ಪ್ರೀತಿ ಅಂದ್ರೆ ಹೀಂಗೆನಾ?
ಪ್ರೀತಿ ಎಂದರೆ ಸೌಂದರ್ಯವಲ್ಲ , ಪ್ರೀತಿಸುವುದಾದರೆ ಸುಂದರಮಯವಾಗಿರುವರನ್ನ ಪ್ರೀತಿಸುವದಕ್ಕಿಂತ ನಮ್ಮ ಜೀವನ ಸುಂದರಮಯವಾಗಿಸುವರನ್ನ ಪ್ರೀತಿಸುವದು ಉತ್ತಮ. ಪ್ರೀತಿಸುವದೆಂದರೆ ಇರುವವರಿಗೂ ಒಬ್ಬರನ್ನೊಬ್ಬರನ್ನ ಅರ್ಥಮಾಡಿಕೊಂಡು ಹೊಂದಾಣಿಕೆಯಿಂದ ಬಾಳವುದು.
ಇಂದಿನ ದಿನಮಾನಗಳಲ್ಲಿ ಪ್ರೀತಿ-ಪ್ರೇಮದ ಅರ್ಥವನ್ನು ಅರಿಯದೆ ಪ್ರೇಮಿಗಳೆಹೆಚ್ಚು. ಇವತ್ತಿನ ನಲ್ಲ- ನಲ್ಲಿಯರು “ಮುಂಜ್ಯಾವು ಅರಳಿ ಸಂಜೆ ವೇಳೆ ಮುದುಡುವ ಹೂವಿನಂತೆ ಇವರ ಪ್ರೀತಿ”. ಮುಳ್ಳುಗಳಿಂದ ನಲಿಯುವಾ ಗುಲಾಬಿಯಂತೆ ಪ್ರೇಮಿಗಳು ಒಂದು ಕ್ಷಣ ನೋವು ನುಂಗಿ ನಗುತ್ತಾ ಇದ್ದಾರೆ ಅಂದ್ರೆ! ಅವರ ಸುತ್ತ ಜಾತಿ – ಧರ್ಮ ಹೆಗಲೇರಿ ಕುಳಿತಿದೆ.
ಮನಸ್ಸಿಗೆ ಹತ್ತಿರವಾದ ವರಿಗೆ ” ನಾನು ನಿನ್ನ ಪ್ರೀತಿಸುತ್ತಿದ್ದೇನೆ ” ಅಂತ ಮನಸಾರೆ ಹೇಳುವುದು ಧೈರ್ಯ ಇರದಿರುವಾಗ ಪ್ರೇಮ ಪತ್ರದ ಮೂಲಕ ಭಾವನೆಗಳನ್ನ ಹಂಚಿಕೊಳ್ಳುವ ಕಾಲವೊಂದಿತ್ತು .ಜಾತಿ -ಭೇದ ಮರೆತು ನೂರಾರು ವರ್ಷ ಸ್ವರ್ಗಸು ವನ್ನು ಅನುಭವಿಸುವ ಪ್ರೇಮಿಗಳು ಮುಪ್ಪಾಗುವರಿಗೂ ಕಾಣುತ್ತಿದ್ದೇವು , ಸಿಗದಿರುವ ಪ್ರೀತಿಗೆ ವಿಷ ಸೇವಿಸಿ ಆತ್ಮಹತ್ಯೆ ಗೆ ಶರಣಾಗುವರು,
ಆದರೆ ಇಂದಿನ ಪ್ರೀತಿ ಪ್ಯಾಶನ್ಗೆ ಮಾರು ಹೋಗಿ ಆಸ್ತಿ ಅಂತಸ್ತಿಗೆ ತುದಿಗಾಲ ಮೇಲೆ ನಿಂತಿದೆ . ಇತ್ತೀಚೆಗೆ ಪ್ರೇಮಿಗಳ ಪ್ರೀತಿ “ಯುಜ್ ಆಂಡ್ ಥ್ರೋ” ಆಗಿದೆ , ಒಬ್ಬರಗಿಂತ ಇನ್ನೊಬ್ಬರನ್ನ ಪ್ರೀತಿಸಿ ಅವಕಾಶ ವಾದಿಗಳಾಗಿ ಕೊನೆಗೆ ಮನಸಿರದವರ ಜೊತೆ ಮೋಹಿಸಿ ಮುದ್ದಾಡಿ ಬೇಸರದ ಜೀವನ ಬಯಸದೆ ಬರಮಾಡಿಕೊಂಡಿದ್ದಾರೆ .
ಶಂಕರ ಸಿ ಬಡಿಗೇರ.