಸರ. ಆರ್. ಹಿರೇಮಠ ಉಪಸ್ಥಿತರಿದ್ದರು. ಕಾರ್ಯಕ್ರಮದ ಆರಂಭದಲ್ಲಿ ಬಯಲಾಟ ಕಲಾವಿದರುಗಳಾದ ಬಸವರಾಜ ಶಿಗ್ಗಾಂವಿ, ವೀರೇಶ ಬಡಿಗೇರ ಅವರು ಬಯಲಾಟದ ಪದಗಳ ಮೂಲಕ
ವಚನಗಳನ್ನು ಪ್ರಸ್ತುತಪಡಿಸಿ ವಿಭಿನ್ನ ಅನುಭವ ನೀಡಿದರು.
ಶ್ರೀಮತಿ ಪರಿಮಳಾ ಜೈನ ಸ್ವಾಗತಿಸಿದರು. ಕಾರ್ಯಕ್ರಮವನ್ನು ವೀರೇಶ ಬಡಿಗೇರ
ನಡೆಸಿದರು. ಹಿರಿಯ ಸಾಹಿತಿ ಸತೀಶ ಕುಲಕರ್ಣಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಕೊನೆಯಲ್ಲಿ ಶ್ರೀಮತಿ ರೇಖಾ ಹಂಚಿನಮನಿ ವಂದಿಸಿದರು.