ಕಲೆ ಸಾಹಿತ್ಯ

ನಾಮದೇವ ಕಾಗದಗಾರ ರ ‘ಬೆಗ್ಗರ್ ಲೈಫ್’ ಮಿಶ್ರಮಾಧ್ಯಮದ ಕಲಾಕೃತಿಗೆ ಅಂತರಾಷ್ಟ್ರೀಯ ಗ್ಲೋಬಲ್ ‘ಗೋಲ್ಡ್ ಅವಾರ್ಡ’

ನಾಮದೇವ ಕಾಗದಗಾರ ರ ‘ಬೆಗ್ಗರ್ ಲೈಫ್’ ಮಿಶ್ರಮಾಧ್ಯಮದ ಕಲಾಕೃತಿಗೆ ಅಂತರಾಷ್ಟ್ರೀಯ ಗ್ಲೋಬಲ್ ‘ಗೋಲ್ಡ್ ಅವಾರ್ಡ’
ಹಾವೇರಿ : ಜಿಲ್ಲೆಯ ರಾಣೆಬೆನ್ನೂರ ನಗರದ ವ್ಯಂಗ್ಯಚಿತ್ರಕಾರ, ವನ್ಯಜೀವಿ ಛಾಯಾಗ್ರಾಹಕ, ನಾಮದೇವ ಕಾಗದಗಾರ ರಚಿಸಿದ ‘ಬೆಗ್ಗರ್ ಲೈಫ್’ ಮಿಶ್ರಮಾಧ್ಯಮದ ಕಲಾಕೃತಿಗೆ *ಗ್ಲೋಬಲ್ ಗೋಲ್ಡ್ ಅವಾರ್ಡ* ಲಭಿಸಿದೆ.

ದೆಹಲಿಯ ಕ್ರಿಯೇಷನ್ ಸತ್ಯಾ ಗ್ಲೋಬಲ್ ಸೊಸೈಟಿಯು ಡಿಸೆಂಬರ್ 12 ರಿಂದ ಹದಿನೈದು ದಿನಗಳ ಕಾಲ ಆಯೋಜಿಸಿದ ಅಂತರಾಷ್ಟ್ರೀಯ ಆನ್ಲೈನ್ ಕಲಾ ಸ್ಪರ್ಧೆಯಲ್ಲಿ ಈ ವಿಶಿಷ್ಟ ಕಲಾಕೃತಿಗೆ ಗ್ಲೋಬಲ್ ‘ಗೋಲ್ಡ್ ಅವಾರ್ಡ’ ಲಭಿಸಿದೆ. 3ಅಡಿ ಉದ್ದ ಹಾಗೂ 2.5ಅಡಿ ಅಗಲವುಳ್ಳ ಈ ಕಲಾಕೃತಿಯು ಬಿಕ್ಷುಕರ ಬದುಕಿನ ಮಗ್ಗಲುಗಳನ್ನು ಬಿಂಬಿಸುತ್ತಿದೆ.

ಈ ಕಲಾಕೃತಿಯನ್ನು ಆಕ್ರ್ಯಾಲಿಕ್ ಕಲರ್, ಬಣ್ಣದ ಪೆನ್ಸಿಲ್ಸ್ ಹಾಗೂ ಕುರಿ ಉಣ್ಣೆ ಉಪಯೋಗಿಸಿ ರಚಿಸಲಾಗಿದೆ. ಈ ಸ್ಪರ್ಧೆಯಲ್ಲಿ ಅಮೇರಿಕಾ, ಸೌದಿಅರೇಬಿಯಾ, ಭಾರತ ಸೇರಿದಂತೆ ಹಲವು ರಾಷ್ಟ್ರಗಳ 100ಕ್ಕೂ ಕಲಾವಿದರು ಭಾಗವಹಿಸಿದ್ದರು.

Show More

Related Articles

Leave a Reply

Your email address will not be published. Required fields are marked *

Back to top button
Close